ಅರುಣಾಚಲ ಪ್ರದೇಶ: ಉಗ್ರರ ದಾಳಿಯಲ್ಲಿ ಎಂಎಲ್ಎ ತಿರಾಂಗ್ ಅಬೋಹ್ ಸೇರಿದಂತೆ 6 ಸಾವು

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಈ ದಾಳಿಯನ್ನು ಖಂಡಿಸಿ, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವ ರಾಜ್ನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.

Last Updated : May 21, 2019, 04:36 PM IST
ಅರುಣಾಚಲ ಪ್ರದೇಶ: ಉಗ್ರರ ದಾಳಿಯಲ್ಲಿ ಎಂಎಲ್ಎ ತಿರಾಂಗ್ ಅಬೋಹ್ ಸೇರಿದಂತೆ 6 ಸಾವು title=

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ನ್ಯಾಷನಲ್ ಪೀಪಲ್ಸ್ ಪಕ್ಷದ ಎಂಎಲ್ಎ ತಿರಾಂಗ್ ಅಬೋಹ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ತಿರಪ್ ಜಿಲ್ಲೆಯ ಬೋಗಾಪನಿ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲ್ಯಾಂಡ್ ನ ಉಗ್ರರು ತಿರಾಂಗ್ ಅಬೋಹ್ ಅವರನ್ನೇ ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ತಿರಾಂಗ್ ಅಬೋಹ್ ಅವರು ಕೋನ್ಸಾ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದು, 2019 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಅದರ ಫಲಿತಾಂಶ ಮೇ 23ರಂದು ಹೊರಬೀಳಲಿದೆ.

ತಿರಾಂಗ್ ಅಬೋಹ್ ಅವರ ದುರ್ಮರಣಕ್ಕೆ ಸಂತಾಪ ವ್ಯಕ್ತಪಡಿಸಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಈ ದಾಳಿಯನ್ನು ಖಂಡಿಸಿದ್ದು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಸಚಿವ ರಾಜ್ನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.

Trending News