ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಮೀಪದ ಮಸೀದಿಯಿಂದ 'ಆಜಾನ್' (ಪ್ರಾರ್ಥನೆಗೆ ಮುಸ್ಲಿಂ ಕರೆ) ಕೇಳಿದ ನಂತರ ತಮ್ಮ ಭಾಷಣವನ್ನು ಸಂಕ್ಷಿಪ್ತವಾಗಿ ನಿಲ್ಲಿಸಿದರು.
ಇದನ್ನೂ ಓದಿ : Viral Video : ಇಬ್ಬರು ಹುಡುಗಿಯರಿಗೆ ಒಬ್ಬನೇ ಪ್ರೇಮಿ.. ಸಿಕ್ಕಿಬಿದ್ದಾಗ ಆಗಿದ್ದೇನು ನೋಡಿ.!
ಈ ಉತ್ತರ ಕಾಶ್ಮೀರ ಜಿಲ್ಲೆಯ ಶೋಕತ್ ಅಲಿ ಕ್ರೀಡಾಂಗಣದಲ್ಲಿ ಕೇಂದ್ರ ಗೃಹ ಸಚಿವ ಶಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದ ಕೇವಲ ಐದು ನಿಮಿಷಗಳ ನಂತರ, ಅವರು ವಿರಾಮ ತೆಗೆದುಕೊಂಡು ವೇದಿಕೆಯಲ್ಲಿದ್ದವರಿಗೆ "ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ?ಎಂದು ಕೇಳಿದರು. ಆಗ 'ಆಜಾನ್' ನಡೆಯುತ್ತಿದೆ ಎಂದು ವೇದಿಕೆಯ ಮೇಲಿದ್ದ ಯಾರೋ ಹೇಳಿದಾಗ, ಷಾ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿದರು.
In Video: @AmitShah halts his speech during #Azaan.
#AmitShah #Baramulla pic.twitter.com/HW7ml9dyTC— Kupwara Times Official (@KupwaraTimes) October 5, 2022
ಇದನ್ನೂ ಓದಿ : Uttarakhand Bus Accident : ಕಂದಕಕ್ಕೆ ಉರುಳಿ ಬಿದ್ದ 50 ಪ್ರಯಾಣಿಕರಿದ್ದ ಬಸ್!
ಆಗ ಅವರ ಪರವಾಗಿ ಒಮ್ಮೆಗೆ ಘೋಷಣೆಗಳು ಹಾಗೂ ಚಪ್ಪಾಳೆಗಳು ಕೇಳಿ ಬಂದವು.ಅಜಾನ್ ಮುಗಿದ ನಂತರ ಅವರು ಎಂದಿನಂತೆ ಅವರು ತಮ್ಮ ಭಾಷಣವನ್ನು ಮುಂದುವರೆಸಿದರು.ಈಗ ಅಮಿತ್ ಶಾ ಅವರ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.