ನವದೆಹಲಿ : ಶಿಲ್ಪಾ ಶೆಟ್ಟಿ (Shilpa Shetty) ತುಂಬಾ ಗ್ಲಾಮರಸ್ ನಟಿ. 46 ನೇ ವಯಸ್ಸಿನಲ್ಲಿಯೂ ಸಹ, ಈ ನಟಿಯ ಮಾದಕತೆ ಎಲ್ಲರನ್ನು ಬೆರಗುಗೊಳಿಸದೆ ಇರದು. ಇವರ ಡ್ರೆಸ್ಸಿಂಗ್ ಸೆನ್ಸ್ ಗೆ ಅಭಿಮಾನಿಗಳು ಮಾರುಹೋಗುತ್ತಾರೆ. ಕೆಲವೊಮ್ಮೆ ಅವರ ಫ್ಯಾಶನ್ ಶೈಲಿಯೇ ಅವರಿಗೆ ಮುಳುವಾಗುತ್ತದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಶಿಲ್ಪಾ ಶೆಟ್ಟಿ ಇಂಥದ್ದೇ ಎಡವಟ್ಟು ಮಾಡಿಕೊಂಡಿದ್ದಾರೆ. ಫ್ಯಾಷನ್ ಗಾಗಿ ತೊಟ್ಟ ಹೈ ಹೀಲ್ಸ್ ನಿಂದಾಗಿ ಶಿಲ್ಪಿ ನಡೆಯಲಾಗದೆ ಪರದಾಡುವಂತಾಯಿತು. ಇದೀಗ ಜನ ಈ ವಿಡಿಯೋವನ್ನು (Shilpa Shetty Video) ಟ್ರೊಲ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಶಿಲ್ಪಾ ಶೆಟ್ಟಿಯ ವಿಡಿಯೋ ವೈರಲ್ (Viral Video) ಆಗಿದೆ. ಈ ವಿಡಿಯೋದಲ್ಲಿ, ನಟಿ ತುಂಬಾ ಬೋಲ್ಡ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ (Shilpa Shetty) ತುಂಬಾ ಸುಂದರವಾದ ಕೆಂಪು ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದಾರೆ. ಈ ಉಡುಪಿಗೆ ಹೊಂದುವಂತೆ ಕೆಂಪು ಬಣ್ಣದ ಹೀಲ್ಸ್ ಕೂಡಾ ಧರಿಸಿದ್ದಾರೆ. ಈ ಉಡುಪಿನಲ್ಲೇನೋ ಶಿಲ್ಪಾ ಅದ್ಬುತವಾಗಿ ಕಾಣಿಸುತ್ತಿದ್ದರು. ಆದರೆ, ಅವರು ಹಾಕಿರುವ ಹೈ ಹೀಲ್ಸ್ ನಲ್ಲಿ ಮಾತ್ರ ಅವರು ಕಿಂಚಿತ್ತೂ ಕಂಫರ್ಟ್ ಆಗಿರಲಿಲ್ಲ.
ಇದನ್ನೂ ಓದಿ : Viral News: ಪ್ರವಾಹಕ್ಕೆ ಸಿಲುಕಿದ್ದ ಮರಿ ರಕ್ಷಿಸಲು ಈ ಶ್ವಾನ ಏನು ಮಾಡಿದೆ ನೋಡಿ…
ಶಿಲ್ಪಾ ಶೆಟ್ಟಿ ಇಂಡಿಯಾಸ್ ಗ್ರೇಟ್ ಟ್ಯಾಲೆಂಟ್ ಸೀಸನ್ 9ರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಅವರು ಸೂಪರ್ ಡ್ಯಾನ್ಸರ್ ಚಾಪ್ಟರ್ 4 ರ (Super dancer chapter 4) ತೀರ್ಪುಗಾರಾಗಿದ್ದರು. ಶಿಲ್ಪಾ ಶೆಟ್ಟಿ ಮೊದಲು, ಇಂಡಿಯಾಸ್ ಗ್ರೇಟ್ ಟ್ಯಾಲೆಂಟ್ ಗೆ ಮಲೈಕಾ ಅರೋರಾ ತೀರ್ಪುಗಾರರಾಗಿದ್ದರು. ಆದರೆ ಈ ಬಾರಿ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ (Indias best dancer) ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಶಿಲ್ಪಾ ಇಂಡಿಯಾಸ್ ಗ್ರೇಟ್ ಟ್ಯಾಲೆಂಟ್ ನ ತೀರ್ಪುಗಾರರಾಗಲಿದ್ದಾರೆ.
ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ ಇತ್ತೀಚೆಗೆ ಅಶ್ಲೀಲ ಚಿತ್ರ ನಿರ್ಮಾಣದ ಪ್ರಕರಣದಿಂದಾಗಿ ಸುದ್ದಿಯಾಗಿದ್ದರು. ರಾಜ್ ಕುಂದ್ರಾ ಜೈಲಿಗೆ ಹೋದ ನಂತರ, ನಟಿ ಕೆಲ ಕಾಲ ಮಾಧ್ಯಮದಿಂದ ದೂರ ಉಳಿದಿದ್ದರು. ರಾಜ್ ಕುಂದ್ರಾ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಸಮಯದಲ್ಲಿ ಶಿಲ್ಪಾ ಶೆಟ್ಟಿ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ (Social media) ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ : Viral Video : 2 ಮೀಟರ್ ಉದ್ದದ ಹಾವಿನೊಂದಿಗೆ ಹಗ್ಗದಂತೆ ಆಡುತ್ತಿರುವ 2 ವರ್ಷದ ಮುದ್ದು ಕಂದ..! ಎಲ್ಲರನ್ನೂ ಆಕರ್ಷಿಸುತ್ತಿದೆ ಈ ವಿಡಿಯೋ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.