ನವದೆಹಲಿ: Dividend Yield Fundಗಳು ಮ್ಯೂಚವಲ್ ಫಂಡ್ ಗಳೇ ಆಗಿದ್ದು, ಉತ್ತಮ ಡಿವಿಡೆಂಡ್ ನೀಡುವ ಕಂಪನಿಗಳ ಷೇರುಗಳಲ್ಲಿ ಮಾತ್ರ ಇವು ಹಣ ಹೂಡಿಕೆ ಮಾಡುತ್ತವೆ. ಸೇಬಿ ಮೂಲಕ ಸೂಚಿಸಲಾಗಿರುವ ಮಾರ್ಗಸೂಚಿಗಳ ಅನುಸಾರ ಈ ಫಂಡ್ ಗಳಿಗೆ ತಮ್ಮ ಅಸೆಟ್ ನ ಶೇ.65ರಷ್ಟು ಹೂಡಿಕೆಯನ್ನು ಹೆಚ್ಚು ಡಿವಿಡೆಂಡ್ ನೀಡುವ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡುವ ಅನಿವಾರ್ಯತೆ ಇರುತ್ತದೆ. ಕಂಪನಿಗೆ ಸಿಗುವ ಒಟ್ಟು ಲಾಭದ ಭಾಗವೇ ಡಿವಿಡೆಂಟ್ ಆಗಿರುತ್ತದೆ. ಕಾಲಕಾಲಕ್ಕೆ ಕಂಪನಿಗಳು ಇವುಗಳನ್ನು ತಮ್ಮ ಗ್ರಾಹಕರಿಗೆ ಪಾವತಿಸುತ್ತವೆ. ಸುರಕ್ಷಿತ ಮತ್ತು ನಿರಂತರ ಆದಾಯ ಬಯಸುವ ಹೂಡಿಕೆದಾರರಿಗೆ ಈ ಫಂಡ್ ಗಳು ಒಂದು ಉತ್ತಮ ಆಯ್ಕೆಯಾಗಿವೆ.
ಪ್ರಿನ್ಸಿಪಲ್ ಡಿವಿಡೆಂಡ್ ಈಲ್ದ್ ಫಂಡ್
1, 5 ಮತ್ತು 10 ವರ್ಷದ ಆದಾಯ: 11.24%, 7.70%, 8.93%
ಸ್ವತ್ತುಗಳು: 169 ಕೋಟಿ (ಜುಲೈ 31, 2020)
ವೆಚ್ಚ ಅನುಪಾತ: 2.57% (ಜೂನ್ 30, 2020)
10 ವರ್ಷಗಳಲ್ಲಿ 1 ಲಕ್ಷ ಮೌಲ್ಯ: 2.35 ಲಕ್ಷ ರೂ.ಗೆ ತಲುಪುತ್ತ್ತದೆ.
UTI ಡಿವಿಡೆಂಡ್ ಈಲ್ದ್ ಫಂಡ್
1, 5 ಮತ್ತು 10 ವರ್ಷದ ಆದಾಯ: 9.30%, 5.75%, 8.04%
ಸ್ವತ್ತುಗಳು: 2,093 ಕೋಟಿ (ಜೂನ್ 30, 2020)
ವೆಚ್ಚ ಅನುಪಾತ: 2.05% (ಜೂನ್ 30, 2020)
10 ವರ್ಷಗಳಲ್ಲಿ 1 ಲಕ್ಷ ಮೌಲ್ಯ: 2.17 ಲಕ್ಷ ರೂ.ಗೆ ತಲುಪುತ್ತದೆ.
ಟೆಂಪಲ್ ಟನ್ ಇಂಡಿಯಾ ಇಕ್ವಿಟಿ ಫಂಡ್
1, 5 ಮತ್ತು 10 ವರ್ಷದ ಆದಾಯ: 1.18%, 4.92%, 8.67%
ಆಸ್ತಿಗಳು: 738 ಕೋಟಿ (ಜೂನ್ 30, 2020)
ವೆಚ್ಚ ಅನುಪಾತ: 2.40% (ಜೂನ್ 30, 2020)
10 ವರ್ಷಗಳಲ್ಲಿ 1 ಲಕ್ಷ ಮೌಲ್ಯ: 2.30 ಲಕ್ಷ ರೂಪಾಯಿಗೆ ತಲುಪುತ್ತದೆ.
ಆದಿತ್ಯ ಬಿರ್ಲಾ ಸನ್ ಲೈಫ್ ಡಿವಿಡೆಂಡ್ ಈಲ್ದ್ ಫಂಡ್
1, 5 ಮತ್ತು 10 ವರ್ಷದ ಆದಾಯ: 8.57%, 1.34%, 6.58%
ಆಸ್ತಿಗಳು: 635 ಕೋಟಿ (ಜೂನ್ 30, 2020)
ವೆಚ್ಚ ಅನುಪಾತ: 2.35% (ಜೂನ್ 30, 2020)
10 ವರ್ಷಗಳಲ್ಲಿ 1 ಲಕ್ಷ ಮೌಲ್ಯ: 1.89 ಲಕ್ಷ ರೂಪಾಯಿ ತಲುಪುತ್ತದೆ.
ಏರಿಳಿತದಲ್ಲಿ ನಿಮ್ಮ ಹೂಡಿಕೆ ಸುರಕ್ಷಿತವಾಗಿರುತ್ತದೆ
ಈ ಕುರಿತು ಹೇಳಿಕೆ ನೀಡಿರುವ ಬಿಎನ್ ಬಿಎನ್‌ಪಿ ಫಿನ್‌ಕ್ಯಾಪ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಎ.ಕೆ.ನಿಗಮ್. ಡಿವಿಡೆಂಟ್ ಈಲ್ದ್ ಫಂಡ್ ಗಳು ಹೆಚ್ಚಿನ ಲಾಭಾಂಶಕ್ಕೆ ಕಾರಣವಾಗಬಹುದು. ಈ ಫಂಡ್ ಗಳು ಪ್ರಮುಖವಾಗಿ ಹೆಚ್ಚಿನ ಲಾಭಾಂಶ ಪಾವತಿಸುವ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಇದರ ಪ್ರಮುಖ ಪ್ರಯೋಜನವೆಂದರೆ ಡಿವಿಡೆಂಡ್ ಈಲ್ದ್ ಫಂಡ್ ಕುಸಿತವು ಮಾರುಕಟ್ಟೆ ಕುಸಿತದ ಸಮಯದಲ್ಲಿ ಬೆಳವಣಿಗೆಯ ಆಧಾರಿತ ಯೋಜನೆಗಳಿಗಿಂತ ಹೆಚ್ಚಾಗಿರುತ್ತದೆ. ಏರಿಳಿತದ ಸಮಯದಲ್ಲೂ ಹೋಲಿಸಿದರೆ ಇವುಗಳಲ್ಲಿನ ಹೂಡಿಕೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಮಾರುಕಟ್ಟೆ ಚೇತರಿಸಿಕೊಂಡರೆ ಇವುಗಳಲ್ಲಿನ ಹೂಡಿಕೆಯ ಬೆಳವಣಿಗೆ ಗ್ರೋಥ್ ಫಂಡ್ ಗಳಿಗಿಂತ ಕಡಿಮೆ ವೇಗವಾಗಿರುತ್ತವೇ.