ಶ್ರೀಲಂಕಾದಂತೆ ಭಾರತದಲ್ಲಿಯೂ ಜನರು ಪ್ರಧಾನಿ ನಿವಾಸಕ್ಕೆ ನುಗ್ಗುತ್ತಾರೆ: ಒವೈಸಿ

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳನ್ನು ಗುರಿಯಾಗಿಸಿಕೊಂಡು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Written by - Puttaraj K Alur | Last Updated : Aug 1, 2022, 07:48 AM IST
  • ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ಧಿಯಾಗಿದೆ, ಆದರೆ ಮುಸ್ಲಿಮರು ಅಭಿವೃದ್ಧಿಯಾಗಲಿಲ್ಲ
  • ಮುಸ್ಲಿಮರನ್ನು ವೋಟ್ ಬ್ಯಾಂಕ್ ಎಂದು ಪರಿಗಣಿಸದ ಕಾರಣ ಇಂದು ಶಿಕ್ಷಣವೂ ಇಲ್ಲ, ಉದ್ಯೋಗವೂ ಇಲ್ಲ
  • ಶ್ರೀಲಂಕಾದಂತಹ ಪರಿಸ್ಥಿತಿಯೇ ಭಾರತದಲ್ಲಿರುವಾಗ ಪ್ರಧಾನಿ ನಿವಾಸಕ್ಕೆ ಜನರು ಪ್ರವೇಶಿಸುವ ದಿನ ದೂರವಿಲ್ಲ
ಶ್ರೀಲಂಕಾದಂತೆ ಭಾರತದಲ್ಲಿಯೂ ಜನರು ಪ್ರಧಾನಿ ನಿವಾಸಕ್ಕೆ ನುಗ್ಗುತ್ತಾರೆ: ಒವೈಸಿ title=
ಬಿಜೆಪಿ ಸರ್ಕಾರದ ವಿರುದ್ಧ ಓವೈಸಿ ವಾಗ್ದಾಳಿ

ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಶ್ರೀಲಂಕಾದಂತೆ ಭಾರತದಲ್ಲಿಯೂ ಪ್ರಧಾನಿ ನಿವಾಸಕ್ಕೆ ಜನರು ನುಗ್ಗುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ವೋಟ್ ಬ್ಯಾಂಕ್ ರಾಜಕಾರಣದಿಂದ ಅಭಿವೃದ್ಧಿಯಾಗಿದೆ, ಆದರೆ ಮುಸ್ಲಿಮರು ಅಭಿವೃದ್ಧಿಯಾಗಲಿಲ್ಲ. ಏಕೆಂದರೆ ಮುಸ್ಲಿಮರನ್ನು ಮತಬ್ಯಾಂಕ್ ಎಂದು ಪರಿಗಣಿಸಲೇ ಇಲ್ಲ. ಇಂದು ಶಿಕ್ಷಣವೂ ಇಲ್ಲ, ಉದ್ಯೋಗವೂ ಇಲ್ಲ. ಸಂವಿಧಾನದಲ್ಲಿ ಏನನ್ನು ಬರೆಯಲಾಗಿದೆಯೋ ಅದನ್ನು ವ್ಯತಿರಿಕ್ತಗೊಳಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದೆ. ಆದರೆ ವಾಸ್ತವ ಸ್ವರೂಪವನ್ನು ನೀಡಲು ನಮಗೆ ಸಾಧ್ಯವಾಗುತ್ತಿಲ್ಲ’ವೆಂದು ಓವೈಸಿ ಹೇಳಿದ್ದಾರೆ.

ಇದನ್ನೂ ಓದಿ: Land Scam Case: ‘ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ನಾನೂ ಯಾರಿಗೂ ತಲೆಬಾಗುವುದಿಲ್ಲ’

ಬಿಜೆಪಿ-ಕಾಂಗ್ರೆಸ್ ವಿರುದ್ಧ ಓವೈಸಿ ವಾಗ್ದಾಳಿ

ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಒವೈಸಿ, ‘ಈ ಎರಡೂ ಪಕ್ಷಗಳಲ್ಲಿ ನಾಯಕ ದೊಡ್ಡವನು, ಆದರೆ ಪಕ್ಷ ಚಿಕ್ಕದಾಗಿದೆ. ಈ ಪಕ್ಷಗಳಲ್ಲಿ ನಾಯಕನನ್ನು ದೊಡ್ಡವ ಎಂದು ಪರಿಗಣಿಸಲಾಗುತ್ತದೆ. ದೇಶದಲ್ಲಿ ಯಾರು ಧರ್ಮಾಂಧತೆಯನ್ನು ಹರಡುತ್ತಿದ್ದಾರೆ ಎಂಬುದಕ್ಕೆ ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್ ಉತ್ತರಿಸಬೇಕು. ಶ್ರೀಲಂಕಾದಂತಹ ಪರಿಸ್ಥಿತಿ ಇಲ್ಲಿರುವಾಗ ಪ್ರಧಾನಿ ನಿವಾಸಕ್ಕೆ ಸಾರ್ವಜನಿಕರು ಪ್ರವೇಶಿಸುವ ದಿನ ದೂರವಿಲ್ಲ’ವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಟುಂಬವಾದದ ವಿರುದ್ಧ ಓವೈಸಿ ವಾಗ್ದಾಳಿ  

ಕುಟುಂಬ ರಾಜಕಾರಣದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಒವೈಸಿ, ‘ವಿಧಾನಸಭೆ ಅಥವಾ ಸಂಸದರ ಚುನಾವಣೆಗೆ ಸ್ಪರ್ಧಿಸಲು ಹಣದ ಅಗತ್ಯವಿದೆ. ಕುಟುಂಬದ ಹಿನ್ನೆಲೆ ನೋಡಿಯೇ ಟಿಕೆಟ್ ನೀಡಲಾಗುತ್ತದೆ. ರೈತರ ಚಳವಳಿ, ಸಿಎಎ ಆಂದೋಲನ ಮತ್ತು ಅಗ್ನಿವೀರ್ ಯೋಜನೆಯನ್ನು ಸಾರ್ವಜನಿಕರು ವಿರೋಧಿಸಿದರು. ನಮ್ಮ ಮೇಲೆ ನಂಬಿಕೆ ಇಲ್ಲದ ಕಾರಣ ಜನ ಬೀದಿಗೆ ಬಂದಿದ್ದಾರೆ. ನಾವು ಅವರ ಧ್ವನಿಯನ್ನು ಆಲಿಸಬೇಕಿದೆ, ಆದರೆ ಅದು ಸಾಧ್ಯವಾಗಿಲ್ಲ’ವೆಂದು ಹೇಳಿದ್ದಾರೆ.

ಇದನ್ನೂ ಓದಿ: Amazon Great Freedom Festival: ಮೊಬೈಲ್ ಮೇಲೆ ಶೇ.40, ಟಿವಿಗಳಿಗೆ ಶೇ.60ರಷ್ಟು ರಿಯಾಯಿತಿ!

ಬಿಜೆಪಿಯ ಬಿ ಟೀಂ ಬಗ್ಗೆ ಓವೈಸಿ ಹೇಳಿದ್ದೇನು?

ಹಿಂದೂ-ಮುಸ್ಲಿಂ ಹೆಸರಿನಲ್ಲಿ ರಾಜಕೀಯ ಮಾಡುವ ಪ್ರಶ್ನೆಗೆ ಉತ್ತರಿಸಿದ ಓವೈಸಿ, ‘ಲೋಕಸಭೆಯಲ್ಲಿ ಇಂದು ಮುಸ್ಲಿಂ ಸಂಸದರ ಸಂಖ್ಯೆ ಎಷ್ಟು? ರಾಜಸ್ಥಾನದಲ್ಲಿ ಕೊನೆಯ ಬಾರಿಗೆ ಮುಸ್ಲಿಂ ಸಂಸದರ ಚುನಾವಣೆಯಲ್ಲಿ ಗೆದ್ದವರು ಯಾರು? ಯಾರೂ ಹೇಳಲಾರರು. ಆದರೆ ಸತ್ಯವೆಂದರೆ ಹಿಂದೂ-ಮುಸ್ಲಿಂ ರಾಜಕೀಯದಲ್ಲಿ ಮುಸ್ಲಿಮರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಸ್ಥಾನದಲ್ಲಿ ಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸುತ್ತೇನೆ. ಜನರು ಮತ ಹಾಕಲು ಬಯಸಿದರೆ, ಅವರು ನಮನ್ನು ಬೆಂಬಲಿಸಬೇಕು. ಆದರೆ ನಾವು ಪೂರ್ಣ ಶಕ್ತಿಯಿಂದ ಚುನಾವಣೆಯಲ್ಲಿ ಹೋರಾಡುತ್ತೇವೆ. ನಮ್ಮನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಆದರೆ ನಾವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಕಾಂಗ್ರೆಸ್ ಸೋಲುತ್ತದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಗಿದೆ. ನಾವು ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಾಗ ಬಿಜೆಪಿ ಗೆದ್ದಿತ್ತು’ ಎಂದು ಒವೈಸಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News