'Russia-Ukraine War ನಿಂದ ಭಾರತ ಕಲಿತ ಪಾಠ': 'ಭವಿಷ್ಯದ ಯುದ್ಧಗಳು ಸ್ವದೇಶಿ ಶಸ್ತ್ರಾಸ್ತ್ರಗಳಿಂದಲೇ ನಡೆಯಲಿವೆ'

Russia-Ukraine Tension - ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭಾರತಕ್ಕೆ ದೊಡ್ಡ ಪಾಠವೆಂದರೆ ಭವಿಷ್ಯದ ಯುದ್ಧಗಳನ್ನು ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಲು ನಾವು ಸಿದ್ಧರಾಗಿರಬೇಕು ಎಂದು ಸೇನಾ ಮುಖ್ಯಸ್ಥ (Army Chief) ಜನರಲ್ ಮನೋಜ್ ಮುಕುಂದ್ ನರವಣೆ  (MM Naravane) ಮಂಗಳವಾರ ಹೇಳಿದ್ದಾರೆ.  

Written by - Nitin Tabib | Last Updated : Mar 8, 2022, 10:05 PM IST
  • Russia-Ukraine War ನಿಂದ ಭಾರತ ಕಲಿತ ಪಾಠ ಏನು?
  • ಸೇನಾ ಮುಖ್ಯಸ್ಥ ಜನರಲ್ MM ನರವಣೆ ಹೇಳಿದ್ದೇನು?
  • ತಿಳಿದುಕೊಳ್ಳಲು ಈ ವರದಿ ಓದಿ
'Russia-Ukraine War ನಿಂದ ಭಾರತ ಕಲಿತ ಪಾಠ': 'ಭವಿಷ್ಯದ ಯುದ್ಧಗಳು ಸ್ವದೇಶಿ ಶಸ್ತ್ರಾಸ್ತ್ರಗಳಿಂದಲೇ ನಡೆಯಲಿವೆ' title=
Russia-Ukraine War (File Photo)

Russia-Ukraine Tension - ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಭಾರತಕ್ಕೆ ದೊಡ್ಡ ಪಾಠವೆಂದರೆ ಭವಿಷ್ಯದ ಯುದ್ಧಗಳನ್ನು ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಲು ನಾವು ಸಿದ್ಧರಾಗಿರಬೇಕು ಎಂದು ಸೇನಾ ಮುಖ್ಯಸ್ಥ (Army Chief) ಜನರಲ್ ಮನೋಜ್ ಮುಕುಂದ್ ನರವಣೆ  (MM Naravane) ಮಂಗಳವಾರ ಹೇಳಿದ್ದಾರೆ.

ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿರುವ ANI, "ಭವಿಷ್ಯದ ಯುದ್ಧಗಳನ್ನು (Future Wars) ಸ್ವದೇಶಿ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಲು ನಾವು ಸಿದ್ಧರಾಗಿರಬೇಕು ಎಂಬುದು ದೊಡ್ಡ ಪಾಠವಾಗಿದೆ. ರಕ್ಷಣೆಯಲ್ಲಿ ಸ್ವಾವಲಂಬಿ ಭಾರತದತ್ತ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಭವಿಷ್ಯದ ಯುದ್ಧಗಳನ್ನು ನಾವು ನಮ್ಮ ಶಸ್ತ್ರಾಸ್ತ್ರ ಪ್ರನಾಳಿಕೆಯಿಂದಲೇ ಹೋರಾಡಬೇಕು" ಎಂದಿದ್ದಾರೆ.

ಯಾವುದೇ ಸಮಯದಲ್ಲಿ ಯುದ್ಧಗಳು ಸಂಭವಿಸಬಹುದು ಮತ್ತು ದೇಶವು ಅವುಗಳಿಗೆ ಸಿದ್ಧವಾಗಬೇಕಿದೆ ಎಂಬುದನ್ನು ಈ ಬಿಕ್ಕಟ್ಟು ತೋರಿಸಿದೆ ಎಂದು ಜನರಲ್ ನರವಣೆ ಹೇಳಿದ್ದಾರೆ. "ಉಕ್ರೇನ್-ರಷ್ಯನ್ ಯುದ್ಧದಿಂದ ಕಲಿಯಲು ಹಲವು ಪಾಠಗಳಿವೆ. ಯಾವುದೇ ಸಮಯದಲ್ಲಿ ಯುದ್ಧಗಳು ಸಂಭವಿಸಬಹುದು ಮತ್ತು ನಾವು ಅವುಗಳಿಗೆ ಸಿದ್ಧರಾಗಿರಬೇಕು ಎಂದು ಈ ಬಿಕ್ಕಟ್ಟು ತೋರಿಸುತ್ತದೆ. ಯುದ್ಧಗಳು ಕೇವಲ ವರ್ಚುವಲ್ ಆಗಿರುವುದಿಲ್ಲ ಮತ್ತು ಭೌತಿಕ ಡೊಮೇನ್ ಗಳಲ್ಲಿಯೂ ಕೂಡ ನಡೆಯಲಿವೆ" ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಸೆಮಿನಾರ್‌ ವೊಂದರಲ್ಲಿ ಚೀನಾ ಮತ್ತು ಪಾಕಿಸ್ತಾನ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸೇನಾ ಮುಖ್ಯಸ್ಥ ಎಂಎಂ ನರವಾಣೆ, ಭಾರತ ಕಠಿಣ ರಕ್ಷಣಾ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು. ಭವಿಷ್ಯದ ಹೋರಾಟಗಳ ಕೆಲವು ಝಲಕ್ಗಳನ್ನು ನಾವು ನೋಡುತ್ತಿದ್ದೇವೆ ಎಂದಿದ್ದರು. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ತಮ್ಮ ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವುದನ್ನು ಮುಂದುವರೆಸಲಿವೆ  ಎಂದು ಅವರು ಹೇಳಿದ್ದರು.

ಇದನ್ನೂ ಓದಿ-ನಾನು ಕೀವ್‌ನಲ್ಲೇ ಇದ್ದೇನೆ, ಯಾರಿಗೂ ಹೆದರುವುದಿಲ್ಲ!: ರಷ್ಯಾಗೆ ಝೆಲೆನ್ಸ್ಕಿ ಸವಾಲು

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ಮಂಗಳವಾರ ತನ್ನ 13 ನೇ ದಿನಕ್ಕೆ ಕಾಲಿಟ್ಟಿದೆ, ಮೂರು ಸುತ್ತಿನ ಮಾತುಕತೆಗಳು ಯಶಸ್ವಿಯಾಗಿಲ್ಲ. ಕೀವ್ ಮತ್ತು ಉಕ್ರೇನ್ ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ಹಲವಾರು ಪ್ರಮುಖ ಸೈಟ್‌ಗಳಲ್ಲಿ ಮತ್ತು ವಸತಿ ಪ್ರದೇಶಗಳಲ್ಲಿ ರಷ್ಯಾ ಶೆಲ್ ದಾಳಿ ನಡೆಸುತ್ತಿದೆ.

ಇದನ್ನೂ ಓದಿ-Mind Before 15 Minutes Of Death: ಸಾವಿಗೂ 15 ನಿಮಿಷ ಮೊದಲು ಮನುಷ್ಯ ಏನು ಯೋಚಿಸುತ್ತಾನೆ? ಇಲ್ಲಿದೆ ಉತ್ತರ

ರಷ್ಯಾದ ಮಿಲಿಟರಿ ಕ್ರಮಗಳ ಪರಿಣಾಮವಾಗಿ ಇದುವರೆಗೆ ಕನಿಷ್ಠ 400 ನಾಗರಿಕರ ಸಾವುಗಳು ಸಂಭವಿಸಿವೆ ಎಂದು ಉಕ್ರೇನ್‌ನ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ರಷ್ಯಾದ ದಾಳಿಗಳು ಉಕ್ರೇನ್‌ನಲ್ಲಿ 200 ಕ್ಕೂ ಹೆಚ್ಚು ಶಾಲೆಗಳು, 34 ಆಸ್ಪತ್ರೆಗಳು ಮತ್ತು 1,500 ವಸತಿ ಕಟ್ಟಡಗಳನ್ನು ನಾಶಪಡಿಸಿವೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ-ಅಂತರಾಷ್ಟ್ರೀಯ ಮಹಿಳಾ ದಿನ ಬೆಳೆದು ಬಂದ ಬಗೆ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News