ನವದೆಹಲಿ: ಭಾರತದಲ್ಲಿ ಈಗ ಚುನಾವಣಾ ಕಾವು ತೀವ್ರಗೊಂಡಿದ್ದು ಈಗ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಬಿಜೆಪಿಯ ಅಚ್ಚೆ ದಿನ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇತ್ತೀಚಿಗೆ ಗೆಲಾಕ್ಸಿಯಲ್ಲಿರುವ ಕಪ್ಪು ರಂದ್ರದ ಚಿತ್ರವನ್ನು ಮೊದಲ ಬಾರಿಗೆ ಖಗೋಳಶಾಸ್ತ್ರಜ್ಞರು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು.ಈ ಹಿನ್ನಲೆಯಲ್ಲಿ ಈಗ ಬಿಜೆಪಿ ಅಚ್ಚೆ ದಿನ್ ಬಗ್ಗೆ ಅಖಿಲೇಶ್ ವ್ಯಂಗ್ಯವಾಡಿದ್ದಾರೆ.ಈ ಕುರಿತಾಗಿ ಟ್ವೀಟ್ ಮಾಡಿ " ಈಗ ಕಪ್ಪುರಂದ್ರವು ಕಾಣುತ್ತಿದೆ ಆದರೆ ಅಚ್ಚೆ ದಿನ್ ಇನ್ನೂ ಕಣ್ಣಿಗೆ ಕಾಣುತ್ತಿಲ್ಲ " ಎಂದು ಕುಟುಕಿದ್ದಾರೆ.
अब तो ब्लैक होल भी दिख गया। बस अच्छे दिन ही हैं जो नज़र नहीं आते। pic.twitter.com/C8kKlYoiPj
— Akhilesh Yadav (@yadavakhilesh) April 11, 2019
ಸುಮಾರು 54 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಮೆಸ್ಸಿಯರ್ 87 ಎನ್ನುವ ಗೆಲಾಕ್ಸಿಯಲ್ಲಿರುವ ಕಪ್ಪು ರಂದ್ರದ ಫೋಟೋವನ್ನು ವಿಜ್ಞಾನಿಗಳು ಅನಾವರಣಗೊಳಿಸಿದ್ದರು.ಇದನ್ನೇ ಬಳಸಿಕೊಂಡ ಅಖಿಲೇಶ್ ಯಾದವ್ ಕಳೆದ ಲೋಕಸಭಾ ಚುನಾವಣೆಯಾ ಬಿಜೆಪಿ ಘೋಷಣೆಯಾದ ಅಚ್ಚೆ ದಿನ್ ನ್ನು ಇನ್ನು ಕೇವಲ ಭರವಸೆಯಾಗಿಯೇ ಉಳಿದಿರುವ ಬಗ್ಗೆ ಅವರು ಕಿಡಿ ಕಾರಿದ್ದಾರೆ.
ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಬಿಜೆಪಿಯ ಅಶ್ವಮೇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೈತ್ರಿಯನ್ನು ಮಾಡಿಕೊಂಡಿವೆ.ಕಳೆದ ಚುನಾವಣೆಯಲ್ಲಿ ಬಿಜೆಪಿ 70 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು