ನವದೆಹಲಿ: ಆಗಸ್ಟ್ ತಿಂಗಳು ನಾಳೆಯಿಂದ ಪ್ರಾರಂಭವಾಗುತ್ತಿದೆ. ಹಬ್ಬಗಳು ಮತ್ತು ರಾಷ್ಟ್ರೀಯ ರಜಾ ದಿನಗಳು (Holidays) ಈ ತಿಂಗಳಿನಲ್ಲಿ ಮತ್ತೆ ಪ್ರಾರಂಭವಾಗುತ್ತವೆ. ಆಗಸ್ಟ್ ತಿಂಗಳಿನಲ್ಲಿ ಒಟ್ಟು 16 ರಜಾದಿನಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ರಜಾದಿನಗಳ ಪಟ್ಟಿಯನ್ನು ನೀವು ಮುಂಚಿತವಾಗಿ ಪರಿಶೀಲಿಸುವುದು ಬಹಳ ಮುಖ್ಯ, ಇದರಿಂದ ನಿಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳು ನಿಲ್ಲುವುದಿಲ್ಲ.
ಆಗಸ್ಟ್ ತಿಂಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕುಗಳು ಬಂದ್ ಇರಲಿವೆ. ಇವುಗಳಲ್ಲಿ ಭಾನುವಾರ ಮತ್ತು ಎರಡನೇ ಶನಿವಾರ (ವಾರಾಂತ್ಯ) ಕೂಡ ಶಾಮೀಲಾಗಿವೆ. ಬ್ಯಾಂಕುಗಳ ಕಾರ್ಯಗಳನ್ನು ಇತ್ಯರ್ಥಗೊಳಿಸಲು, ಈ ದಿನಾಂಕಗಳನ್ನು ಮೊದಲೇ ನೆನಪಿನಲ್ಲಿಟ್ಟುಕೊಳ್ಳಿ. ಆದರೆ, ಬ್ಯಾಂಕುಗಳ ಈ ಎಲ್ಲಾ ರಜಾದಿನಗಳು ವಿಭಿನ್ನ ರಾಜ್ಯಗಳು ಮತ್ತು ವಿಭಿನ್ನ ಹಬ್ಬಗಳ ಕಾರಣ ಇದ್ರಲಿವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ರಜಾ ದಿನಗಳಿರುವ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬ್ಯಾಂಕ್ ಗಳು ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ.
ರಜಾ ದಿನದಿಂದಲೇ ತಿಂಗಳು ಆರಂಭವಾಗುತ್ತಿದೆ
ನಮ್ಮ ಸಹಯೋಗಿ ವೆಬ್ ಸೈಟ್ ಝೀ ಬಿಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಬರುವ ಶನಿವಾರದಿಂದ ಆಗಸ್ಟ್ ತಿಂಗಳು ಆರಂಭವಾಗುತ್ತಿದೆ. ಅಂದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ (ಈದ್-ಅಲ್-ಅದಾ) ಪ್ರಯುಕ್ತ ರಜೆ ಇದೆ. ಇನ್ನೊಂದೆಡೆ ತಿಂಗಳ ಅಂತ್ಯ ಅಂದರೆ ಆಗಸ್ಟ್ 31ರಂದು ಓಣಂ ಹಬ್ಬದ ಪ್ರಯುಕ್ತ ಸಂಬಂಧಿತ ರಾಜ್ಯಗಳಲ್ಲಿ ರಜೆ ಇರಲಿದೆ.
ರಜಾ ದಿನಗಳ ಪಟ್ಟಿ ಇಂತಿದೆ
ಆಗಸ್ಟ್ 1 - ಬಕ್ರೀದ್
ಆಗಸ್ಟ್ 2 - ಭಾನುವಾರ
ಆಗಸ್ಟ್ 3 - ರಕ್ಷಾ ಬಂಧನ್
ಆಗಸ್ಟ್ 8 - ಎರಡನೇ ಶನಿವಾರ
ಆಗಸ್ಟ್ 9- ಭಾನುವಾರ
ಆಗಸ್ಟ್ 11 - ಶ್ರೀ ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 12 - ಶ್ರೀ ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 13 - ಇಂಫಾಲ್ ದೇಶಪ್ರೇಮಿಗಳ ದಿನ
ಆಗಸ್ಟ್ 15 - ಸ್ವಾತಂತ್ರ್ಯ ದಿನ
ಆಗಸ್ಟ್ 16- ಭಾನುವಾರ
ಆಗಸ್ಟ್ 20 - ಶ್ರೀಮಂತ ಶಂಕರದೇವ್
ಆಗಸ್ಟ್ 21 - ಹರಿತಾಲಿಕಾ ತೀಜ್ ಹಬ್ಬ
ಆಗಸ್ಟ್ 22 - ಗಣೇಶ ಚತುರ್ಥಿ, ನಾಲ್ಕನೇ ಶನಿವಾರ
ಆಗಸ್ಟ್23 - ಭಾನುವಾರ
ಆಗಸ್ಟ್ 29 - ಕರ್ಮ ಪೂಜೆ
ಆಗಸ್ಟ್ 31 - ಇಂದ್ರಯಾತ್ರೆ ಮತ್ತು ತಿರುಓಣಂ
ATM ಹಾಗೂ ಆನ್ಲೈನ್ ಸೇವೆಗಳು ಎಂದಿನಂತೆ ಶುರು ಇರಲಿವೆ
ಎಲ್ಲ ಬ್ಯಾಂಕ್ ಗಳ ATM ಹಾಗೂ ಆನ್ಲೈನ್ ಸೇವೆಗಳು ಎಂದಿನಂತೆ ಜಾರಿಯಲ್ಲಿರಲಿವೆ. ಅಂದರೆ, ರಜಾ ದಿನಗಳಲ್ಲಿಯೂ ಕೂಡ ನೀವು ಈ ಸೇವೆಗಳ ಬಳಕೆ ಮಾಡಬಹುದು. ನಿಮ್ಮ ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಕೂಡ ಎಂದಿನಂತೆ ಚಾಲ್ತಿಯಲ್ಲಿ ಇರಲಿವೆ.