ನವದೆಹಲಿ : ಏರ್ ಇಂಡಿಯಾ (Air India) ಹರಾಜಿನ ನಂತರ, ಬಿಕ್ಕಟ್ಟಿನ ಮೋಡಗಳು ಅದರ ಉದ್ಯೋಗಿಗಳ ಮೇಲೆ ಸುಳಿದಾಡಲಾರಂಭಿಸಿವೆ. ಕಂಪನಿಯ ಉದ್ಯೋಗಿಗಳಿಗೆ ಕ್ವಾರ್ಟರ್ಸ್ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಈ ಕಾರಣದಿಂದಾಗಿ, ಕಾರ್ಮಿಕರ ಸಂಘಟನೆಗಳು ಕೋಪಗೊಂಡಿದ್ದು, ಮುಷ್ಕರ ನಡೆಸುವ ಬೆದರಿಕೆ ಹಾಕಿವೆ.
ಉದ್ಯೋಗಿಗಳಿಗೆ ನೀಡಿದ ಸೂಚನೆಯಲ್ಲಿ, ಏರ್ ಇಂಡಿಯಾ (Air India) ಮತ್ತು ಟಾಟಾ ಗ್ರೂಪ್ (Tata Group) ನಡುವಿನ ಬಂಡವಾಳ ಹೂಡಿಕೆಯ ಒಪ್ಪಂದದ ಕೊನೆಯ ದಿನಾಂಕದಿಂದ ಆರು ತಿಂಗಳೊಳಗೆ, ಉದ್ಯೋಗಿಗಳು ಮುಂಬೈನ (Mumbai) ಕಲಿನಾದಲ್ಲಿರುವ ತಮ್ಮ ನಿವಾಸವನ್ನು ತೊರೆಯಬೇಕು ಎಂದು ಹೇಳಲಾಗಿದೆ. ಈ ಸೂಚನೆಯನ್ನು ಸ್ವೀಕರಿಸಿದಾಗಿನಿಂದ, ಏರ್ ಇಂಡಿಯಾ ಉದ್ಯೋಗಿಗಳಲ್ಲಿ ಭೀತಿ ಎದುರಾಗಿದೆ.
ಇದನ್ನೂ ಓದಿ : UP Election 2022: "ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 400 ಸ್ಥಾನಗಲ್ಲಿ ಗೆಲ್ಲಲಿದೆ"
ನಿರ್ಧಾರದ ವಿರುದ್ಧ ಮುಷ್ಕರಕ್ಕೆ ಮುಂದಾದ ನೌಕರರು :
ಇದರ ನಂತರ, Joint Action Committee of AI Unions, ಮುಂಬೈ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಪ್ರತಿಕ್ರಿಯೆಯಾಗಿ ನೋಟಿಸ್ ನೀಡಿದೆ. ಈ ನಿರ್ಧಾರದ ವಿರುದ್ಧ, ನೌಕರರು ನವೆಂಬರ್ 2 ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲಿದ್ದಾರೆ ಎಂದು ನೋಟಿಸ್ ನಲ್ಲಿ (notice) ತಿಳಿಸಲಾಗಿದೆ. ನಿಯಮಗಳ ಪ್ರಕಾರ, ಮುಷ್ಕರಕ್ಕೆ ಹೋಗುವ ಮೊದಲು, ಒಕ್ಕೂಟವು 2 ವಾರಗಳ ಮುಂಚಿತವಾಗಿ ನೋಟಿಸ್ ನೀಡಬೇಕಾಗಿರುತ್ತದೆ.
ಯಾರಿಗೆ ಸೂಚನೆ ಸಿಕ್ಕಿತು?
ವರದಿಯ ಪ್ರಕಾರ, ಮುಂಬೈನ ಕಲಿನಾದಲ್ಲಿರುವ ಕಾಲೋನಿಯಲ್ಲಿ ವಾಸಿಸುತ್ತಿರುವ ಏರ್ ಇಂಡಿಯಾ ಉದ್ಯೋಗಿಗಳಿಗೆ (Air India Employees) ಅಕ್ಟೋಬರ್ 5 ರಂದೇ ಈ ನೋಟಿಸ್ ನೀಡಲಾಗಿದೆ. ವಿಮಾನಯಾನವನ್ನು ಖಾಸಗೀಕರಣಗೊಳಿಸಿದ 6 ತಿಂಗಳ ಒಳಗೆ ತಾವು ಕ್ವಾರ್ಟರ್ಸ್ ಖಾಲಿ ಮಾಡುವುದಾಗಿ, ಅಕ್ಟೋಬರ್ 20 ರೊಳಗೆಲಿಖಿತ ರೂಪದಲ್ಲಿ ನೀಡಬೇಕಾಗಿ ನೋಟಿಸ್ ನಲ್ಲಿ ಹೇಳಲಾಗಿದೆ. ಮುಂಬೈನ ಕಲಿನಾ ಮತ್ತು ದೆಹಲಿಯ ಉಬರ್ ಪೋಸ್ ಪ್ರದೇಶದಲ್ಲಿ ಏರ್ ಇಂಡಿಯಾ (Air India) ತನ್ನದೇ ಆದ ಕಾಲೋನಿಯನ್ನು ಹೊಂದಿದೆ. ವರದಿಯ ಪ್ರಕಾರ ಈ ನೋಟಿಸ್ ಎರಡೂ ಸ್ಥಳಗಳಿಗೂ ಸೇರಿದ್ದಾಗಿದೆ ಎನ್ನಲಾಗಿದೆ. ನೌಕರರ ಸಂಘದ ಪದಾಧಿಕಾರಿಗಳು ಈ ವಿಷಯದ ಕುರಿತು ಪ್ರತಿನಿತ್ಯ ಸಭೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : Google: 3 ಅಪಾಯಕಾರಿ ಆಪ್ಗಳನ್ನು ನಿಷೇಧಿಸಿದ ಗೂಗಲ್, ತಕ್ಷಣವೇ ಈ ಲಿಸ್ಟ್ ಪರಿಶೀಲಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ