Assam Elections 2021: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ

ಅಸ್ಸಾಂ ವಿಧಾನಸಭಾ ಚುನಾವಣೆ 2021 ರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಜೆಪಿ ರಾಜ್ಯದ 126 ರಲ್ಲಿ 92 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ.

Written by - Yashaswini V | Last Updated : Mar 5, 2021, 09:05 PM IST
  • ಅಸ್ಸಾಂ ವಿಧಾನಸಭೆಯಲ್ಲಿ ಒಟ್ಟು 126 ಸ್ಥಾನಗಳಿವೆ
  • 92 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ
  • ಬಿಜೆಪಿ ತನ್ನ 92 ಸ್ಥಾನಗಳಲ್ಲಿ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ
Assam Elections 2021: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ title=
Assam Assembly Elections 2021

ನವದೆಹಲಿ: ಅಸ್ಸಾಂ ವಿಧಾನಸಭಾ ಚುನಾವಣೆ 2021 ರ(Assam Assembly Elections 2021)  ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ (BJP) ಬಿಡುಗಡೆ ಮಾಡಿದೆ. ಬಿಜೆಪಿಯ ದೆಹಲಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ರಾಜ್ಯದಲ್ಲಿ ಎಜಿಪಿ (AGP) ಮತ್ತು ಯುಪಿಪಿಎಲ್ (UPPL) ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದರು.

ಚುನಾವಣಾ ಸಮಿತಿ ಸಭೆ :
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಗುರುವಾರ ಸಭೆ ಸೇರಿತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಚುನಾವಣಾ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು. ಚರ್ಚೆಯ ನಂತರ, ಚುನಾವಣಾ ಸಮಿತಿಯು ಅಸ್ಸಾಂ ವಿಧಾನಸಭಾ ಚುನಾವಣೆಗೆ ಹಲವಾರು ಹೆಸರುಗಳನ್ನು ಅನುಮೋದಿಸಿತು.

92 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ;
ಅಸ್ಸಾಂ ವಿಧಾನಸಭೆಯಲ್ಲಿ ಒಟ್ಟು 126 ಸ್ಥಾನಗಳಿದ್ದು, ಅದರಲ್ಲಿ 92 ಸ್ಥಾನಗಳಲ್ಲಿ ಬಿಜೆಪಿ (BJP) ಸ್ಪರ್ಧಿಸಲಿದೆ. ಅದೇ ಸಮಯದಲ್ಲಿ ಎಜಿಪಿ 26 ಮತ್ತು ಯುಪಿಪಿಎಲ್ 8 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ತನ್ನ 92 ಸ್ಥಾನಗಳಲ್ಲಿ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಟಿಕೆಟ್ ಪಡೆಯುವವರಲ್ಲಿ, 11 ಎಸ್‌ಟಿ ಮತ್ತು 4 ಎಸ್‌ಸಿ ಸಮುದಾಯದವರಾಗಿದ್ದಾರೆ. ಪಕ್ಷವು ಈ ಬಾರಿ 11 ಹಾಲಿ ಶಾಸಕರ ಟಿಕೆಟ್ ಕಡಿತಗೊಳಿಸಿದೆ  ಎಂದು ಅರುಣ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ - Tamil Nadu Assembly Elections: AIADMK ಪಕ್ಷದ ಮೊದಲ ಪಟ್ಟಿ ಬಿಡುಗಡೆ

ಮಜುಲಿ ಸ್ಥಾನದಿಂದ ಸರ್ಬಾನಂದ ಸೋನೊವಾಲ್ ಸ್ಪರ್ಧಿಸಲಿದ್ದಾರೆ :
ಅಸ್ಸಾಂ (Assam) ಸಿಎಂ ಸರ್ಬಾನಂದ ಸೋನೊವಾಲ್ ಮಜುಲಿ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾಗೆ ಅಸ್ಸಾಂನ ಜಲುಕ್ಬರಿ ಸ್ಥಾನದಿಂದ ಟಿಕೆಟ್ ನೀಡಲಾಗಿದೆ. ಈ ಸ್ಥಾನಗಳಿಂದ ಇಬ್ಬರೂ ಅಭ್ಯರ್ಥಿಗಳು ಈ ಹಿಂದೆ ಗೆದ್ದಿದ್ದರು ಎಂದವರು ತಿಳಿಸಿದರು.

ಬಾರ್ಸೋಲಾದ ಗಣೇಶ್ ಲಿಂಬುವಿಗೆ ಟಿಕೆಟ್ ನೀಡಲಾಗಿದೆ ;
ರಂಜಿತ್ ದಾಸ್ ಅವರಿಗೆ ಪಚಾರ್ ಖುಷಿಯಿಂದ ಟಿಕೆಟ್ ನೀಡಲಾಗಿದೆ. ಬಾರ್ಸೋಲಾದಿಂದ ಗಣೇಶ್ ಲಿಂಬು, ಸೋಟಿಯಾದಿಂದ ಪದ್ಮಾ ಹಜರಿಕಾ, ಖುಂಟೈನಿಂದ ಮೃಣಾಲ್ ಸೈಕಿಯಾ, ಮರಿಯಾನಿಯಿಂದ ರಮಣಿ ತಂತಿ, ಮಹಾಮರಾದಿಡ್ನ ಜುಗೆನ್ ಮೋಹನ್ ಮತ್ತು ಲಖಿಂಪುರದಿಂದ ಮನವ್ ದೇಕಾ ಅವರನ್ನು ಕಣಕ್ಕಿಳಿಸಲಾಗಿದೆ.

ಕೌಶಿಕ್ ರೈ ಲಖಿಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ:
ಅಂತೆಯೇ, ಜಾಕುವಾಖಾನಾದಿಂದ ನಬ್ ಕುಮಾರ್ ಡೋಲ್, ಧೆಮಾಜಿಯಿಂದ ರಾನೋಸ್ ಪೆಗು, ಜೇನ್ ನಿಂದ ಭುವನ್ ಪೆಗು, ರತ್ಬರಿಯಿಂದ ವಿಜಯ್, ಕರೀಂಗಂಜ್ ಉತ್ತರದಿಂದ ಮನಸ್ ದಾಸ್, ಸೋನೈನಿಂದ ಅಮಿನುಲ್ ಹಕ್ ಲಷ್ಕರ್ ಮತ್ತು ಲಖಿಪುರ ವಿಧಾನಸಭಾ ಕ್ಷೇತ್ರದಿಂದ ಕೌಶಿಕ್ ರಾಯ್ ಅವರಿಗೆ ಟಿಕೆಟ್ ನೀಡಲಾಗಿದೆ. ಜಯಂತ ಬರುವಾ ಅವರಿಗೆ ನಲ್ಬರಿಯಿಂದ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ - Elections ಮಧ್ಯೆ ನಕ್ಸಲರಿಂದ ದೊಡ್ಡ ದಾಳಿ ಬಗ್ಗೆ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ

ಅಸ್ಸಾಂನ 126 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯ (Assam Assembly Elections 2021) ಮೊದಲ ಹಂತದಲ್ಲಿ 47 ಸ್ಥಾನಗಳಿಗೆ ಮಾರ್ಚ್ 27 ರಂದು ಮತದಾನ ನಡೆಯಲಿದೆ. ಅದೇ ಸಮಯದಲ್ಲಿ, ಎರಡನೇ ಹಂತದಲ್ಲಿ ಏಪ್ರಿಲ್ 1 ರಂದು 39 ಸ್ಥಾನಗಳಲ್ಲಿ ಮತ ಚಲಾಯಿಸಲಾಗುವುದು. ಮೂರನೇ ಮತ್ತು ಅಂತಿಮ ಹಂತದ ಮತದಾನ ಏಪ್ರಿಲ್ 6 ರಂದು ಮತದಾನ ನಡೆಯಲಿದೆ. ಈ ಸಮಯದಲ್ಲಿ 40 ಕ್ಷೇತ್ರಗಳಲ್ಲಿ ಮತ ಚಲಾಯಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News