/kannada/photo-gallery/shubha-yoga-will-be-formed-by-venus-mercury-conjunction-people-of-this-zodiac-sign-will-get-a-lot-of-wealth-249438 ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!  ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ! 249438

ರೈಲಿನಲ್ಲಿ ಬೆಡ್ ಶೀಟ್,ಟವಲ್ಲು ಯಾಮಾರಿಸುತ್ತಿರುವ AC ಕೋಚ್ ಪ್ರಯಾಣಿಕರು! ಹಾಗಾದ್ರೆ ಕಳ್ಳತನದ ಮೌಲ್ಯವೆಷ್ಟು ಗೊತ್ತೇ?

ಕಳೆದ ವರ್ಷ ರೈಲ್ವೆಯ AC ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಲಿನಿನ್ ಮತ್ತು ಇತರ ವಸ್ತುಗಳು ಸೇರಿ ರೂ 2.5 ಕೋಟಿ ಮೌಲ್ಯದ ಬೆಡ್ ಶೀಟ್ ಮತ್ತು ಟವಲ್ಲು ಗಳನ್ನು ಕದ್ದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Last Updated : Oct 6, 2018, 10:17 AM IST
ರೈಲಿನಲ್ಲಿ ಬೆಡ್ ಶೀಟ್,ಟವಲ್ಲು ಯಾಮಾರಿಸುತ್ತಿರುವ AC ಕೋಚ್ ಪ್ರಯಾಣಿಕರು! ಹಾಗಾದ್ರೆ ಕಳ್ಳತನದ ಮೌಲ್ಯವೆಷ್ಟು ಗೊತ್ತೇ? title=

ಮುಂಬೈ: ಕಳೆದ ವರ್ಷ ರೈಲ್ವೆಯ AC ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಲಿನಿನ್ ಮತ್ತು ಇತರ ವಸ್ತುಗಳು ಸೇರಿ ರೂ 2.5 ಕೋಟಿ ಮೌಲ್ಯದ ಬೆಡ್ ಶೀಟ್ ಮತ್ತು ಟವಲ್ಲು ಗಳನ್ನು ಕದ್ದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೋಮವಾರದಂದು ರೈಲಿನ ಹವಾನಿಯಂತ್ರಿತ ಕೋಚ್ ನಲ್ಲಿ ಕಂಬಳಿಗಳು ಮತ್ತು ಬೆಡ್ ಶೀಟ್ ಗಳನ್ನು ಕದಿಯುತ್ತಿದ್ದ ಸಂದರ್ಭದಲ್ಲಿ  ಓರ್ವ ಪ್ರಯಾಣಿಕನನ್ನು ಬಂಧಿಸಲಾಗಿತ್ತು.

ಶಬ್ಹಿರ್ ರೋಟಿವಾಲಾ ಎನ್ನುವ ವ್ಯಕ್ತಿ ಮಧ್ಯಪ್ರದೇಶದ ರತ್ಲಾಮ್ ರೈಲ್ವೆ ನಿಲ್ದಾಣದಲ್ಲಿ ಬಾಂದ್ರಾ-ಅಮೃತಸರ್ ಪಾಸ್ಚಿಮ್ ಎಕ್ಸ್ಪ್ರೆಸ್ನಿಂದ ಇಳಿದು ಬಂದಾಗ ಅನೇಕ ದಿಂಬುಗಳು ಮತ್ತು  ಆರು ಬೆಡ್ಶೀಟ್ಗಳನ್ನು ರೈಲ್ವೆ ಪೊಲೀಸ್ ಅಧಿಕಾರಿಗಳು ಅವನ ಬ್ಯಾಗ್ ನಿಂದ ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ರೈಲ್ವೇ (ಡಬ್ಲ್ಯುಆರ್) ನೀಡಿದ ಅಂಕಿಅಂಶಗಳ ಪ್ರಕಾರ, 2017-18ರ ಅವಧಿಯಲ್ಲಿ 1.95 ಲಕ್ಷ ಟವೆಲ್ಗಳು, 81,736 ಬೆಡ್ಶೀಟ್ಗಳು, 55,573 ದಿಂಬು ಕವರ್ ಗಳು , 5,038 ದಿಂಬುಗಳು ಮತ್ತು 7,043 ಬೆಡ್ ಶೀಟ್ ಗಳನ್ನು ರೈಲ್ವೆಯ ಎಸಿ ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕದ್ದಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಡಬ್ಲೂಆರ್ 2.5 ಕೋಟಿ ರೂ. ಮೌಲ್ಯದ ಲಿನಿನ್ ಮತ್ತು ಫಿಟ್ಟಿಂಗ್ಗಳನ್ನು ಕಳೆದುಕೊಂಡಿತ್ತು.ಇದು ಪ್ರಯಾಣಿಕರಿಂದ ಹಾನಿಗೊಳಗಾದ ಇತರ ವಸ್ತುಗಳನ್ನು ಹೊರತುಪಡಿಸಿ ಎಂದು ಡಬ್ಲ್ಯೂಆರ್ ಅಧಿಕಾರಿ ಹೇಳಿದರು.

ನಾರುಬಟ್ಟೆಗಳಲ್ಲದೆ, ಬಾತ್ ರೂಂ ನಲ್ಲಿರುವ ಫಿಟ್ಟಿಂಗ್ಗಳನ್ನು ಸಹ ರೈಲುಗಳಲ್ಲಿ ಶೌಚಾಲಯಗಳಿಂದ ಕಳವು ಮಾಡಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ  ಪ್ರಯಾಣಿಕರಿಂದಾಗಿ ಮೇಲೆ ಭಾರತೀಯ ರೈಲ್ವೆಗೆ ಸುಮಾರು 4 ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಕೆಲವೊಮ್ಮೆ ಕೋಚ್ ಪರಿಚಾರಕರು ತಮ್ಮ ಸ್ವಂತ ಸಂಬಳದಿಂದ ಕದ್ದ ಲಿನಿನ್ಗೆ ಪಾವತಿಸಬೇಕಾಗುತ್ತದೆ, ಏಕೆಂದರೆ ಪ್ರಯಾಣಿಕರಿಂದ ಪ್ರತಿ ವಸ್ತು ಮರಳುತ್ತದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಅವರದಾಗಿರುತ್ತದೆ.

ಇನ್ನು ಸೆಂಟ್ರಲ್ ರೈಲ್ವೆಯಲ್ಲಿಯೂ ಕೂಡ ಇದೆ ಪರಿಸ್ಥಿತಿ ಎಂದು ತಿಳಿದು ಬಂದಿದೆ. ಈ ವರ್ಷ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ 79,350  ಟವೆಲ್, 27,545 ಬೆಡ್ಶೀಟ್ಗಳು, 21,050 ದಿಂಬು ಕವರಗಳು, 2,150 ದಿಂಬುಗಳು ಮತ್ತು 62 ಲಕ್ಷ ಮೌಲ್ಯದ 2,065 ಕಂಬಳಿಗಳು ಪ್ರಯಾಣಿಕರಿಂದ ಕಳ್ಳತನವಾಗಿವೆ ಎನ್ನಲಾಗಿದೆ.

ಇಂತಹ  ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಡಬ್ಲ್ಯೂಆರ್ ಮುಖ್ಯ ಸಾರ್ವಕನಿಕ ಸಂಪರ್ಕ ಅಧಿಕಾರಿ  ರವೀಂದ್ರ ಭಕರ್ ಅವರು, "ನಾವು ಪ್ರಯಾಣಿಕರಿಗೆ ವಿಶ್ವದರ್ಜೆಯ ಮತ್ತು ಆರಾಮದಾಯಕ ಸೇವೆಯನ್ನು ಒದಗಿಸಬೇಕೆಂದು ಬಯಸುತ್ತೇವೆ, ಆದರೆ ಅಂತಹ ಕಾರ್ಯಗಳು ನಮಗೆ ಮಾರಕವಾಗುತ್ತಿವೆ ಎಂದರು.