Mind Before 15 Minutes Of Death: ಸಾವಿಗೂ 15 ನಿಮಿಷ ಮೊದಲು ಮನುಷ್ಯ ಏನು ಯೋಚಿಸುತ್ತಾನೆ? ಇಲ್ಲಿದೆ ಉತ್ತರ

What Brain Thinks 15 Minutes Before Death - ವಿಜ್ಞಾನಿಗಳ ಪ್ರಕಾರ, ಸಾಯುತ್ತಿರುವ ಮೆದುಳು ತನ್ನ ಜೀವನದ ಉತ್ತಮ ಕ್ಷಣಗಳನ್ನು ಕೊನೆಯ ಕ್ಷಣದಲ್ಲಿ ನೆನಪಿಸಿಕೊಳ್ಳುತ್ತದೆ.  

Written by - Nitin Tabib | Last Updated : Mar 8, 2022, 05:00 PM IST
  • ಸಾವಿಗೂ 15 ನಿಮಿಷ ಮೊದಲು ನಮ್ಮ ಮೆದುಳು ಏನು ಯೋಚಿಸುತ್ತಿರುತ್ತದೆ?
  • ಎಂದಾದರೂ ಯೋಚನೆ ಮಾಡಿದ್ದೀರಾ?
  • ಇಲ್ಲ ಎಂದಾದರೆ ಈ ಅಧ್ಯಯನ ವರದಿಯನ್ನೊಮ್ಮೆ ಓದಿ
Mind Before 15 Minutes Of Death: ಸಾವಿಗೂ 15 ನಿಮಿಷ ಮೊದಲು ಮನುಷ್ಯ ಏನು ಯೋಚಿಸುತ್ತಾನೆ? ಇಲ್ಲಿದೆ ಉತ್ತರ title=
Mind Before 15 Minutes Of Death (File Photo)

What Our Brain Thinks During Death - ಸಾಯುತ್ತಿರುವ ವ್ಯಕ್ತಿಯ ಕೊನೆಯ ಆಲೋಚನೆಗಳು ಯಾವುವು ಅಥವಾ ಸಾವಿನ ಮೊದಲು ವ್ಯಕ್ತಿಯ ಮೆದುಳಿನಲ್ಲಿ (Brain) ಏನು ನಡೆಯುತ್ತಿರುತ್ತದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲ ಎಂದಾದರೆ, ಈ ವರದಿಯನ್ನೊಮ್ಮೆ ಓದಿ. ವಿಜ್ಞಾನಿಗಳ ಪ್ರಕಾರ, ಸಾಯುತ್ತಿರುವ ಮೆದುಳು ತನ್ನ ಜೀವನದ ಅತ್ಯುತ್ತಮ ಕ್ಷಣಗಳನ್ನು ಕೊನೆಯ ಗಳಿಗೆಯಲ್ಲಿ ನೆನಪಿಸಿಕೊಳ್ಳುತ್ತದೆ ಎನ್ನಲಾಗಿದೆ.
 
 ದಿ ಸನ್ ವರದಿಯ ಪ್ರಕಾರ, 87 ವರ್ಷದ ವ್ಯಕ್ತಿಯೊಬ್ಬರು ಫೀಟ್ಸ್ ಸಮಸ್ಯೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಚಿಕಿತ್ಸೆಗಾಗಿ ಎಲೆಕ್ಟ್ರೋಎನ್ಸೆಫಾಲೋಗ್ರಾಮ್ ಅಂದರೆ EEG (Electroencephalogram Test) ಪರೀಕ್ಷೆಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ. ಈ ವೇಳೆ ಹೃದಯಾಘಾತದಿಂದ (Heart Attack) ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದರೆ, ಈ ಡೈಗ್ನೋಸಿಸ್ ವೇಳೆ ತಿಳಿಯದೆಯೇ ವ್ಯಕ್ತಿಯ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆದುಹೋಗಿದೆ. ಇದರಿಂದಾಗಿ ಅವರ ಆಲೋಚನೆಗಳು ಅವರ ಸಾವಿಗೆ 15 ನಿಮಿಷಗಳ ಮುನ್ನ ದಾಖಲಾಗಿವೆ.

ಕೊನೆಯ ಹಂತದಲ್ಲಿ, ಆ ವ್ಯಕ್ತಿಯು ತನ್ನ ಜೀವನಕ್ಕೆ ಸಂಬಂಧಿಸಿದ ಕೆಲ ಉತ್ತಮ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರುವುದು ರೆಕಾರ್ಡಿಂಗ್‌ನಲ್ಲಿ ತಿಳಿದುಬಂದಿದೆ. EEG ಮೇಲೆ ಈ ರೆಕಾರ್ಡಿಂಗ್ ನಡೆದುಹೋಗಿದೆ. ವ್ಯಕ್ತಿಯ ಸಾವಿನ 30 ಸೆಕೆಂಡ್ಸ್ ಮುನ್ನ, ಆತನ ಹೃದಯ ವೇಗವಾಗಿ ಬಡಿದುಕೊಳ್ಳುತ್ತಿರುವುದು  ಕಂಡುಬಂದಿದ್ದು ಮತ್ತು ನಂತರ ವಿಜ್ಞಾನಿಗಳು ವಿಶಿಷ್ಟವಾದ ತರಂಗವನ್ನು ಸೆರೆಹಿಡಿದಿದ್ದಾರೆ. ಈ ತರಂಗಗಳನ್ನು Gamma Oscillations ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-ರಷ್ಯಾದ ಟ್ಯಾಂಕ್‌ಗಳ ಮೇಲಿರುವ Z ಚಿಹ್ನೆಯ ಅರ್ಥವೇನು ? ಈ ಗುರುತಿನ ಬಗ್ಗೆಯೇ ನಡೆಯುತ್ತಿದೆ ಚರ್ಚೆ

ಲೆ ಲೂಯಿಸ್ವಿಲ್ಲೆ ಝೆಮ್ಮರ್ (Louisville Zemmar) ವಿಶ್ವವಿದ್ಯಾಲಯದ ನರಶಸ್ತ್ರಚಿಕಿತ್ಸಕ ಡಾ. ಅಜ್ಮಲ್ ಜೆಮ್ಮಾರ್ ಈ ಸಂಶೋಧನೆಯನ್ನು ನಡೆಸಿದ್ದಾರೆ. ಕೊನೆಯ ಕ್ಷಣದಲ್ಲಿ ನಮ್ಮ ಮೆದುಳು ಕನಸು ಕಾಣುವ ಸ್ಥಿತಿಗೆ ತಲುಪುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ದೇಹದಲ್ಲಿ ಜೀವವಿಲ್ಲದಿದ್ದರೂ ಮನಸ್ಸು ಮಾತ್ರ ಕೊನೆಯ ಹಂತದವರೆಗೂ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Russia-Ukraine War:ಯುದ್ಧದ ನಡುವೆಯೇ 11 ವರ್ಷದ ಬಾಲಕನ 1000 ಕೀ.ಮೀ ಪಯಣ, 'ಹೀರೋ' ಎಂದ ಸರ್ಕಾರ

ಈ ಕುರಿತು ಮಾತನಾಡಿರುವ ಗುರ್‌ಗಾಂವ್‌ನ ನ್ಯೂರೋ ಮತ್ತು ಪೇನ್‌ ಕೇರ್‌ ಕ್ಲಿನಿಕ್‌ನ ನರರೋಗ ತಜ್ಞ ಡಾ.ಭೂಪೇಶ್‌, ರೋಗಿಯ ಸಾವಿನ ಸಂದರ್ಭದಲ್ಲಿ ಗಾಮಾ ತರಂಗಗಳು ಹೆಚ್ಚು ಕ್ರಿಯಾಶೀಲವಾಗಿವೆ. ಇದರೊಂದಿಗೆ, ಬೀಟಾ ತರಂಗಗಳೂ ಕೂಡ ಸಕ್ರಿಯವಾಗಿದೆ, ಹೀಗಾಗಿ ರೋಗಿಯು ಆತಂಕವನ್ನು ಅನುಭವಿಸಲು ಪ್ರಾರಂಭಿಸಿದ್ದಾನೆ. ಇದರ ನಂತರ ಆಲ್ಫಾ, ಥೀಟಾ ತರಂಗಗಳು ಕೂಡ ಸಕ್ರೀಯವಾಗಿದೆ. ವ್ಯಕ್ತಿಯ ಡೆಲ್ಟಾ ತರಂಗಗಳು  ಸಕ್ರಿಯವಾದ ತಕ್ಷಣ ಆತ ಗಾಢ ನಿದ್ರೆಗೆ ಜಾರಿದ್ದಾನೆ. ವ್ಯಕ್ತಿಯ ಗಾಮಾ ತರಂಗಗಳು  ತುಂಬಾ ಹೆಚ್ಚಾಗಿರುವುದರಿಂದ, ವ್ಯಕ್ತಿ ಹಳೆಯ ಒಳ್ಳೆಯ ನೆನಪುಗಳನ್ನು ನೆನಪಿಸಿಕೊಳ್ಳಲು ಆರಂಭಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ-ಕೈವ್ ನತ್ತ ಧಾವಿಸುತ್ತಿರುವ ಶತ್ರು ಪಡೆ, ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News