ನವದೆಹಲಿ: ಮೇಕ್ ಇಂ ಇಂಡಿಯಾ ಹಾಗೂ ಸ್ವಾವಲಂಭಿ ಭಾರತ್ ಮಿಷನ್ ಗೆ ಒಟ್ಟು ನೀಡುವ ಉದ್ದೇಶದಿಂದ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಹೌದು, ಸರ್ಕಾರಿ ಇ-ಮಾರುಕಟ್ಟೆ (Government e-Marketplace) ಮೇಲೆ ಇನ್ಮುಂದೆ ಉತ್ಪನ್ನಗಳ ನೋಂದಣಿ ಮಾಡಲು 'ಕಂಟ್ರಿ ಆಫ್ ಓರಿಜಿನ್' ಹೇಳುವುದು ಅನಿವಾರ್ಯವಾಗಿದೆ. ಹೀಗಾಗಿ ಎಲ್ಲಾ ಮಾರಾಟಗಾರರು ತಮ್ಮ ಉತ್ಪನ್ನದ ಮೂಲದ ದೇಶದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಉತ್ಪನ್ನ ಮತ್ತು ಉತ್ಪನ್ನದ ಮೂಲದ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡದಿದ್ದರೆ, ಉತ್ಪನ್ನವನ್ನು ಜಿಎಂ ಪ್ಲಾಟ್ಫಾರ್ಮ್ನಿಂದ ತೆಗೆದು ಹಾಕಲಾಗುವುದು ಎಂದು ಸರ್ಕಾರ ಹೇಳಿದೆ.
ಮಾಹಿತಿ ಅಪ್ಡೇಟ್ ಮಾಡಬೇಕಾಗಲಿದೆ
GeM ನ ಈ ನೂತನ ವೈಶಿಷ್ಯ ಜಾರಿಯಾಗುವುದಕ್ಕೂ ಮೊದಲು ಯಾವ ಮಾರಾಟಗಾರರು ತಮ್ಮ ತಮ್ಮ ಉತ್ಪನ್ನಗಳನ್ನು ಈಗಾಗಲೇ ಅಪ್ಲೋಡ್ ಮಾಡಿದ್ದಾರೆಯೋ ಅವರೂ ಕೂಡ ತಮ್ಮ ಉತ್ಪನ್ನದ ಮಾಹಿತಿಯನ್ನು ನವೀಕರಿಸಿ ಅದರಲ್ಲಿ ಕಂಟ್ರಿ ಆಫ್ ಓರಿಜಿನ್ ನಮೂದಿಸಬೇಕಾಗಲಿದೆ. ಇದಕ್ಕಾಗಿ ಅವರಿಗೆ ನಿರಂತರವಾಗಿ ರಿಮೈಂಡರ್ ಕಳುಹಿಸಲಾಗುವುದು ಎಂದು ಸರ್ಕಾರ ಹೇಳಿದೆ. ರಿಮೈಂಡರ್ ಕಳುಹಿಸಿದ ಬಳಿಕವೂ ಕೂಡ ತಮ್ಮ ಉತ್ಪನ್ನಗಳ ಮಾಹಿತಿಯನ್ನು ನವೀಕರಿಸಿ ಅಪ್ಲೋಡ್ ಮಾಡದೆ ಹೋದಲ್ಲಿ ಅಂತಹ ಉತ್ಪನ್ನ ಗಳನ್ನು ಪ್ಲಾಟ್ಫಾರ್ಮ್ ನಿಂದ ತೆಗೆದುಹಾಕಲಾಗುವುದು ಎಂದು ಸರ್ಕಾರ ಹೇಳಿದೆ. ಹೀಗಾಗಿ ಇನ್ಮುಂದೆ ಮಾರಾಟಗಾರರಿಗೆ ಅವರ ಉತ್ಪನ್ನ ಎಲ್ಲಿ ತಯಾರಿಸಲಾಗಿದೆ ಅಥವಾ ಉತ್ಪನ್ನವನ್ನು ಎಲ್ಲಿಂದ ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡುವುದು ಅನಿವಾರ್ಯವಾಗಲಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ (ಜಿಇಎಂ) 'ಮೇಕ್ ಇನ್ ಇಂಡಿಯಾ' ಮತ್ತು 'ಸ್ವಾವಲಂಬಿ ಭಾರತ'ವನ್ನು ಉತ್ತೇಜಿಸಲು ಈ ಕ್ರಮವನ್ನು ಕೈಗೊಂಡಿದೆ. ಉತ್ಪನ್ನದಲ್ಲಿ ಸ್ಥಳೀಯ ವಿಷಯ ಎಷ್ಟು ಇದೆ ಎಂಬುದನ್ನು ಸೂಚಿಸಲು ಜಿಎಂ ಒಂದು ನಿಬಂಧನೆಯನ್ನು ಸಹ ಮಾಡಿದೆ. ಹೊಸ ವೈಶಿಷ್ಟ್ಯದ ನಂತರ, ಇ-ಮಾರುಕಟ್ಟೆ ಸ್ಥಳದಲ್ಲಿ ನೋಂದಾಯಿಸಲಾದ ಪ್ರತಿಯೊಂದು ವಸ್ತುವಿನ ಮುಂದೆ 'ಕಂಟ್ರಿ ಆಫ್ ಒರಿಜಿನ್' ಮತ್ತು ಸ್ಥಳೀಯ ವಿಷಯದ ಶೇಕಡಾವಾರು ಮಾಹಿತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈಗ 'ಮೇಕ್ ಇನ್ ಇಂಡಿಯಾ' ಫಿಲ್ಟರ್ ಪೋರ್ಟಲ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಖರೀದಿದಾರರು ಈಗ ಕನಿಷ್ಠ 50 ಪ್ರತಿಶತ ಉತ್ಪನ್ನಗಳನ್ನು ಸ್ಥಳೀಯ ಪದಾರ್ಥಗಳೊಂದಿಗೆ ಖರೀದಿಸುವ ಆಯ್ಕೆಯನ್ನು ಹೊಂದಿರಲಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಾರ, ಜಿಇಎಂ ಮೊದಲಿನಿಂದಲೂ ಕೂಡ 'ಮೇಕ್ ಇನ್ ಇಂಡಿಯಾ' ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದೆ. ಇದರಿಂದ ಸಣ್ಣ ಮತ್ತು ಸ್ಥಳೀಯ ಮಾರಾಟಗಾರರಿಗೆ ಮಾರುಕಟ್ಟೆ ಸ್ಥಳದಿಂದ ಸಾರ್ವಜನಿಕ ಖರೀದಿಯಲ್ಲಿ ಭಾಗವಹಿಸಲು ಒಂದು ವೇದಿಕೆಯನ್ನು ಸಿಕ್ಕಂತಾಗಿದೆ. ಕೋವಿಡ್ -19 ರ ಯುಗದಲ್ಲಿ, ಸರ್ಕಾರಿ ಸಂಸ್ಥೆಗಳಿಗೆ ಉತ್ಪನ್ನಗಳ ತುರ್ತು ಅಗತ್ಯವಿರುವಾಗ, ಸರಕುಗಳ ಸಾರ್ವಜನಿಕ ಖರೀದಿಗೆ ಜಿಇಎಂ ಒಂದು ಅತ್ಯಂತ ಪರಿಣಾಮಕಾರಿ, ಪಾರದರ್ಶಕ ಮತ್ತು ಆರ್ಥಿಕ ವೇದಿಕೆಯಾಗಿದೆ.
ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತೀಯ ಅರ್ಥವ್ಯವಸ್ಥೆಗೆ ಜೀವ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಭಾರತ್ ಮಿಷನ್ ಬಿಡುಗಡೆಗೊಳಿಸಿದ್ದರು. ಈ ವೇಳೆ ದೇಶದ ಜನತೆಯನ್ನು ಸಂಬೋಧಿಸಿದ್ದ ಪ್ರಧಾನಿ ಸ್ವದೇಶೀಗೆ ಮರಳಲು ಹೇಳಿದ್ದರು. ಜೊತೆಗೆ "ಲೋಕಲ್ ಗಾಗಿ ವೋಕಲ್ ಆಗಿ " ಎಂಬ ಕರೆ ನೀಡಿದ್ದರು. ಚೀನಾ ಜೊತೆಗೆ ನಡೆಯುತ್ತಿರುವ ವಿವಾದದ ನಂತರ ದೇಶಾದ್ಯಂತ ಚೀನಾ ಸಾಮಾನುಗಳನ್ನು ನಿಷೇಧಿಸುವಂತೆ ಕೂಗುಗಳು ಕೇಳಿಬರಲಾರಂಭಿಸಿವೆ. ಇದೆ ಕಾರಣದಿಂದ ಜಿಇಎಂನಲ್ಲಿ 'Country Of Origin' ವೈಶಿಷ್ಟ್ಯವನ್ನು ಜೋಡಿಸಲಾಗಿದೆ. ಇದರಿಂದ ಸರ್ಕಾರದ ಜೊತೆಗೆ ಉತ್ಪನ್ನಗಳನ್ನು ಖರೀದಿಸುವವರಿಗೂ ಕೂಡ ಉತ್ಪನ್ನಗಳ ಸ್ಪಷ್ಟ ಮಾಹಿತಿ ಸಿಗಲಿದೆ.
ಲೋಕಲ್ ಅಂದರೆ ಕೇವಲ ಭಾರತೀಯ ಅರ್ಥ ಅಲ್ಲ
ಆದರೆ, ಇದೆ ವೇಳೆ ಸರ್ಕಾರ 'ಲೋಕಲ್' ಶಬ್ದದ ಅರ್ಥ ಕೇವಲ ಭಾರತದಲ್ಲಿ ತಯಾರಿಸಲಾಗಿರುವ ಉತ್ಪನ್ನಗಳು ಎಂಬುದು ಅಲ್ಲ ಅಂತ ಸ್ಪಷ್ಟಪಡಿಸಿತ್ತು. ಇದರ ಅಡಿಯಲ್ಲಿ ದೇಶದಲ್ಲಿಯೇ ಇರುವ ಬಹುರಾಷ್ಟ್ರೀಯ ಕಂಪನಿಗಳು ಕೂಡ ಸೇರಿವೆ ಎಮುದನ್ನು ಸರ್ಕಾರ ಹೇಳಿತ್ತು. ದೇಶಾದ್ಯಂತ ಬಿಸ್ಕಿಟ್ ಪೂರೈಸುವ ಅತಿ ದೊಡ್ಡ ಕಂಪನಿ ಪಾರ್ಲೆ ಪ್ರಾಡಕ್ಟ್ಸ್ ಪಾರ್ಲೆ-ಜಿ, ಹೈಡ್ ಅಂಡ್ ಸೀಕ್ ನಂತಹ ತನ್ನ ಬ್ರಾಂಡ್ ಗಳಿಗಾಗಿ ಸ್ವದೇಶಿ ಥೀಮ್ ಇರುವ ಜಾಹೀರಾತುಗಳನ್ನು ಕೂಡ ಈಗಾಗಲೇ ಸಿದ್ಧಪಡಿಸಿವೆ.