ಮಹಾಪಂಚಾಯತ್ಗೂ ಮುನ್ನ ಸಂಘಟನೆಗಳಲ್ಲಿ ಬಿರುಕು! ಬ್ಯಾರಿಕೇಡ್ ಮುರಿದ ರೈತರು ಪೊಲೀಸರ ವಶಕ್ಕೆ

ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಕಿಸಾನ್ ಮಹಾಪಂಚಾಯತ್‌ಗೂ ಮುನ್ನ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ವಿಭಜನೆಯ ಸುದ್ದಿ ಬರಲಾರಂಭಿಸಿದೆ. ಮಹಾಪಂಚಾಯತ್ ಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.

Written by - Bhavishya Shetty | Last Updated : Aug 22, 2022, 01:26 PM IST
    • ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಕಿಸಾನ್ ಮಹಾಪಂಚಾಯತ್‌
    • ಮಹಾಪಂಚಾಯತ್‌ಗೂ ಮುನ್ನ ಕೇಳಿಸುತ್ತಿದೆ ವಿಭಜನೆಯ ಸುದ್ದಿ
    • ಪ್ರತ್ಯೇಕತೆ ಘೋಷಿಸಿದ ರಾಕೇಶ್ ಟಿಕಾಯತ್!
ಮಹಾಪಂಚಾಯತ್ಗೂ ಮುನ್ನ ಸಂಘಟನೆಗಳಲ್ಲಿ ಬಿರುಕು! ಬ್ಯಾರಿಕೇಡ್ ಮುರಿದ ರೈತರು ಪೊಲೀಸರ ವಶಕ್ಕೆ title=
Farmers Protest

ನಿರುದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತರು ಇಂದು (ಆಗಸ್ಟ್ 22) ದೆಹಲಿಯ ಜಂತರ್ ಮಂತರ್ ತಲುಪುತ್ತಿದ್ದಾರೆ. ಜಂತರ್ ಮಂತರ್ ಪ್ರವೇಶಕ್ಕೆ ಪೊಲೀಸರಿಂದ ಅನುಮತಿ ಪಡೆದಿಲ್ಲವಾದರೂ ಸಹ, ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ‘ನಮ್ಮನ್ನು ಇಲ್ಲಿ ನಿಲ್ಲಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದೆ. ಈ ಮಧ್ಯೆ ಯುನೈಟೆಡ್ ಕಿಸಾನ್ ಮೋರ್ಚಾ ನಡುವಿನ ಒಡಕು ಸುದ್ದಿ ಮುನ್ನೆಲೆಗೆ ಬರಲು ಪ್ರಾರಂಭಿಸಿದೆ. 

ಇದನ್ನೂ ಓದಿ: ಭಾರತವನ್ನು ಸುತ್ತುವರೆದಿರುವ ಚೀನಾದ ‘String Of Pearls’ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

ಜಂತರ್ ಮಂತರ್‌ನಲ್ಲಿ ಆಯೋಜಿಸಿದ್ದ ಕಿಸಾನ್ ಮಹಾಪಂಚಾಯತ್‌ಗೂ ಮುನ್ನ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ವಿಭಜನೆಯ ಸುದ್ದಿ ಬರಲಾರಂಭಿಸಿದೆ. ಮಹಾಪಂಚಾಯತ್ ಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಕೂಡ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಆಯೋಜಿಸಿರುವ ಕಿಸಾನ್ ಮಹಾಪಂಚಾಯತ್ ನಿಂದಾಗಿ ದೆಹಲಿಯ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಕಿಸಾನ್ ಮಹಾಪಂಚಾಯತ್‌ನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಎಲ್ಲಾ ಗಡಿಗಳಿಗೆ ಹೋಗುವ ಮತ್ತು ಬರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಇದರಿಂದ ಹಲವೆಡೆ ಜಾಮ್‌ ಪರಿಸ್ಥಿತಿ ಉಂಟಾಗಿದ್ದು, ಜನರು ಪರದಾಡುತ್ತಿದ್ದಾರೆ.

ಇನ್ನು ದೆಹಲಿಯ ಗಡಿಯಲ್ಲಿ ರೈತರನ್ನು ತಡೆದಿದ್ದರಿಂದ ಪ್ರತಿಭಟನೆಗೆ ಬರುತ್ತಿದ್ದ ರೈತರು ಬ್ಯಾರಿಕೇಡಿಂಗ್ ಮುರಿದು ಒಳನುಗ್ಗಲು ಯತ್ನಿಸಿದ್ದಾರೆ. ಇದಾದ ನಂತರ ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಸಿಂಘು ಗಡಿಯಲ್ಲಿ ಪೊಲೀಸ್ ತಪಾಸಣೆ ವೇಳೆ ಬಸ್ ನಿಲ್ಲಿಸಲಾಗಿದೆ. 

ಇದನ್ನೂ ಓದಿ: ಜನರನ್ನು ಕರೆಳಿಸಿದ ಚೀನಾದ ಹೊಸ ನೀತಿ: ಕೊರೊನಾ ಮಧ್ಯೆ ನೆರೆರಾಷ್ಟ್ರ ಮಾಡಿದ ಕೆಲಸ ಏನುಗೊತ್ತಾ?

ಭಾನುವಾರ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುತ್ತಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ಗಾಜಿಯಾಬಾದ್ ಗಡಿಯಲ್ಲಿ ಬಂಧಿಸಿದ್ದರು. ಇದಾದ ಬಳಿಕ ಪೊಲೀಸರು ರಾಕೇಶ್ ಜೊತೆ ದೆಹಲಿಯ ಮಧು ವಿಹಾರ್ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸ್ ಠಾಣೆಯ ಹೊರಗೆ ರಾಕೇಶ್ ಟಿಕಾಯತ್ ಬೆಂಬಲಿಗರ ಗುಂಪು ಹೆಚ್ಚಾದಾಗ, ಪೊಲೀಸರು ಅವರನ್ನು ಬಿಡುಗಡೆಗೊಳಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News