ಟ್ರಾಫಿಕ್ ಪೋಲಿಸ್ ಚಲನ್‌ ಮೇಲಿನ ಕೋಪಕ್ಕೆ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ!

ಸಂಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಿದ ಬಗ್ಗೆ ಕೋಪಗೊಂಡ ವ್ಯಕ್ತಿಯೊಬ್ಬರು ದೆಹಲಿಯ ಶೇಖ್ ಸರಾಯ್ ಹಂತ 1(Sheikh Sarai Phase 1) ರಲ್ಲಿ ಗುರುವಾರ ತಮ್ಮದೇ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ.

Updated: Sep 6, 2019 , 09:33 AM IST
ಟ್ರಾಫಿಕ್ ಪೋಲಿಸ್ ಚಲನ್‌ ಮೇಲಿನ ಕೋಪಕ್ಕೆ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ!

ನವದೆಹಲಿ: ಸಂಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಿದ ಬಗ್ಗೆ ಕೋಪಗೊಂಡ ವ್ಯಕ್ತಿಯೊಬ್ಬರು ತಮ್ಮದೇ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ದೆಹಲಿಯ ಶೇಖ್ ಸರಾಯ್ ಹಂತ 1(Sheikh Sarai Phase 1) ರಲ್ಲಿ ಗುರುವಾರ ನಡೆದಿದೆ.

ವರದಿಗಳ ಪ್ರಕಾರ, ಟ್ರಾಫಿಕ್ ಪೊಲೀಸರು ಗುರುವಾರ ಮೊದಲು ಬೈಕ್‌ಗೆ ಚಲನ್ ನೀಡಿದರು. ಅದರ ಬಗ್ಗೆ ಅಸಮಾಧಾನಗೊಂಡ ಆ ವ್ಯಕ್ತಿ ಬಳಿಕ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ.

ಅಗ್ನಿಶಾಮಕ ಇಲಾಖೆ ಕೂಡಲೇ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದೆ. ಸವಾರ ಮದ್ಯದ ಅಮಲಿನಲ್ಲಿದ್ದರಿಂದ ಈ ಕೃತ್ಯ ಎಸಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಸದ್ಯ ಸವಾರನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.