ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಮೀಪದ ಮಸೀದಿಯಿಂದ 'ಆಜಾನ್' (ಪ್ರಾರ್ಥನೆಗೆ ಮುಸ್ಲಿಂ ಕರೆ) ಕೇಳಿದ ನಂತರ ತಮ್ಮ ಭಾಷಣವನ್ನು ಸಂಕ್ಷಿಪ್ತವಾಗಿ ನಿಲ್ಲಿಸಿದರು.
ಸಿಸಿ ಪಾಟೀಲ್ ಕಚೇರಿ ಎದುರು ಶ್ರೀರಾಮ ಸೇನೆ ಸಂಘಟನೆ ಪ್ರತಿಭಟನೆಗೆ ನಿರ್ಧರಿಸಿದ್ದರು. ಆದ್ರೆ ಪೊಲೀಸ್ ಇಲಾಖೆ ಅವಕಾಶ ಕೊಡದಿದ್ದಕ್ಕೆ ಎಸಿ ಕಚೇರಿ ಎದುರು ಭಜನೆ ಭಕ್ತಿಗೀತೆ ಹಾಡುವುದರ ಮೂಲಕ ಪ್ರತಿಭಟನೆ ನಡೆಸಿ ಸಚಿವ ಸಿಸಿ ಪಾಟೀಲ್ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿ ಮಸೀದಿಗಳಲ್ಲಿನ ಮೈಕ್ಗಳನ್ನ ತೆರುವುಗೊಳಿಸುವಂತೆ ಒತ್ತಾಯಿಸಿದರು.
"ಆಡಿಟೋರಿಯಂ, ಕಾನ್ಫರೆನ್ಸ್ ಹಾಲ್, ಸಮುದಾಯ ಭವನ ಮತ್ತು ಔತಣಕೂಟ ಸಭಾಂಗಣ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಕೆ ಅಥವಾ ಸಾರ್ವಜನಿಕ ಸಭೆಯನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ನಡುವೆ ನಡೆಸುವಂತಿಲ್ಲ" ಎಂದು ಸುತ್ತೋಲೆ ಹೊರಡಿಸಲಾಗಿದೆ.
ಸರ್ಕಾರ ವಿರುದ್ಧ ಇಂದು ಹಿಂದೂ ಪರ ಸಂಘಟನೆಗಳು ಕೆಂಡ ಕಾರ್ತಿವೆ. ಆಕ್ರೋಶದ ಕಟ್ಟೆ ಒಡೆದಿದೆ. ನಮ್ಮ ದೇವಾಲಯಕ್ಕೆ ನಮಗೆ ಎಂಟ್ರಿ ಇಲ್ಲ ಅಂದ್ರೆ ನಾವು ಎಲ್ಲಿದ್ದೇವೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹೌದು ಮಸೀದಿಗಳ ಮೇಲೆ ಇರುವ ಅನಧಿಕೃತ ಲೌಡ್ ಸ್ಪೀಕರ್ ತೆರವಿಗೆ ಶ್ರೀರಾಮ ಸೇನೆ ಕರೆ ನೀಡಿತ್ತು. ಆದ್ರೆ ಸರ್ಕಾರ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗದ ವೇಳೆ ಇಂದು ಬೆಳಗ್ಗೆ ಆಜಾನ್ ಕೂಗುವ ವೇಳೆ ದೇವಸ್ಥಾನದಲ್ಲಿ ಮೈಕ್ ಇಟ್ಟು ರಾಮ ತಾರಕ, ಹನುಮಾನ್ ಚಾಲೀಸ್ ಮಂತ್ರ ಪಠಣೆಗೆ ಹಿಂದೂ ಸಂಘಟನೆಗಳು ರೆಡಿಯಾಗಿದ್ರು. ಆದ್ರೆ ಇದಕ್ಕೆ ಪೊಲೀಸರು ಮಾತ್ರ ಅನುವು ಮಾಡಿಕೊಡಲಿಲ್ಲ.
ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಯಾವುದೇ ಧ್ವನಿವರ್ಧಕಗಳನ್ನು ಬಳಸದೆ ಅಜಾನ್ ಧಾರ್ಮಿಕ ಪ್ರಾರ್ಥನೆ ಕರೆಯನ್ನು ಮಸೀದಿಗಳ ಮಿನಾರ್ಗಳಿಂದ ಮಾನವ ಧ್ವನಿಯಿಂದ ಮಾತ್ರ ಪಠಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅಮೇಠಿಯಲ್ಲಿ ತಮ್ಮ ಭಾಷಣದ ಮಧ್ಯ ಆಜಾನ್ ಪ್ರಾರ್ಥನೆ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಮುಗಿಯುವವರೆಗೆ ಭಾಷಣವನ್ನು ಸ್ಥಗಿತಗೊಳಿಸಿ ನಂತರ ಪ್ರಾರಂಭಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.