ಬಿಹಾರ: ಮಹಿಳೆಯರ ರಕ್ಷಣೆಗಾಗಿ ಕಾಂಗ್ರೆಸ್‌ನ ಹೊಸ ಪ್ಲಾನ್ ಏನ್ ಗೊತ್ತಾ?

ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಪಕ್ಷವು ಆಗಸ್ಟ್ 20 ರಿಂದ ವಿಶೇಷ 'ಇಂದಿರಾ ಶಕ್ತಿ ಆಪ್' ಅನ್ನು ಪ್ರಾರಂಭಿಸಿತು.

Last Updated : Aug 28, 2018, 02:38 PM IST
ಬಿಹಾರ: ಮಹಿಳೆಯರ ರಕ್ಷಣೆಗಾಗಿ ಕಾಂಗ್ರೆಸ್‌ನ ಹೊಸ ಪ್ಲಾನ್ ಏನ್ ಗೊತ್ತಾ? title=

ನವದೆಹಲಿ: ಇತ್ತೀಚಿಗೆ ಬಿಹಾರದಲ್ಲಿ ಅನೇಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಮುಂದಿನ ಕೆಲವು ದಿನಗಳಲ್ಲಿ ವಿಶೇಷ ಸುರಕ್ಷತೆ ಆಪ್ ಮತ್ತು  1 ಲಕ್ಷ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯ ಜನ್ಮದಿನೋತ್ಸವದ ಸಂದರ್ಭದಲ್ಲಿ ಪಕ್ಷವು ಆಗಸ್ಟ್ 20 ರಿಂದ ವಿಶೇಷ 'ಇಂದಿರಾ ಶಕ್ತಿ ಅಪ್' ಅನ್ನು ಪ್ರಾರಂಭಿಸಿತು. ಮಹಿಳಾ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ವಿತರಣೆ ಮಾಡುತ್ತಿರುವುದು ರಾಜಕೀಯ ಉದ್ದೇಶದಿಂದ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ. ಆದರೆ ರಾಜಕೀಯ ಉದ್ದೇಶದಿಂದಲೇ ಕಾಂಗ್ರೆಸ್ ಈ ಹೆಜ್ಜೆ ತೆಗೆದುಕೊಂಡಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಮುಂದಿನ ಮೂರು-ನಾಲ್ಕು ತಿಂಗಳೊಳಗೆ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಕಾರ್ಯಕರ್ತರ ಮೂಲಕ ಈ ಅಪ್ಲಿಕೇಶನ್ ಅನ್ನು ಒಂದು ಲಕ್ಷ ಬಾಲಕಿಯರ ಮೊಬೈಲ್ ಫೋನ್ಗಳಲ್ಲಿ ಡೌನ್ಲೋಡ್ ಮಾಡಿ ಮತ್ತು ಪೆಪ್ಪರ್ ಸ್ಪ್ರೇ ನೀಡುವ ಗುರಿ ಹೊಂದಲಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಬಿಹಾರ ಉಸ್ತುವಾರಿ ರಾಜೇಶ್ ಲಿಲೋಥಿಯಾ ಹೇಳಿದ್ದಾರೆ.

ಬ್ಲಾಕ್ ಮತ್ತು ಗ್ರಾಮೀಣ ಮಟ್ಟದಲ್ಲಿ ಈ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದ್ದು, ನಮ್ಮ ಎಲ್ಲಾ ಜಿಲ್ಲಾಧ್ಯಕ್ಷರಿಗೆ ಈ ಜವಾಬ್ದಾರಿ ನೀಡಲಾಗುವುದು. ಮೊದಲಿಗೆ ನಾವು ಒಂದು ಒಂದು ಲಕ್ಷ ಬಾಲಕಿಯರಿಗೆ ಈ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದ್ದೇವೆ. ಆದರೆ ಭವಿಷ್ಯದಲ್ಲಿ ಇದು ಬಿಹಾರದ ಪ್ರತಿಯೊಂದು ಮನೆಯನ್ನೂ ತಲುಪಲಿದೆ ಎಂದು ಅವರು ತಿಳಿಸಿದರು.

Trending News