ನವದೆಹಲಿ:ಇಂದು ಆಗಸ್ಟ್ 5. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮನ ಮಂದಿರಕ್ಕಾಗಿ ಭೂಮಿ ಪೂಜೆ ನೆರವೇರಿಸಲಿದ್ದಾರೆ, ನಂತರ ದೇವಾಲಯದ ನಿರ್ಮಾಣ ಪ್ರಾರಂಭವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನ ನಂತರ, ವಿವಾದಿತ ರಚನೆ ಮತ್ತು ಶ್ರೀ ರಾಮ್ ಮಂದಿರ ನಿರ್ಮಾಣದ ತೀರ್ಮಾನವನ್ನು ಮಾಡಲಾಗಿದೆ. ಆದರೆ ಹಗಿಯಾ ಸೋಫಿಯಾ ಮಸೀದಿಯ ಉದಾಹರಣೆಯನ್ನು ಉಲ್ಲೇಖಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತೊಮ್ಮೆ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿದೆ ಮತ್ತು ಬಾಬರಿ ಮಸೀದಿ ಅಲ್ಲಿತ್ತು ಹಾಗೂ ಇರಲಿದೆ ಎಂಬ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.
#BabriMasjid was and will always be a Masjid. #HagiaSophia is a great example for us. Usurpation of the land by an unjust, oppressive, shameful and majority appeasing judgment can't change it's status. No need to be heartbroken. Situations don't last forever.#ItsPolitics pic.twitter.com/nTOig7Mjx6
— All India Muslim Personal Law Board (@AIMPLB_Official) August 4, 2020
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿ, " ಬಾಬರಿ ಮಸೀದಿ ಇತ್ತು ಮತ್ತು ಯಾವಾಗಲು ಮಸೀದಿಯಾಗಿಯೇ ಇರಲಿದೆ. ಹಗಿಯಾ ಸೋಫಿಯಾ ಇದಕ್ಕೆ ಉತ್ತಮ ಉದಾಹರಣೆ. ಅನ್ಯಾಯದ, ದಬ್ಬಾಳಿಕೆಯ, ನಾಚಿಕೆಗೇಡಿನ ಮತ್ತು ಬಹುಸಂಖ್ಯಾತರ ತ್ರುಷ್ಟಿಕರಣದ ನಿರ್ಧಾರಗಳಿಂದ ಭೂಮಿಯ ಮೇಲೆ ಪುನರ್ನಿರ್ಮಾಣ ಮಾಡಿ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ದುಃಖಿಸುವ ಅಗತ್ಯವಿಲ್ಲ. ಏಕೆಂದರೆ ಯಾವುದೇ ಪರಿಸ್ಥಿತಿ ಶಾಶ್ವತವಾಗಿ ಉಳಿಯುವುದಿಲ್ಲ"ಎಂದು ಹೇಳಿದೆ.
ಮತ್ತೆ ಮಸೀದಿಯಾಗಿ ಮಾರ್ಪಟ್ಟ ಹಗಿಯಾ ಸೋಫಿಯಾ
1500 ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಶಾಮೀಲಾಗಿರುವ ಹಗಿಯಾ ಸೋಫಿಯಾ ವಸ್ತುಸಂಗ್ರಹಾಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಳೆದ ತಿಂಗಳು ಜುಲೈನಲ್ಲಿ, ಟರ್ಕಿಯ ಅಧ್ಯಕ್ಷ ರೆಚೆಪ್ ತಯ್ಯಾಬ್ ಎರ್ಡೊಗನ್, ಐತಿಹಾಸಿಕ ವಸ್ತುಸಂಗ್ರಹಾಲಯವನ್ನು ಮತ್ತೆ ಮಸೀದಿಯಾಗಿ ಪರಿವರ್ತಿಸಲು ಆದೇಶಿಸಿದ್ದಾರೆ. 1434 ರಲ್ಲಿ ಇಸ್ತಾಂಬುಲ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಹಗಿಯಾ ಸೋಫಿಯಾವನ್ನು ಉಸ್ಮಾನಿ ಸುಲ್ತಾನರು ಮಸೀದಿಯಾಗಿ ಪರಿವರ್ತಿಸಿದ್ದರು. 1934 ರಲ್ಲಿ ಈ ನಿರ್ಧಾರವನ್ನು ಅಧ್ಯಕ್ಷ ಎರ್ಡೊಗನ್ ರದ್ದುಗೊಳಿಸಿ ಅದನ್ನು ಒಂದು ಐತಿಹಾಸಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದ್ದರು. ಈ ಐತಿಹಾಸಿಕ ಕಟ್ಟಡವು ಅದರ ಬಣ್ಣಗಳನ್ನು ಹಲವು ಬಾರಿ ಬದಲಾಯಿಸಿದೆ. ಈ ಕಟ್ಟಡವನ್ನು ನಿರ್ಮಿಸಿದಾಗ, ಇದು ಭವ್ಯವಾದ ಚರ್ಚ್ ಆಗಿತ್ತು ಮತ್ತು ಇದು ಶತಮಾನಗಳವರೆಗೆ ಅದು ಚರ್ಚ್ ಆಗಿಯೇ ಉಳಿದಿತ್ತು. ನಂತರ ಅದನ್ನು ಮಸೀದಿಯಾಗಿ ಪರಿವರ್ತಿಸಲಾಗಿತ್ತು.