ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತ , ಸಿಎಂ ಆಕಾಂಕ್ಷಿ ಹರೀಶ್ ರಾವತ್ ಗೆ ಸೋಲು

ಉತ್ತರಾಖಂಡದ 70-ಸದಸ್ಯರ ವಿಧಾನಸಭಾ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ (Uttarakhand Election Result) ಏತನ್ಮಧ್ಯೆ, ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಅವರು ಲಾಲ್ಕುವಾನ್ ಕ್ಷೇತ್ರದಿಂದ ಸೋತಿದ್ದಾರೆ

Written by - Ranjitha R K | Last Updated : Mar 10, 2022, 02:51 PM IST
  • ಲಾಲ್ ಕುವಾನ್ ಕ್ಷೇತ್ರದಿಂದ ಸೋತಿರುವ್ ಹರೀಶ್ ರಾವತ್
  • 4 ಸಾವಿರಕ್ಕೂ ಹೆಚ್ಚು ಮತಗಳಿಂದ ಪರಾಭವ
  • ರಾವತ್ ಉತ್ತರಾಖಂಡದ ಮಾಜಿ ಸಿಎಂ
ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತ , ಸಿಎಂ ಆಕಾಂಕ್ಷಿ ಹರೀಶ್ ರಾವತ್ ಗೆ ಸೋಲು  title=
ಲಾಲ್ ಕುವಾನ್ ಕ್ಷೇತ್ರದಿಂದ ಸೋತಿರುವ್ ಹರೀಶ್ ರಾವತ್ (file photo)

ಡೆಹ್ರಾಡೂನ್ : ಉತ್ತರಾಖಂಡ್ ಚುನಾವಣೆಯಲ್ಲಿ (Uttarakhand Election Result) ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ (Harish Rawat) ಲಾಲ್ ಕುವಾನ್ ಕ್ಷೇತ್ರದಲ್ಲಿ ಸೋಲು  ಕಂಡಿದ್ದಾರೆ. ಅವರು ಬಿಜೆಪಿ (BJP)ಅಭ್ಯರ್ಥಿ ವಿರುದ್ಧ 4 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. 70 ಸದಸ್ಯ ಬಲದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಮತ್ತು ಬಿಜೆಪಿ ಮುಖಾಮುಖಿಯಾಗಿವೆ.

ಸಿಎಂ ಸ್ಥಾನ ಪ್ರಬಲ ಆಕಾಂಕ್ಷಿಯಾಗಿದ್ದ ಹರೀಶ್ ರಾವತ್ :
ಕಾಂಗ್ರೆಸ್ ಬಹುಮತ ಪಡೆದಿದ್ದರೆ ಹರೀಶ್ ರಾವತ್ (Harish Rawat) ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗುತ್ತಿದ್ದರು. ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುಲಿದೆ ಎಂದು ಉತ್ತರಾಖಂಡದ ಕಾಂಗ್ರೆಸ್ (Congress) ವಿಶೇಷ ವೀಕ್ಷಕ ಮೋಹನ್ ಪ್ರಕಾಶ್ ವಿಶ್ವಾಸ  ವ್ಯಕ್ತಪಡಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ಶಾಸಕರ ಹೆಸರನ್ನು ಮಾತ್ರ ಪರಿಗಣಿಸುವುದಾಗಿಯೂ ಹೇಳಿದ್ದರು.  

ಇದನ್ನೂ ಓದಿ : Punjab Election Result: ಪಂಜಾಬ್ ನಲ್ಲಿ ಕಾಂಗ್ರೆಸ್ ಸೋಲಿನ ನಂತರ ಸಿದ್ದು ನೀಡಿದ ಮೊದಲ ಹೇಳಿಕೆ ಏನು ?

ಪ್ರೀತಮ್ ಸಿಂಗ್ ಕೂಡಾ ಕಣದಲ್ಲಿ :
ಪಕ್ಷದ ಇಬ್ಬರು ಪ್ರಮುಖ ಸ್ಪರ್ಧಿಗಳೆಂದರೆ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮತ್ತು ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್ (Preetham Singh).  ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ  ಹರೀಶ್ ರಾವತ್  ಜನರ ಸ್ವಾಭಾವಿಕ ಆಯ್ಕೆ ಎಂದು ಮಾಜಿ ಮುಖ್ಯಮಂತ್ರಿಯ ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದರು. 

 

ಇದನ್ನೂ ಓದಿ : Punjab Result 2022 : ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಸೋಲು!n

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News