VIDEO: ಸೆಲ್ಫಿ ತೆಗೆದುಕೊಳ್ಳಲು 'ಮಹಾ' ಸಿಎಂ ಫಡ್ನವಿಸ್ ಪತ್ನಿ ಮಾಡಿದ್ದೇನು ಗೊತ್ತೇ?

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನಾವಿಸ್ ಭಾರತದ ಮೊದಲ ದೇಶೀಯ ಕರಾವಳಿ ವಿಹಾರ ನೌಕೆ ಅಂಗ್ರಿಯಾದಲ್ಲಿ ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಪಟ್ಟ ದೃಶ್ಯ ಈಗ ಈ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. 

Last Updated : Oct 21, 2018, 06:27 PM IST
VIDEO: ಸೆಲ್ಫಿ ತೆಗೆದುಕೊಳ್ಳಲು 'ಮಹಾ' ಸಿಎಂ ಫಡ್ನವಿಸ್ ಪತ್ನಿ ಮಾಡಿದ್ದೇನು ಗೊತ್ತೇ? title=
Photo:ANI

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನಾವಿಸ್ ಭಾರತದ ಮೊದಲ ದೇಶೀಯ ಕರಾವಳಿ ವಿಹಾರ ನೌಕೆ ಅಂಗ್ರಿಯಾದಲ್ಲಿ ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಪಟ್ಟ ದೃಶ್ಯ ಈಗ ಈ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. 

ಈ ವಿಡಿಯೋದಲ್ಲಿ ಅಮೃತಾ ಅವರು ಹಡಗಿಗಿರುವ ಬ್ಯಾರಿಕೇಡ್ ದಾಟಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.ಇದನ್ನು ಗಮನಿಸಿದ ಭದ್ರತಾ ಸಿಬ್ಬಂಧಿ ಅವರಿಗೆ ಆ ರೀತಿ ಮಾಡದಂತೆ ಸೂಚನೆ ಕೊಡುತ್ತಿರುವ ದೃಶ್ಯವು ಈಗ ವಿಡಿಯೋದಲ್ಲಿ ಸೆರೆಯಾಗಿದೆ.ಅಮೃತಾ   ಪತಿ ಹಾಗೂ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಂಗ್ರಿಯಾದ ಭಾರತದ ಮೊದಲ ಐಷಾರಾಮಿ ವಿಹಾರ ಮಾರ್ಗವನ್ನು ಉದ್ಘಾಟಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶೇಷವಾಗಿ ಕರಾವಳಿ ಪ್ರಯಾಣಕ್ಕಾಗಿ ಮುಂಬೈ ಮತ್ತು ಗೋವಾ ನಡುವೆ 2018 ರ ಅಕ್ಟೋಬರ್ 24 ರಂದು ಪ್ರಯಾಣ ಬೆಳೆಸಲಿದೆ. ಮರುದಿನ  ಬೆಳಗ್ಗೆ 9 ಗಂಟೆಗೆ ಕ್ರೂಸ್ ಹಡಗು ಗೋವಾವನ್ನು ತಲುಪಲಿದೆ.

ಶನಿವಾರದಂದು ಉದ್ಘಾಟನೆಯಾದ ಈ ಅಂಗ್ರಿಯಾ ಭಾರತದ ಮೊದಲ ದೇಶೀಯ ಕ್ರೂಸ್ ಆಗಿದೆ. ಹಡಗಿನಲ್ಲಿ ಎರಡು ರೆಸ್ಟೊರೆಂಟ್ಗಳು, ಆರು ಬಾರ್ಗಳು, ಈಜುಕೊಳ, ಡಿಸ್ಕೋಕ್ಯೂಕ್, ಒಂದು ಓದುವ ಕೊಠಡಿ ಮತ್ತು ಸ್ಪಾಗಳನ್ನು ಒಳಗೊಂಡಿದೆ. 104 ಕೋಣೆಗಳೊಂದಿಗೆ ಈ ಹಡಗು 400 ಪ್ರಯಾಣಿಕರನ್ನು ಮತ್ತು 70 ಸಿಬ್ಬಂದಿಗಳನ್ನು ಹಡಗಿನಲ್ಲಿ ಸಾಗಿಸುವ  ಸಾಮರ್ಥ್ಯವನ್ನು ಹೊಂದಿದೆ. ಇದು ಗೋವಾ ತಲುಪಲು 14 ಗಂಟೆಗಳ ತೆಗೆದುಕೊಳ್ಳುತ್ತದೆ.

 

Trending News