ನವದೆಹಲಿ: UIDAI Reduces Verification Charges - ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಗ್ರಾಹಕರಿಗೆ ಆಧಾರ್ ಪರಿಶೀಲನೆಯ (Aadhaar Authentication) ಮೊತ್ತವನ್ನು ರೂ .20 ರಿಂದ ರೂ .3 ಕ್ಕೆ ಇಳಿಸಿದೆ. NPCI-IAMA ಆಯೋಜಿಸಿದ ಜಾಗತಿಕ ಫಿನ್‌ಟೆಕ್ ಫೆಸ್ಟ್ ಅನ್ನು ಉದ್ದೇಶಿಸಿ ಮಾತನಾಡಿರುವ UIDAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸೌರಭ್ ಗರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಆಧಾರ್ ನಿಂದ ಲಾಭ ಪಡೆಯುವ ಹಲವು ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ವೆರಿಫಿಕೆಶನ್ ರೇಟ್ ರೂ.20 ರಿಂದ ರೂ.3 ಕ್ಕೆ ಇಳಿಕೆ (UIDAI Reduces Verification Charges)
"ನಾವು ಪ್ರತಿ ಪರಿಶೀಲನೆ ದರವನ್ನು ರೂ 20 ರಿಂದ ರೂ 3 ಕ್ಕೆ ಇಳಿಸಿದ್ದೇವೆ. ಇದು ಸರ್ಕಾರವು ರಚಿಸಿದ ಡಿಜಿಟಲ್ ಮೂಲಸೌಕರ್ಯವನ್ನು ವಿವಿಧ ಏಜೆನ್ಸಿಗಳು ಮತ್ತು ಸಂಸ್ಥೆಗಳು ಉತ್ತಮವಾಗಿ ಬಳಸಿಕೊಳ್ಳುವುದನ್ನು ಖಾತ್ರಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಘನತೆ-ಗೌರವದ ಜೊತೆಗೆ ಜನರಿಗೆ ಜೀವನವನ್ನು ಸುಲಭಗೊಳಿಸಲು ಈ ಮೂಲಸೌಕರ್ಯಗಳನ್ನು ಬಳಸುವುದು ಅವಶ್ಯಕವಾಗಿದೆ" ಎಂದು ಗರ್ಗ್ ಹೇಳಿದ್ದಾರೆ.
99 ಕೋಟಿ ಜನರು ಬಳಸಿದ್ದಾರೆ (Aadhaar Used For 99 Crore e-KYC)
ಇದುವರೆಗೆ 99 ಕೋಟಿ ಇ-ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಗಳಿಗಾಗಿ ಆಧಾರ್ ವ್ಯವಸ್ಥೆಯನ್ನು ಬಳಸಲಾಗಿದೆ. ಯುಐಡಿಎಐ ಯಾರೊಂದಿಗೂ ಬಯೋಮೆಟ್ರಿಕ್ ಹಂಚಿಕೊಳ್ಳುವುದಿಲ್ಲ ಮತ್ತು ಅದರ ಎಲ್ಲಾ ಪಾಲುದಾರರು ಪ್ರಾಧಿಕಾರದಂತೆಯೇ ಅದೇ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ನಿರೀಕ್ಷಿಸುತ್ತದೆ.
ಹೊಸ ಆಧಾರ್ ಕಾರ್ಡ್ ಪಡೆಯಲು ನೀವು ಹಣ ಪಾವತಿಸಬೇಕಾಗಿಲ್ಲ. ಆದರೆ, ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಇ-ಮೇಲ್ ಇತ್ಯಾದಿಗಳನ್ನು ತಿದ್ದುಪಡಿ ಮಾಡಲು ಆಧಾರ್ ಅನ್ನು ನವೀಕರಿಸಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. Demographic Updateಗಾಗಿ ರೂ 50 ಮತ್ತು ಬಯೋಮೆಟ್ರಿಕ್ ಅಪ್‌ಡೇಟ್‌ಗಾಗಿ (Biometric Update) ರೂ 100 (ಜನಸಂಖ್ಯಾ ಅಪ್‌ಡೇಟ್‌ನೊಂದಿಗೆ / ಇಲ್ಲದೆ) ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ-m-aadhaar ಆಪ್‌ನಲ್ಲಿ ಅಗತ್ಯ ನಾಲ್ಕು ಅಂಕಿಯ ಸುರಕ್ಷತಾ ಪಿನ್
ಭಾರತದಲ್ಲಿ ಆಧಾರ್ ಅನಿವಾರ್ಯ ದಾಖಲೆಯಾಗಿದೆ
ಭಾರತದಲ್ಲಿ ಆಧಾರ್ ಕಡ್ಡಾಯ ದಾಖಲೆಯಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಯೋಜನೆಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿದೆ. 54 ಸಚಿವಾಲಯಗಳ ಸುಮಾರು 311 ಕೇಂದ್ರೀಯ ಯೋಜನೆಗಳು ಆಧಾರ್ ಬಳಸಿ ನೇರ ಲಾಭ ವರ್ಗಾವಣೆ (DBT) ವೇದಿಕೆಯ ಅಡಿಯಲ್ಲಿ ಬರುತ್ತವೆ.
ಸರ್ಕಾರವು ರೈತರಿಗಾಗಿ ನಡೆಸುತ್ತಿರುವ ಯೋಜನೆಗಳಾದ- PM-Kisan Nidhi Yojana ಆಧಾರ್ ವೇದಿಕೆಯನ್ನು ಆಧರಿಸಿದೆ, ಇದರ ಅಡಿಯಲ್ಲಿ ಸುಮಾರು 10 ಕೋಟಿ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಆಧಾರ್ ಪರಿಶೀಲನೆ ಎಂದರೆ ಯೋಜನೆಯ ಫಲಾನುಭವಿಯನ್ನು ಸರಿಯಾಗಿ ಗುರುತಿಸಲು ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತಿದೆ.
ಇದನ್ನೂ ಓದಿ-UIDAI ವಿಶೇಷ Alert! ನಿಮ್ಮ Aadhaar Card ನಕಲಿಯೇ ಅಥವಾ ಅಸಲಿಯೇ? ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.