Baramulla Attack: ಬುರ್ಖಾ ಧರಿಸಿ ಬಂದು ವೈನ್ ಶಾಪ್ ಮೇಲೆ ಗ್ರೆನೇಡ್ ಬಾಂಬ್ ದಾಳಿ, 1 ಮೃತ, ಮೂವರಿಗೆ ಗಾಯ

Baramulla Attack in Jammu Kashmir: ಮಂಗಳವಾರ ರಾತ್ರಿ ಬುರ್ಖಾ ಧರಿಸಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ.  ಬಾರಾಮುಲ್ಲಾ ಜಿಲ್ಲೆಯ ದೀವಾನ್ ಬಾಗ್ ಪ್ರದೇಶದಲ್ಲಿ ಹೊಸದಾಗಿ ತೆರೆಯಲಾದ ವೈನ್ ಶಾಪ್‌ನಲ್ಲಿ ಈ ಘಟನೆ ನಡೆದಿದೆ.

Written by - Yashaswini V | Last Updated : May 18, 2022, 07:28 AM IST
  • ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಹೊಸದಾಗಿ ತೆರೆಯಲಾದ ವೈನ್ ಶಾಪ್‌ನಲ್ಲಿ ಗ್ರೆನೇಡ್ ದಾಳಿ
  • ಘಟನೆಯಲ್ಲಿ ಓರ್ವ ಉದ್ಯೋಗಿ ಸಾವನ್ನಪ್ಪಿದರು ಮತ್ತು ಮೂವರು ಗಾಯಗೊಂಡಿದ್ದಾರೆ
  • ಬುರ್ಖಾ ಧರಿಸಿ ಸವಾರಿ ಮಾಡುತ್ತಿದ್ದ ಒಬ್ಬರು ಗ್ರೆನೇಡ್ ಅನ್ನು ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Baramulla Attack: ಬುರ್ಖಾ ಧರಿಸಿ ಬಂದು ವೈನ್ ಶಾಪ್ ಮೇಲೆ  ಗ್ರೆನೇಡ್ ಬಾಂಬ್ ದಾಳಿ, 1 ಮೃತ, ಮೂವರಿಗೆ ಗಾಯ  title=
Baramulla Attack

ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಗ್ರೆನೇಡ್  ದಾಳಿ: ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿಸಲಾದ ವೈನ್ ಶಾಪ್ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು ಘಟನೆಯಲ್ಲಿ  ನಾಲ್ವರು ನೌಕರರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇತರ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ವರದಿಯಾಗಿದೆ.

ಬುರ್ಖಾ ಧರಿಸಿದ್ದ ಉಗ್ರರು ಗ್ರೆನೇಡ್ ಎಸೆದಿದ್ದಾರೆ
ಬಾರಾಮುಲ್ಲಾದ ದಿವಾನ್ ಬಾಗ್‌ನಲ್ಲಿ ಹೊಸ ಮದ್ಯದ ಅಂಗಡಿ ತೆರೆಯಲಾಗಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಉಗ್ರರು ಈ ಅಂಗಡಿಯ ಹೊರಗೆ ಬಂದು ನಿಂತಿದ್ದರು. ಬುರ್ಖಾ ಧರಿಸಿದ ಭಯೋತ್ಪಾದಕ ಮದ್ಯದಂಗಡಿಯನ್ನು ತಲುಪಿ ಕಿಟಕಿಯೊಳಗೆ ಕೈ ಹಾಕಿ ಹ್ಯಾಂಡ್ ಗ್ರೆನೇಡ್ ಎಸೆದ. ಇದಾದ ಬಳಿಕ ಇಬ್ಬರು ಉಗ್ರರು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ  ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ- PM Kisan : ರೈತರೆ ಈಗ ತಿಂಗಳಿಗೆ ₹6,000 ಜೊತೆಗೆ 3,000 ಸಿಗುತ್ತದೆ : ಈ ಲಾಭ ಪಡೆಯಲು ಹೀಗೆ ಮಾಡಿ!

ಓರ್ವ ಉದ್ಯೋಗಿ ಸಾವು, 3 ಜನರಿಗೆ ಗಾಯ:
ಈ ಭಯೋತ್ಪಾದಕರ ಗ್ರೆನೇಡ್ ದಾಳಿ ಘಟನೆಯಲ್ಲಿ, ಅಂಗಡಿಯಲ್ಲಿದ್ದ 4 ಉದ್ಯೋಗಿಗಳು ಹ್ಯಾಂಡ್ ಗ್ರೆನೇಡ್ ಚೂರುಗಳಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಬಕ್ರ ರಾಜೌರಿ ನಿವಾಸಿ ಕಿಶನ್ ಲಾಲ್ ಪುತ್ರ ರಂಜಿತ್ ಸಿಂಗ್ (52)  ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಗೋವರ್ಧನ್ ಸಿಂಗ್ ಎಂಬುವವರ ಪುತ್ರ ಬಿಜೇಂದ್ರ ಸಿಂಗ್, ರವಿಕುಮಾರ್ ಎಂಬುವವರ ಪುತ್ರ ಕರ್ತಾರ್ ಸಿಂಗ್, ಗೋವಿಂದ್ ಸಿಂಗ್ ಪುತ್ರ ಗುರುದೇವ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಿಂದ್ ಸಿಂಗ್ ಅವರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ  ಚಿಕಿತ್ಸೆಗಾಗಿ ಶ್ರೀನಗರದ ಮೂಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ-  Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ

ಉಗ್ರರ ಸುಳಿವು ಪತ್ತೆಯಾಗಿಲ್ಲ:
ಈ ಘಟನೆ ನಡೆದ ತಕ್ಷಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರಾದರೂ ಅವರ ಸುಳಿವು ಪತ್ತೆಯಾಗಿಲ್ಲ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬಾರಾಮುಲ್ಲಾ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾರಾಮುಲ್ಲಾದ ದಿವಾನ್ ಬಾಗ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಂಜಿತ್ ಸಿಂಗ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News