ಯುಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವೆಂದ ಅಖಿಲೇಶ್..! ಆದರೆ ಎಸ್ಪಿ ಹೇಳಿದ್ದೇನು ಗೊತ್ತೇ?

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ,ಆದರೆ ಅವರ ಪಕ್ಷವು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಆದ್ದರಿಂದ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದೆ.

Written by - Zee Kannada News Desk | Last Updated : Nov 1, 2021, 07:17 PM IST
  • ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ,
  • ಆದರೆ ಅವರ ಪಕ್ಷವು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಆದ್ದರಿಂದ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದೆ.
ಯುಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲವೆಂದ ಅಖಿಲೇಶ್..! ಆದರೆ ಎಸ್ಪಿ ಹೇಳಿದ್ದೇನು ಗೊತ್ತೇ? title=
file photo

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ,ಆದರೆ ಅವರ ಪಕ್ಷವು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಆದ್ದರಿಂದ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಅಜಂಗಢದಿಂದ ಸಮಾಜವಾದಿ ಪಕ್ಷದ ಸಂಸದರಾಗಿದ್ದು, ಇದುವರೆಗೆ ಯಾವುದೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.ಅಖಿಲೇಶ್ ಯಾದವ್ 2017 ಅಥವಾ 2012 ರ ಚುನಾವಣೆಯಲ್ಲೂ ಸ್ಪರ್ಧಿಸಿರಲಿಲ್ಲ.ಈಗ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುದಿಲ್ಲ ಎನ್ನುವ ಹೇಳಿಕೆ ಪಿಟಿಐನಲ್ಲಿ ವರದಿಯಾದ ಬೆನ್ನಲ್ಲೇ ಪಕ್ಷವು ಈಗ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ನರೇಂದ್ರ ಮೋದಿ 180 ಡಿಗ್ರಿ ಪಿಎಂ- ಅಖಿಲೇಶ್ ಯಾದವ್ ವ್ಯಂಗ್ಯ

"ಉತ್ತರ ಪ್ರದೇಶದಿಂದ ಬಿಜೆಪಿ ನಿರ್ನಾಮವಾಗಲಿದೆ.ಯುಪಿಯ ಜನರು ಸಮಾಜವಾದಿ ಪಕ್ಷದೊಂದಿಗಿದ್ದಾರೆ.ಅಖಿಲೇಶ್ ಯಾದವ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ" ಎಂದು ಯುಪಿ ಮಾಜಿ ಮುಖ್ಯಸ್ಥರ ಆಪ್ತ ಸಹಾಯಕ ಸಮಾಜವಾದಿ ಪಕ್ಷದ ಆಶಿಶ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ರಾಮಜನ್ಮ ಸ್ಥಳದಲ್ಲಿ ಇಂದು ಮೋದಿ, ಅಖಿಲೇಶ್, ಮಾಯಾವತಿ ರ‍್ಯಾಲಿ; ಎಲ್ಲರ ಚಿತ್ತ ಅಯೋಧ್ಯೆಯತ್ತ!

2012 ರಲ್ಲಿ, ಅವರು ಸಮಾಜವಾದಿ ಪಕ್ಷವನ್ನು ಪ್ರಬಲ ವಿಜಯಗಳಿಸಿದಾಗ 38 ನೇ ವಯಸ್ಸಿನಲ್ಲಿ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.ಆ ಸಮಯದಲ್ಲಿ ಅವರು ಕನೌಜ್‌ನಿಂದ ಲೋಕಸಭೆಯ ಸಂಸದರಾಗಿದ್ದರು.ಆಗಲೂ ಅವರು ವಿಧಾನ ಪರಿಷತ್ತಿನ ಮೂಲಕ ಸಿಎಂ ಪದವಿಗೆರಿದರು.ಅವರ ಪತ್ನಿ ಡಿಂಪಲ್ ಯಾದವ್ ಅವರು ತೆರವಾದ ಕನ್ನೌಜ್ ಸ್ಥಾನದಿಂದ ಅವಿರೋಧವಾಗಿ ಆಯ್ಕೆಯಾದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News