ಲಡಾಖ್‌ನಲ್ಲಿ ಹಿಮಪಾತಕ್ಕೆ 3 ಬಲಿ, ಕಾಣೆಯಾದವರ ಪತ್ತೆಗೆ ಮುಂದುವರೆದ ಶೋಧ ಕಾರ್ಯ

ಜಮ್ಮು-ಕಾಶ್ಮೀರದ ಲಡಾಖ್‌ನ ಖಾರ್‌ದುಂಗ ಲಾ ಪಾಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಹಿಮಪಾತ.

Last Updated : Jan 18, 2019, 01:40 PM IST
ಲಡಾಖ್‌ನಲ್ಲಿ ಹಿಮಪಾತಕ್ಕೆ 3 ಬಲಿ, ಕಾಣೆಯಾದವರ ಪತ್ತೆಗೆ ಮುಂದುವರೆದ ಶೋಧ   ಕಾರ್ಯ title=
Pic: ANI

ಜಮ್ಮು-ಕಾಶ್ಮೀರ್: ಜಮ್ಮು-ಕಾಶ್ಮೀರದ ಲಡಾಖ್‌ನ ಖಾರ್‌ದುಂಗ ಲಾ ಪಾಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಹಿಮಪಾತದಲ್ಲಿ ಕನಿಷ್ಠ 10 ಜನರು ಸಿಲುಕಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ ಹಿಮಪಾತಕ್ಕೆ ಸಿಳುಕಿದ್ದವರಲ್ಲಿ ಮೂವರು ಮೃತಪಟ್ಟಿದ್ದು, ಇನ್ನುಳಿದ ಕಾಣೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವೆದಿದೆ.

ಎರಡು ಟಿಪ್ಪರ್ ಗಳು ಮತ್ತು ಸ್ಕಾರ್ಪಿಯೊ ಕಾರಿನಲ್ಲಿ ಒಟ್ಟು 12 ಮಂದಿ ಸಾಗುತ್ತಿದ್ದರು. ಈ ವೇಳೆ ವಿಶ್ವದ ಅತ್ಯಂತ 17,500 ಅಡಿ ಎತ್ತರದ ರಸ್ತೆಯ ಮೇಲೆ ಹಠಾತ್ ಸಂಭವಿಸಿದ ಹಿಮಪಾತಕ್ಕೆ ಹಲವು ವಾಹನಗಳು ಸಿಲುಕಿವೆ ಎಂದು ANI ವರದಿ ಮಾಡಿದೆ. ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆ ಘಟನಾ ಸ್ಥಳಕ್ಕೆ ಧಾವಿಸಿವೆ. ಈ ಪ್ರದೇಶ ಲೇಹ್ ಪಟ್ಟಣದಿಂದ 40 ಕಿ.ಮೀ.ದೂರದಲ್ಲಿದೆ.

ಬೆಳಗ್ಗೆ 7 ಗಂಟೆಗೆ ಈ ಹಿಮಪಾತ ಸಂಭವಿಸಿದೆ ಎಂದು ಬಾರ್ಡರ್ ರಸ್ತೆಗಳ ಸಂಸ್ಥೆ (BRO) ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಕಾಣೆಯಾದವರ ರಕ್ಷಣೆಗಾಗಿ BRO ತನ್ನ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನೂ ಕಳುಹಿಸಿದೆ. ಟ್ರಕ್ನಲ್ಲಿದ್ದ ವ್ಯಕ್ತಿಗಳು ನಾಗರಿಕರೇ ಅಥವಾ ಭದ್ರತಾ ಸಿಬ್ಬಂದಿಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕಾಶ್ಮೀರ ವಿಭಾಗದ ಒಂಬತ್ತು ಜಿಲ್ಲೆಗಳಿಗೆ ಹಠಾತ್ ಹಿಮಪಾತದ ಬಗ್ಗೆ ಎಚ್ಚರಿಕೆ ನೀಡಲಾಯಿತು. ಅನಂತ್ನಾಗ್, ಕುಲ್ಗಮ್, ಬಡ್ಗಮ್, ಬರಾಮುಲ್ಲಾ, ಕುಪ್ವಾರಾ, ಬಂಡಿಪೊರಾ, ಗಾಂಡ್ಬರ್ಲ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.

MeT ಅಧಿಕಾರಿಗಳ ಪ್ರಕಾರ, ಕಾಶ್ಮೀರ ಕಣಿವೆಯ ಹಲವಾರು ಭಾಗಗಳಲ್ಲಿ ಗುರುವಾರ 5.4 ಮಿ.ಮೀ ಹಿಮಪಾತ ಸಂಭವಿಸಿದೆ, ಉತ್ತರ ಕಾಶ್ಮೀರದ ಗುಲ್ಮಾರ್ಗ್ನಲ್ಲಿ 15.2 ಮಿ.ಮೀ ಹಿಮಪಾತ ಸಂಭವಿಸಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಂನಲ್ಲಿ 9.0 ಮಿ.ಮೀ ಮತ್ತು ಕುಪ್ವಾರಾ 16.2 ಮಿ.ಮೀ. ಹಿಮಪಾತ ದಾಖಲಿಸಲಾಗಿದೆ.

ಈ ನಡುವೆ ಜನವರಿ 19 ರಿಂದ ಜನವರಿ 23 ರವರೆಗೆ ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತವಾಗುವ ಬಗ್ಗೆ MeT ಇಲಾಖೆ ಭವಿಷ್ಯ ನುಡಿದಿದೆ. 

Trending News