ಮಹಾರಾಷ್ಟ್ರದ ಬಳಿಕ ಈ ರಾಜ್ಯದಲ್ಲಿ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್!

ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರವನ್ನು ಆಕ್ರಮಿಸಲು ಬಯಸಿದೆ. ಈ ಬಗ್ಗೆ ತೆಲಂಗಾಣ ಬಿಜೆಪಿ ನಾಯಕರೊಬ್ಬರು ದೊಡ್ಡ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಟಿಆರ್‌ಎಸ್‌ನ 15 ರಿಂದ 18 ಶಾಸಕರು ಮತ್ತು ಕಾಂಗ್ರೆಸ್‌ನ 5 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

Written by - Puttaraj K Alur | Last Updated : Aug 3, 2022, 09:39 AM IST
  • ಮಹಾರಾಷ್ಟ್ರದ ಬಳಿಕ ಈ ರಾಜ್ಯದಲ್ಲಿ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್
  • ತೆಲಂಗಾಣದ 18 ಟಿಆರ್‌ಎಸ್ ಮತ್ತು 5 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆ
  • ತೆಲಂಗಾಣದ ಬಿಜೆಪಿ ನಾಯಕ ನಾಚ್ಚಾರ್ಜು ವೆಂಕಟ ಸುಭಾಷ್ ಸ್ಫೋಟಕ ಹೇಳಿಕೆ
ಮಹಾರಾಷ್ಟ್ರದ ಬಳಿಕ ಈ ರಾಜ್ಯದಲ್ಲಿ ‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್!   title=
‘ಆಪರೇಷನ್ ಕಮಲ’ಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಸರ್ಕಾರ ರಚಿಸಿದ ನಂತರ, ಬಿಜೆಪಿ ಈಗ ತೆಲಂಗಾಣದಲ್ಲಿ ಅಧಿಕಾರವನ್ನು ಆಕ್ರಮಿಸಿಕೊಳ್ಳಲು ಬಯಸಿದೆ. ಈ ಬಗ್ಗೆ ತೆಲಂಗಾಣ ಬಿಜೆಪಿ ನಾಯಕ ನಾಚ್ಚಾರ್ಜು ವೆಂಕಟ ಸುಭಾಷ್ ದೊಡ್ಡ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅವಕಾಶ ನೀಡುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ. ಆಡಳಿತಾರೂಢ ಟಿಆರ್‌ಎಸ್ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

18 ಟಿಆರ್‌ಎಸ್ ಮತ್ತು 5 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ

ಮುಖ್ಯಮಂತ್ರಿ ಕೆ.ಚಂದ್ರಶೇಖರ್‍ ರಾವ್ ಅವರು ನೀಡಿದ ಸುಳ್ಳು ಭರವಸೆಗಳಿಂದಾಗಿ ಟಿಆರ್‌ಎಸ್ ಶಾಸಕರು ಸಾರ್ವಜನಿಕರ ಕೋಪವನ್ನು ಎದುರಿಸಲು ಸಾಧ್ಯವಾಗದೆ ತಮ್ಮ ಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಟಿಆರ್‌ಎಸ್‌ನ ಸುಮಾರು 15 ರಿಂದ 18 ಶಾಸಕರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ಟಿಆರ್‌ಎಸ್‌ನಿಂದ ಮಾತ್ರವಲ್ಲದೆ ಸುಮಾರು ಐವರು ಕಾಂಗ್ರೆಸ್ ಶಾಸಕರು ಸಹ ಬಿಜೆಪಿಗೆ ಬರಲು ಒಪ್ಪಿಗೆ ನೀಡಿದ್ದಾರೆ. ಈ ಎಲ್ಲಾ ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ವೆಂಕಟ ಸುಭಾಷ್ ಹೇಳಿದ್ದಾರೆ.  

ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ರದ್ದುಗೊಳಿಸಿದ ಸ್ಪೀಕರ್ ಓಂ ಬಿರ್ಲಾ

ಬಿಜೆಪಿ ಮೇಲೆ ಜನರಿಗೆ ನಂಬಿಕೆ ಇದೆ

ರಾಜ್ಯ ಸರ್ಕಾರದ ಅವ್ಯವಹಾರ ಹಾಗೂ ಭ್ರಷ್ಟ ಆಡಳಿತವನ್ನು ಬಯಲಿಗೆಳೆಯಲು ಬಿಜೆಪಿಯ ತೆಲಂಗಾಣ ಘಟಕದ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಆರಂಭಿಸಿದ ಪ್ರಜಾ ಸಂಗ್ರಾಮ ಯಾತ್ರೆಯಲ್ಲಿ ಅಪಾರ ಜನಸ್ತೋಮ ಪಾಲ್ಗೊಂಡಿತ್ತು. ತೆಲಂಗಾಣ ಜನತೆಯ ಆಶೋತ್ತರಗಳನ್ನು ಬಿಜೆಪಿ ಮಾತ್ರ ಈಡೇರಿಸುತ್ತದೆ ಎಂಬ ಅಪಾರ ನಂಬಿಕೆ ಜನರಿಗೆ ಇದೆ ಎಂಬುದನ್ನು ಇದು ತೋರಿಸುತ್ತದೆ. ಹಾಗಾಗಿಯೇ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆ ಮಾಡಲು ರಾಜ್ಯದ ಜನತೆ ನಿರ್ಧರಿಸಿದ್ದಾರೆ ಅಂತಾ ಅವರು ಹೇಳಿದ್ದಾರೆ.  

ತೆಲಂಗಾಣದ ಆಶಯಗಳನ್ನು ಬಿಜೆಪಿ ಈಡೇರಿಸಲಿದೆ

ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿರುವ ರಾಜ್ಯದ ಜನತೆ ಈ ಬಾರಿ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಬಂಡಿ ಸಂಜಯ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿದ್ದರಿಂದ ಮುಂಬರುವ ದಿನಗಳಲ್ಲಿ ತೆಲಂಗಾಣದ ಜನರು ಬಿಜೆಪಿಗೆ ಮತ ಹಾಕಲು ನಿರ್ಧರಿಸಿದ್ದಾರೆ. ತೆಲಂಗಾಣ ಜನರು ಬಿಜೆಪಿ ಮಾತ್ರ ತಮ್ಮ ಆಶಯಗಳನ್ನು ಈಡೇರಿಸುತ್ತದೆ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಅವರು ಬಿಜೆಪಿಗೆ ಬೆಂಬಲ ನೀಡಲು ಸಜ್ಜಾಗಿದ್ದಾರೆಂದು ಹೇಳಿದ್ದಾರೆ.  

ಇದನ್ನೂ ಓದಿ: MP: ಜಬಲ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ, ಮೃತಪಟ್ಟವರ ಸಂಖ್ಯೆ 10 ಕ್ಕೆ ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News