ರಷ್ಯಾದ ಟ್ಯಾಂಕ್‌ಗಳ ಮೇಲಿರುವ Z ಚಿಹ್ನೆಯ ಅರ್ಥವೇನು ? ಈ ಗುರುತಿನ ಬಗ್ಗೆಯೇ ನಡೆಯುತ್ತಿದೆ ಚರ್ಚೆ

ಉಕ್ರೇನ್‌ನಲ್ಲಿ ವಿನಾಶವನ್ನುಂಟುಮಾಡುತ್ತಿರುವ ರಷ್ಯಾದ ಸೇನೆಯ ವಾಹನಗಳ ಮೇಲಿನ 'Z' ಗುರುತಿನ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಎಲ್ಲಾ ಮಿಲಿಟರಿ ವಾಹನಗಳಲ್ಲಿ ಒಂದೇ ರೀತಿಯಲ್ಲಿ  Z ಚಿಹ್ನೆಯನ್ನು ಬರೆಯಲಾಗಿಲ್ಲ. ಕೆಲವು ಟ್ಯಾಂಕ್ ಗಳ ಮೇಲೆ Z ಎಂದು ನೇರವಾಗಿ ಬರೆಯಲಾಗಿದೆ . 

Written by - Ranjitha R K | Last Updated : Mar 8, 2022, 09:22 AM IST
  • ಉಕ್ರೇನ್ ಮೇಲೆ ದಾಳಿಮುಂದುವರೆಸಿರುವ ರಷ್ಯಾ
  • ಉಕ್ರೇನ್‌ನಲ್ಲಿರುವ ರಷ್ಯಾದ ವಾಹನಗಳ ಮೇಲೆ 'Z' ಎಂದು ಬರೆಯಲಾಗಿದೆ
  • ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಅರ್ಥಗಳು ಹರಿದಾಡುತ್ತಿವೆ
ರಷ್ಯಾದ ಟ್ಯಾಂಕ್‌ಗಳ ಮೇಲಿರುವ  Z ಚಿಹ್ನೆಯ ಅರ್ಥವೇನು ?  ಈ ಗುರುತಿನ ಬಗ್ಗೆಯೇ ನಡೆಯುತ್ತಿದೆ ಚರ್ಚೆ  title=
ಉಕ್ರೇನ್ ಮೇಲೆ ದಾಳಿ ಮುಂದುವರೆಸಿರುವ ರಷ್ಯಾ

ನವದೆಹಲಿ : ಉಕ್ರೇನ್‌ನಲ್ಲಿ  (Ukraine)  ವಿನಾಶವನ್ನುಂಟುಮಾಡುತ್ತಿರುವ ರಷ್ಯಾದ ಸೇನೆಯ ವಾಹನಗಳ (Russian Troops) ಮೇಲಿನ 'Z' ಗುರುತಿನ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ (Z Symbol on Russian Military Vehicles). ಎಲ್ಲಾ ಮಿಲಿಟರಿ ವಾಹನಗಳಲ್ಲಿ ಒಂದೇ ರೀತಿಯಲ್ಲಿ  Z ಚಿಹ್ನೆಯನ್ನು ಬರೆಯಲಾಗಿಲ್ಲ. ಕೆಲವು ಟ್ಯಾಂಕ್ ಗಳ ಮೇಲೆ Z ಎಂದು ನೇರವಾಗಿ ಬರೆಯಲಾಗಿದೆ. ಕೆಲವು ಟ್ಯಾಂಕ್ ಗಳಲ್ಲಿ ತ್ರಿಕೋನದಲ್ಲಿ ಬರೆಯಲಾಗಿದೆ. ಈ ಚಿಹ್ನೆಯ ಅರ್ಥ ಏನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಬೇರೆ ಬೇರೆ ಮಾತುಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ರಷ್ಯಾದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. 

ವಿಭಿನ್ನ ಅರ್ಥಗಳು : 
ರಷ್ಯಾವನ್ನು ಬೆಂಬಲಿಸುವವರಲ್ಲಿ ಈ Z ಗುರುತು ಬಹಳ ಜನಪ್ರಿಯವಾಗಿದೆ (Z Symbol on Russian Military Vehicles). ಝಡ್ ಮುದ್ರಿತ ಟೀ ಶರ್ಟ್ ಧರಿಸಿ, ವಾಹನಗಳ ಮೇಲೆ ಸ್ಟಿಕ್ಕರ್ ಹಾಕುತ್ತಿದ್ದಾರೆ. 'ದಿ ವಿಲ್ಸನ್ ಸೆಂಟರ್' ಎಂಬ ಸಂಶೋಧನಾ ಗುಂಪಿನೊಂದಿಗೆ ಸಂಯೋಜಿತವಾಗಿರುವ ಕಮಿಲ್ ಗಲೇವ್, ಪ್ರಕಾರ Z ಎಂದರೆ ಝಾ ಪೊಬೇಡಿ  ಅಂದರೆ ಗೆಲುವಿಗಾಗಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.   ಮತ್ತೊಂದೆಡೆ, ಯುದ್ಧಭೂಮಿಯಲ್ಲಿ ಸೈನಿಕರು ತಮ್ಮ ಟ್ಯಾಂಕ್ ಗಳನ್ನು ಗುರುತಿಸಲು ಸುಲಭವಾಗಲಿ ಎಂಬ ಕಾರಣಕ್ಕೆ ಈ ಗುರುತನ್ನು ಹಾಕಲಾಗಿದೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿವೆ. 

 

ಇದನ್ನೂ ಓದಿ  :  Russia-Ukraine War:ಯುದ್ಧದ ನಡುವೆಯೇ 11 ವರ್ಷದ ಬಾಲಕನ 1000 ಕೀ.ಮೀ ಪಯಣ, 'ಹೀರೋ' ಎಂದ ಸರ್ಕಾರ

ಕ್ರೈಮಿಯಾದಲ್ಲೂ ಕಾಣಿಸಿಕೊಂಡ  'ಝಡ್' :
 ಈ ಚಿಹ್ನೆಗಳು ಘಟಕ ಅಥವಾ ವಾಹನಗಳ ಸ್ಥಳವನ್ನು ಸೂಚಿಸುತ್ತವೆ ಎಂದು ಕಳೆದ ತಿಂಗಳು, ರಕ್ಷಣಾ ಥಿಂಕ್ ಟ್ಯಾಂಕ್ RUSI ನ ಮಾಜಿ ನಿರ್ದೇಶಕ ಪ್ರೊಫೆಸರ್ ಮೈಕೆಲ್ ಕ್ಲಾರ್ಕ್ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಫೆಬ್ರವರಿ 22 ರಂದು ಡೊನೆಟ್ಸ್ಕ್ ಪ್ರದೇಶವನ್ನು ಪ್ರವೇಶಿಸುವ ರಷ್ಯಾದ  (Russia) ವಾಹನಗಳಲ್ಲಿ 'Z' ಚಿಹ್ನೆಯನ್ನು ,ಮೊಟ್ಟ ಮೊದಲು ಗುರುತಿಸಲಾಗಿತ್ತು. ಇನ್ನೊಂದು ಮೂಲಗಳ ಪ್ರಕಾರ,  ರಷ್ಯಾ ಕ್ರೈಮಿಯಾವನ್ನು ಆಕ್ರಮಿಸಿಕೊಂಡಾಗಲೂ, ಅದರ ಮಿಲಿಟರಿ ವಾಹನಗಳಲ್ಲಿ Z ನ ಗುರುತು ಕಾಣಿಸಿತ್ತು. 

'ಟೆಲಿಗ್ರಾಫ್' ನಲ್ಲಿನ ವರದಿಯ ಪ್ರಕಾರ, ಈ ರೀತಿಯ ಗುರುತುಗಳನ್ನು ರೋಸ್ಗ್ವಾರ್ಡಿಯಾ ಟ್ರೂಪ್ಸ್  ಗಾಗಿ, ಬಳಸಲಾಗುತ್ತದೆ. ರೋಸ್ವರ್ಡಿಯಾ ಟ್ರೂಪ್ಸ್ ಎಂದರೆ ರಷ್ಯಾದ ರಾಷ್ಟ್ರೀಯ ಗಾರ್ಡ್. ಇದು ಸೇನೆಯ ಸೈನಿಕರಿಗಿಂತ ಭಿನ್ನವಾಗಿದೆ. ರೋಸ್ವರ್ಡಿಯಾ ಪಡೆಗಳ ಪ್ರತಿಯೊಂದು ಕ್ರಿಯೆಯನ್ನು ನೇರವಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ತಿಳಿಸಲಾಗುತ್ತದೆ. 

 

ಇದನ್ನೂ ಓದಿ  :  ಕೈವ್ ನತ್ತ ಧಾವಿಸುತ್ತಿರುವ ಶತ್ರು ಪಡೆ, ಹೊಸ ವೀಡಿಯೊ ಬಿಡುಗಡೆ ಮಾಡಿದ ರಷ್ಯಾದ ರಕ್ಷಣಾ ಸಚಿವಾಲಯ

'ಇದು ಒಂದು ರೀತಿಯ ಕೆಂಪು ಧ್ವಜ'
ರಷ್ಯಾದ ರಕ್ಷಣಾ ನೀತಿಯನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ರಾಬ್ ಲೀ ಕೂಡ ಈ ಬಗ್ಗೆ ಟ್ವೀಟ್ (Tweet)ಮಾಡಿದ್ದಾರೆ. ಇದು ಒಂದು ರೀತಿಯ ಕೆಂಪು ಧ್ವಜ ಎಂದು ಅವರು ಹೇಳುತ್ತಾರೆ. ಕೈದಿಗಳನ್ನು ಸಾಗಿಸುವ ವಾಹನಗಳ ಮೇಲೆ ಈ ಗುರುತು ಹಾಕಲಾಗುತ್ತದೆ. ಸಾಮಾನ್ಯವಾಗಿ, ಬೆಲ್ಗೊರೊಡ್ ಪ್ರದೇಶದಲ್ಲಿನ  ವಾಹನಗಳಲ್ಲಿ Z ಗುರುತು ಕಂಡುಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News