ಅಯೋಧ್ಯಾ ರಾಮ ಮಂದಿರ ಪ್ರಕರಣ : ಮೋದಿ ಟಾರ್ಗೆಟ್ ಮಾಡಿದ ಸಿಬಲ್

``ಅಯೋಧ್ಯೆಯಲ್ಲಿ ರಾಮ ಬಯಸಿದಾಗ ಮಾತ್ರ ರಾಮ ಮಂದಿರ ನಿರ್ಮಾಣವಾಗುತ್ತದೆಯೇ ಹೊರತು ಪ್ರಧಾನಿ ಮೋದಿ ಬಯಸಿದಾಗ ಅಲ್ಲ'' ಎಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.

Last Updated : Dec 7, 2017, 11:55 AM IST
ಅಯೋಧ್ಯಾ ರಾಮ ಮಂದಿರ ಪ್ರಕರಣ : ಮೋದಿ ಟಾರ್ಗೆಟ್ ಮಾಡಿದ ಸಿಬಲ್  title=

ಪ್ರಧಾನಿ ನರೇಂದ್ರ ಮೋದಿ 'ನಿಜವಾದ' ಹಿಂದೂ ಅಲ್ಲ ಎಂದು ಆರೋಪಿಸಿದ ನಂತರ, ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಯೋಧ್ಯೆ ರಾಮ ಮಂದಿರದ ವಿಚಾರದಲ್ಲಿ  ಬಗ್ಗೆ ಬಿಜೆಪಿಯನ್ನು ಟಾರ್ಗೆಟ್ ಮಾಡಿದ್ದಾರೆ.

ಬಾಬ್ರಿ ಮಸೀದಿ-ರಾಮ್ ಜನ್ಮಭೂಮಿ ಪ್ರಕರಣದ ತೀರ್ಪು 2019 ಲೋಕಸಭೆ ಚುನಾವಣೆಯ ಬಳಿಕ ನೀಡಬೇಕೆಂದು ಸುಪ್ರೀಂಕೋರ್ಟ್ನಲ್ಲಿ ಮಂಡಿಸಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಬಲ್, ``ಅಯೋಧ್ಯೆಯಲ್ಲಿ ರಾಮ ಬಯಸಿದಾಗ ಮಾತ್ರ ರಾಮ ಮಂದಿರ ನಿರ್ಮಾಣವಾಗುತ್ತದೆಯೇ ಹೊರತು ಪ್ರಧಾನಿ ಮೋದಿ ಬಯಸಿದಾಗ ಅಲ್ಲ'' ಎಂದು ಟೀಕಿಸಿದ್ದಾರೆ.

"ನಾವು ದೇವರನ್ನು ನಂಬುತ್ತೇವೆ, ನಿಮ್ಮನ್ನಲ್ಲ(ಮೋದಿ). ನೀವು ಆ ದೇವಾಲಯವನ್ನು ನಿರ್ಮಿಸಲು ಹೋಗುತ್ತಿಲ್ಲ .. ಹಾಗೆಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು... ದೇವರು ಬಯಸಿದರೆ ಅದು ಯಾವಾಗ ಬೇಕಾದರೂ ನಿರ್ಮಿಸಲ್ಪಡುತ್ತದೆ. ಅದನ್ನು ನ್ಯಾಯಾಲಯ ನಿರ್ಧರಿಸುತ್ತದೆ'' ಎಂದು ಖಾರವಾಗಿ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ. 

ಸುಪ್ರೀಂ ಕೋರ್ಟ್ನಲ್ಲಿ ಡಿ.5 ರಂದು ನಡೆದ ವಿಚಾರಣೆಯಲ್ಲಿ ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ್ದ ವಕೀಲ ಸಿಬಲ್, 2019 ರ ಲೋಕಸಭೆ ಚುನಾವಣೆ ಫಲಿತಾಂಶದ ತನಕ ತೀರ್ಪು ಮುಂದೂಡಬೇಕೆಂದು ಮನವಿ ಮಾಡಿದ್ದರು. ಆದರೀಗ ಅವರು ಸುಪ್ರೀಂ ಕೋರ್ಟ್ನಲ್ಲಿ ಮಂಡಳಿಯನ್ನು ಪ್ರತಿನಿಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಮೊದಲು "ಸತ್ಯವನ್ನು ಪರಿಶೀಲಿಸಿ" ಎಂದು ಪ್ರಧಾನ ಮಂತ್ರಿಗೆ ಸಿಬಲ್ ಹೇಳಿದ್ದಾರೆ.

"ಕೆಲವೊಮ್ಮೆ ನಮ್ಮ ಪ್ರಧಾನಿಗಳು ವಿಷಯಗಳ ಬಗ್ಗೆ ತಿಳಿಯದೆ ಹೇಳಿಕೆ ನೀಡುತ್ತಾರೆ. ಅಮಿತ್ ಷಾ ಮತ್ತು ಪ್ರಧಾನಿ ಮೋದಿ ಅವರು ನಾನು ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ ನಾನು ಎಂದಿಗೂ ಸುನ್ನಿ ವಕ್ಫ್ ಬೋರ್ಡ್ ವಕೀಲನಾಗಿರಲಿಲ್ಲ. ನಿಮ್ಮ ಅಧ್ಯಕ್ಷ (ಷಾ) ಆ ರೀತಿ ಏಕೆ ಹೇಳಿದ್ದಾರೆ ಎಂದು ನನಗೆ ಅರ್ಥವಾಗುತ್ತದೆ. ಏಕೆಂದರೆ ನಾನು ಅದಕ್ಕಿಂತ ಉತ್ತಮವಾದ ಹೇಳಿಕೆಯನ್ನು ಅವರಿಂದ ನಿರೀಕ್ಷಿಸುವುದಿಲ್ಲ'' ಎಂದು ಸಿಬಲ್ ವ್ಯಂಗ್ಯವಾಡಿದ್ದಾರೆ. 

Trending News