ಇನ್ನೆಂದೂ ನೋಟು ಅಮಾನ್ಯದಂತಹ ಮಹಾ ಪ್ರಮಾದ ಎಸಗದಿರಿ- ಮೋದಿಗೆ ಮನಮೋಹನ್ ಸಿಂಗ್ ಸಲಹೆ

   

Last Updated : Dec 7, 2017, 06:07 PM IST
ಇನ್ನೆಂದೂ ನೋಟು ಅಮಾನ್ಯದಂತಹ ಮಹಾ ಪ್ರಮಾದ ಎಸಗದಿರಿ- ಮೋದಿಗೆ   ಮನಮೋಹನ್ ಸಿಂಗ್ ಸಲಹೆ title=

ರಾಜಕೋಟ್ : "ಮೋದಿಜೀ, ನೋಟು ಅಪನಗದೀಕರಣದಂತಹ ಮಹಾ ಪ್ರಮಾದವನ್ನು ಇನ್ನು ಮುಂದೆ ಎಂದೂ ಪುನರಾವರ್ತಿಸದಿರಿ'' ಎಂದು ಮಾಜಿ ಪ್ರಧಾನಿ, ಹಿರಿಯ ಕಾಂಗ್ರೆಸ್‌ ನಾಯಕ, ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ. 

ಗುಜರಾತ್ನ ರಾಜ್ಕೋಟ್ನಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತಿದ್ದ ಮನಮೋಹನ್‌ ಸಿಂಗ್‌, "ನೋಟು ಅಪನಗದೀಕರಣ ಒಂದು ಮಹಾ ಪ್ರಮಾದ. ಇದರಿಂದಾಗಿ ಬೃಹತ್‌ ಪ್ರಮಾಣದ ಕಪ್ಪು ಹಣ ಬಿಳಿಯಾಗುವುದಕ್ಕೆ ಉತ್ತಮ ಅವಕಾಶ ಕಲ್ಪಿಸಲಾಯಿತು. ದುರದೃಷ್ಟವಶಾತ್‌ ಅದೇ ವೇಳೆ ಲಕ್ಷಾಂತರ ಜನರ ಜೀವನಾಧಾರ ಉದ್ಯೋಗಗಳನ್ನು ಅದು ಕಸಿದು ಕೊಂಡು ಅಸಂಖ್ಯರನ್ನು ಬೀದಿಪಾಲು ಮಾಡಿತು; ನೋಟು ಅಪನಗದೀಕರಣದಿಂದ ಭ್ರಷ್ಟಾಚಾರ ನಿಲ್ಲಲಿಲ್ಲ; ಕಪ್ಪು ಹಣಕ್ಕೆ ಕಡಿವಾಣ ಬೀಳಲಿಲ್ಲ; ಮೇಲಾಗಿ ಅದು ಯುವ ಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಿಲ್ಲ'' ಎಂದು ಮೋದಿ ಸರ್ಕಾರವನ್ನು ಅವರು ಟೀಕಿಸಿದರು. 

ನೋಟು ಅಪನಗದೀಕರಣದ ಮೋದಿ ಸರ್ಕಾರದ ಕ್ರಮದಿಂದ ದೇಶದ ಆರ್ಥಿಕತೆಗೆ, ಜನರಿಗೆ, ಬಡವರಿಗೆ ತೊಂದರೆಯಾಯಿತು. ನಮ್ಮ ಆಡಳಿತದ ಸಂದರ್ಭದಲ್ಲಿ ನಾವೆಂದೂ ಈ ರೀತಿಯ ನಿರ್ಧಾರಗಳನ್ನು, ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಇನ್ನಾದರೂ ಇಂತಹ ಕ್ರಮಗಳನ್ನು ಕೈಗೊಳ್ಳದಿರಿ ಎಂದು ಸಿಂಗ್‌ ಮೋದಿಗೆ ಕಿವಿಮಾತು ಹೇಳಿದರು. 

Trending News