Amarnath Yatra: ಅಮರನಾಥ ಯಾತ್ರೆಗೆ ಹೋಗಬಯಸುವವರಿಗೆ ಗುಡ್‌ ನ್ಯೂಸ್‌ !

Amarnath Yatra: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ 62-ದಿನಗಳ ಕಾಲ ನಡೆಯಲಿರುವ ಶ್ರೀ ಅಮರನಾಥ ಯಾತ್ರೆಯು ಸದ್ಯದಲ್ಲೇ ಜರುಗಲಿದೆ. ಈ ಯಾತ್ರೆಗೆ ಹೋಗ ಬಯಸುವವರಿಗೆ ಆನ್‌ಲೈನ್ ನೋಂದಣಿ ಇಂದಿನಿಂದ ಆರಂಭಗೊಂಡಿದೆ.

Written by - Zee Kannada News Desk | Last Updated : Apr 17, 2023, 06:11 PM IST
  • ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ ಜರುಗುವ ಶ್ರೀ ಅಮರನಾಥ ಯಾತ್ರೆ ಸದ್ಯದಲ್ಲೇ ಆರಂಭ
  • 62-ದಿನಗಳ ಕಾಲ ನಡೆಯಲಿರುವ ಶ್ರೀ ಅಮರನಾಥ ಯಾತ್ರೆ
  • 3,880 ಮೀಟರ್ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಅಮರನಾಥ ದೇವಾಲಯ
Amarnath Yatra: ಅಮರನಾಥ ಯಾತ್ರೆಗೆ ಹೋಗಬಯಸುವವರಿಗೆ ಗುಡ್‌ ನ್ಯೂಸ್‌ ! title=

Amarnath YatraRegistration2023: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ 62-ದಿನಗಳ ಕಾಲ ನಡೆಯಲಿರುವ ಶ್ರೀ ಅಮರನಾಥ ಯಾತ್ರೆಯು ಸದ್ಯದಲ್ಲೇ ಜರುಗಲಿದೆ. ಈ ಯಾತ್ರೆಗೆ ಹೋಗ ಬಯಸುವವರಿಗೆ ಇಂದಿನಿಂದ  ಆನ್‌ಲೈನ್ ನೋಂದಣಿ ಆರಂಭಗೊಂಡಿದೆ. ಅಲ್ಲದೇ ಈ ಬಾರಿ ಶ್ರೀ ಅಮರನಾಥಜಿ ಯಾತ್ರೆ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ ಮಾರ್ಗಗಳಿಂದ ಪ್ರಾರಂಭವಾಗಲಿದೆ. ಯಾತ್ರೆಯು ಜುಲೈ 1ರಿಂದ ಆಗಸ್ಟ್ 31 ರವರೆಗೆ ನಡೆಯಲಿದೆ ಎಂದು ಕೇಂದ್ರಾಡಳಿತ ಪ್ರದೇಶದ ಸರ್ಕಾರ ತಿಳಿಸಿದೆ. 
ಇದನ್ನೂ ಓದಿ: Atiq Ahmad Murder Case: ಅತೀಕ್ ಅಹ್ಮದ್ ಮತ್ತು ಅಶ್ರಫ್ ಹತ್ಯೆಯ ಕಾರಣ ಬಹಿರಂಗ!

ಯಾತ್ರೆಗೆ ಹೋಗ ಬಯಸುವ ಭಕ್ತರು , ಆಫ್‌ಲೈನ್ ಮತ್ತು ಆನ್‌ಲೈನ್ ಮೋಡ್‌ಗಳ ಮೂಲಕ ನೋಂದಾಯಿಸಿಕೊಳ್ಳಬಹುದು. 3,880 ಮೀಟರ್ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಅಮರನಾಥ ದೇವಾಲಯದಲ್ಲಿ ಪ್ರತಿ ವರ್ಷ ಅದ್ದೂರಿ ಪೂಜೆ ನಡೆಲಿದೆ. ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ಪೂಜೆ ಹಾಗೂ  ಯಾತ್ರೆ ಕುರಿತಂತೆ ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆ ನೇರ ಪ್ರಸಾರಕ್ಕೆ ಅನುಮಾಡಿಕೊಡಲಾಗಿದೆ. 

ತೀರ್ಥಯಾತ್ರೆ ಹಾಗೂ ಮಾರ್ಗದಲ್ಲಿನ ಹವಾಮಾನ ಮತ್ತು ಆನ್‌ಲೈನ್ ಸೇವೆಗಳನ್ನು ಪಡೆಯುವ ಮಾಹಿತಿಯನ್ನು ಪಡೆಯಲು ನೋಂದಣಿ ಅಪ್ಲಿಕೇಶನ್ ನಲ್ಲೇ ಮಾಹಿತಿ ನೀಡಲಾಗಿದೆ. 

ಇದನ್ನೂ ಓದಿ: ಕೊರೊನಾದಿಂದ ಸಾವನ್ನಪ್ಪಿದ ಎರಡು ವರ್ಷದ ನಂತರ ಮನೆಗೆ ಬಂದ ಭೂಪ...!

ಅಮರನಾಥ ಯಾತ್ರೆ 2023 ನೋಂದಣಿ ಪ್ರಕ್ರಿಯೆ ಹೀಗಿದೆ:

*ಯಾತ್ರಿಕರು ತಮ್ಮ ಆಧಾರ್ ಕಾರ್ಡ್ ನಲ್ಲಿ ಸರಿಯಾದ ವಿವರಗಳನ್ನು ಹೊಂದಿರಬೇಕು
*ನೋಂದಣಿಗೆ ಪ್ರತಿ ವ್ಯಕ್ತಿಗೆ 120 ರೂ
*ಆನ್‌ಲೈನ್ ನೋಂದಣಿಗೆ ಪ್ರತಿ ವ್ಯಕ್ತಿಗೆ 220 ರೂ
*ಗುಂಪು ನೋಂದಣಿಗೆ ಪ್ರತಿ ವ್ಯಕ್ತಿಗೆ 220 ರೂ
*NRI ಯಾತ್ರಿಕರು PNB ಮೂಲಕ ಪ್ರತಿ ವ್ಯಕ್ತಿಗೆ 1,520 ರೂ.ಗೆ ನೋಂದಾಯಿಸಿಕೊಳ್ಳಬಹುದು

*13-70 ವರ್ಷ ವಯಸ್ಸಿನ ವ್ಯಕ್ತಿಗಳು ತೀರ್ಥಯಾತ್ರೆಗೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು
*ಗರ್ಭಿಣಿ ಮಹಿಳೆಗೆ ಅಮರನಾಥ ಯಾತ್ರೆ ಕೈಗೊಳ್ಳಲು ಅವಕಾಶವಿಲ್ಲ.
*ಆನ್‌ಲೈನ್ ನೋಂದಣಿಗಾಗಿ, https://jksasb.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News