ಅಯೋಧ್ಯೆ ತೀರ್ಪು:ಪ್ರಾಚೀನ ಗ್ರಂಥಗಳನ್ನು ಪುರಾವೆಯಾಗಿ ಪರಿಶೀಲಿಸಿದ್ದ ಸುಪ್ರೀಂ

 ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ಹಿಂದುಗಳಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶನಿವಾರ ಸರ್ವಾನುಮತದ ತೀರ್ಪು ನೀಡಿದೆ.

Last Updated : Nov 9, 2019, 01:44 PM IST
ಅಯೋಧ್ಯೆ ತೀರ್ಪು:ಪ್ರಾಚೀನ ಗ್ರಂಥಗಳನ್ನು ಪುರಾವೆಯಾಗಿ ಪರಿಶೀಲಿಸಿದ್ದ ಸುಪ್ರೀಂ     title=
file photo

ನವದೆಹಲಿ:  ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ಹಿಂದುಗಳಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಶನಿವಾರ ಸರ್ವಾನುಮತದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ಸಾಕಷ್ಟು ಸಂಕೀರ್ಣವಾಗಿರುವ ಅಯೋಧ್ಯೆ ಪ್ರಕರಣದ ವಿಚಾರವನ್ನು ಹಲವಾರು ಪುರಾವೆಗಳ ಆಧಾರದ ಮೇಲೆ ಪರಿಗಣಿಸಿದೆ.ಇದಕ್ಕಾಗಿ ಭಾರತದ ಪುರಾತತ್ವ ಸಮೀಕ್ಷೆ ವರದಿಗಳು ಹಾಗೂ ಇನ್ನಿತರ ದಾಖಲೆಗಳನ್ನು ಅದು ಪರಿಶೀಲಿಸಿದೆ. ಇದರ ಆಧಾರದ ಮೇಲೆ ಅಯೋಧ್ಯೆ ರಾಮನ ಜನ್ಮಸ್ಥಳ ಎನ್ನುವ ವಾದವನ್ನು ಖಚಿತಪಡಿಸಿಕೊಂಡಿದೆ.

ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಧ್ವಂಸ ಗೊಳಿಸಿದ ಮಸೀದಿಯ ಕೆಳಗೆ ಒಂದು ರಚನೆ ಇದೆ ಮತ್ತು ಅಲ್ಲಿನ ಉತ್ಖನನದಲ್ಲಿನ ವಸ್ತುಗಳು ದೇವಾಲಯವೆಂದು ಸೂಚಿಸುತ್ತವೆ ಎಂದು ಹಿಂದೂ ವಕೀಲರು ವಾದಿಸಿದ್ದರು. ಇನ್ನೊಂದೆಡೆ ಮುಸ್ಲಿಂ ಗುಂಪಿನ ಪರವಾಗಿ ವಾದಿಸಿದ ವಕೀಲರು ರಚನೆಯ ಬಗ್ಗೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲವೆಂದು ಹೇಳಿದ್ದರು.

ಪ್ರಕರಣದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ಗೆ ಹಾಜರುಪಡಿಸಿದ ದಾಖಲೆಗಳಲ್ಲಿ ಪ್ರಮುಖವಾಗಿ 1611 ರಲ್ಲಿ ಇಂಗ್ಲಿಷ್ ವ್ಯಾಪಾರಿಯೊಬ್ಬರ ಪ್ರವಾಸ ಕಥೆಗಳು, 1740-1770ರಲ್ಲಿ ಜೆಸ್ಯೂಟ್ ಮಿಷನರಿ ವಿವರ, ಮತ್ತು ಪ್ರಾಚೀನ ಹಿಂದು ಧಾರ್ಮಿಕ ಗ್ರಂಥಗಳಾದ ಸ್ಕಂದ ಪುರಾಣದ 18,000 ಕ್ಕೂ ಹೆಚ್ಚು ಶ್ಲೋಕದ ಪಠ್ಯಗಳು ರಾಮನ ಜನ್ಮಸ್ಥಳದ ವಿವರಣೆಯನ್ನು ತಿಳಿಸುತ್ತವೆ. 

Trending News