ಅಯೋಧ್ಯೆ ತೀರ್ಪು ಭಾರತದ ಏಕತೆ ಮತ್ತು ಅದರ ಶ್ರೇಷ್ಠ ಸಂಸ್ಕೃತಿಗೆ ಶಕ್ತಿ ನೀಡುತ್ತದೆ-ಅಮಿತ್ ಶಾ

ಅಯೋಧ್ಯೆ ಭೂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಐತಿಹಾಸಿಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶ್ಲಾಘಿಸಿದ್ದಾರೆ. ಈ ತೀರ್ಪು ಭಾರತದ ಏಕತೆ ಮತ್ತು ಅದರ ಶ್ರೇಷ್ಠ ಸಂಸ್ಕೃತಿಗೆ ಶಕ್ತಿ ನೀಡುತ್ತದೆ ಎಂದು ಶಾ ಹೇಳಿದ್ದಾರೆ.

Last Updated : Nov 9, 2019, 05:10 PM IST
ಅಯೋಧ್ಯೆ ತೀರ್ಪು ಭಾರತದ ಏಕತೆ ಮತ್ತು ಅದರ ಶ್ರೇಷ್ಠ ಸಂಸ್ಕೃತಿಗೆ ಶಕ್ತಿ ನೀಡುತ್ತದೆ-ಅಮಿತ್ ಶಾ title=

ನವದೆಹಲಿ: ಅಯೋಧ್ಯೆ ಭೂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಐತಿಹಾಸಿಕ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶ್ಲಾಘಿಸಿದ್ದಾರೆ. ಈ ತೀರ್ಪು ಭಾರತದ ಏಕತೆ ಮತ್ತು ಅದರ ಶ್ರೇಷ್ಠ ಸಂಸ್ಕೃತಿಗೆ ಶಕ್ತಿ ನೀಡುತ್ತದೆ ಎಂದು ಶಾ ಹೇಳಿದ್ದಾರೆ.

"ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ಸ್ವತಃ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಇದು ಭಾರತದ ಏಕತೆ, ಸಮಗ್ರತೆ ಮತ್ತು ಶ್ರೇಷ್ಠ ಸಂಸ್ಕೃತಿಗೆ ಮತ್ತಷ್ಟು ಬಲವನ್ನು ನೀಡುತ್ತದೆ" ಎಂದು ಶಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ."ದಶಕಗಳಿಂದ ನಡೆಯುತ್ತಿರುವ  ರಾಮ್ ಜನ್ಮಭೂಮಿಯ ಈ ಕಾನೂನು ವಿವಾದವು ಇಂದು ಈ ನಿರ್ಧಾರದೊಂದಿಗೆ ಅಂತಿಮಗೊಂಡಿದೆ. ಭಾರತದ ನ್ಯಾಯ ವ್ಯವಸ್ಥೆಯನ್ನು ಮತ್ತು ಎಲ್ಲಾ ನ್ಯಾಯಮೂರ್ತಿಗಳನ್ನು ನಾನು ಅಭಿನಂದಿಸುತ್ತೇನೆ" ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. 

ಇದೇ ವೇಳೆ ಇದಕ್ಕಾಗಿ ಕಾರ್ಯನಿರ್ವಹಿಸಿದ ಪುರೋಹಿತರಿಗೆ ಮತ್ತು  ಹಲವು ವರ್ಷಗಳಲ್ಲಿ ದಣಿವರಿಯದೆ ಕೆಲಸ ಮಾಡಿದ ಸಾವಿರಾರು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. "ನಾನು ಎಲ್ಲಾ ಸಂಸ್ಥೆಗಳಿಗೆ, ದೇಶದ ಸಂತ ಸಮಾಜ ಮತ್ತು ಅದಕ್ಕಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದ ಅಸಂಖ್ಯಾತ ಅಪರಿಚಿತ ಜನರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೆ ಅವರು ನ್ಯಾಯಾಲಯದ ತೀರ್ಪನ್ನು ಗೌರವಿಸುವಂತೆ ಎಲ್ಲಾ ಸಮುದಾಯದ ಜನರನ್ನು ಮನವಿ ಮಾಡಿದ್ದಾರೆ ಅ, "ಈ ನಿರ್ಧಾರವನ್ನು ಸುಲಭವಾಗಿ ಸ್ವೀಕರಿಸಲು ಮತ್ತು ಶಾಂತಿ ಮತ್ತು ಸೌಹಾರ್ದತೆಯೊಂದಿಗೆ ನಮ್ಮ 'ಏಕ್ ಭಾರತ್-ಶ್ರೇಷ್ಠ ಭಾರತ್' ಪ್ರತಿಜ್ಞೆಗೆ ಬದ್ಧರಾಗಿರಲು ನಾನು ಎಲ್ಲಾ ಸಮುದಾಯಗಳು ಮತ್ತು ಧರ್ಮಗಳ ಜನರಿಗೆ ಮನವಿ ಮಾಡುತ್ತೇನೆ ಎಂದು ವಿನಂತಿಸಿಕೊಂಡಿದ್ದಾರೆ.

Trending News