ನವದೆಹಲಿ : ಇನ್ನು ಮುಂದೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಬದಲಾಯಿಸಬೇಕೆಂದರೆ ಶೇ.18 ಜಿಎಸ್ಟಿ ಪಾವತಿಸಬೇಕಿದೆ!
ಹೌದು, ಆಧಾರ್ ವಿವರಗಳನ್ನು ತಿದ್ದುಪಡಿ ಮಾಡಲು ಭಾರತ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಶೇ.18 ಜಿಎಸ್'ಟಿ ವಿಧಿಸಿದೆ.
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಲಿಂಗ ಮತ್ತು ಇಮೇಲ್ ವಿಳಾಸವನ್ನು ಅಪ್ ಡೇಟ್ ಅಥವಾ ತಿದ್ದುಪಡಿಯನ್ನು ಉಚಿತವಾಗಿ ಮಾಡುತ್ತಿದ್ದ ಯುಐಡಿಎಐ ಇದೀಗ 25 ರೂ.ಗಳ ಶುಲ್ಕ ವಿಧಿಸಲಿದೆ. ಬಯೋಮೆಟ್ರಿಕ್ ಅಪ್ ಡೇಟ್ ಗೂ ಅದೇ ಶುಲ್ಕವನ್ನು ಪಾವತಿಸಬೇಕಿದೆ.
ಆದರೆ, ಹೊಸ ಆಧಾರ್ ಕಾರ್ಡ್ ಮಾಡಿಸಲು ಮತ್ತು ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಸೇವೆಯು ಈ ಹಿಂದಿನಂತೆ ಉಚಿತವಾಗಿದೆ.
ಹಾಗೆಯೇ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಲು ನಿಗದಿಗಿಂತ ಹೆಚ್ಚಿನ ಹಣ ಪಡೆಯುತ್ತಿದ್ದ ಏಜೆಂಟರು ಮತ್ತು ಆಧಾರ್ ಕೇಂದ್ರಗಳ ವಿರುದ್ಧ ದೂರು ಸಲ್ಲಿಸಲು ಯುಐಡಿಎಐ ದೂರು ವೇದಿಕೆ ಆರಂಭಿಸಿದ್ದು, ಯಾವುದೇ ಅಧಾರ ಕೇಂದ್ರದಲ್ಲಿ ಅತಿಹೆಚ್ಚು ಹಣ ಕೇಳಿದರೆ, ಟೋಲ್ ಫ್ರೀ ಸಂಖ್ಯೆ 1947ಕ್ಕೆ ಕರೆ ಮಾಡಿ ಅಥವಾ help@uidai.gov.in ಇಮೇಲ್ ಮೂಲಕ ದೂರು ಸಲ್ಲಿಸಬಹುದು.