ಈ ಅದ್ಬುತ ತರಕಾರಿಯ ಬೆಲೆ ಪ್ರತಿ ಕೆ.ಜಿ.ಗೆ ಒಂದು ಲಕ್ಷ ರೂ.

ಐಎಎಸ್  ಅಧಿಕಾರಿ ಸುಪ್ರಿಯಾ ಸಾಹು ಎಂಬವರು ಫೋಟೋ ಸಮೇತ ಈ ತರಕಾರಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಂಡಿದ್ದಾರೆ. 

Written by - Ranjitha R K | Last Updated : Apr 1, 2021, 03:33 PM IST
  • ವಿಶ್ವದ ಅತ್ಯಂತ ದುಬಾರಿ ತರಕಾರಿ ಇದು
  • ಪ್ರತಿ ಕೆ ಜಿ ತರಕಾರಿ ಲಕ್ಷಗಳಲ್ಲಿ ಮಾರಾಟವಾಗುತ್ತಿದೆ
  • ಈ ತರಕಾರಿ ಯಾಕಿಷ್ಟು ದುಬಾರಿ ಎನ್ನುವುದಕ್ಕೂ ಕಾರಣವಿದೆ
ಈ ಅದ್ಬುತ ತರಕಾರಿಯ ಬೆಲೆ  ಪ್ರತಿ ಕೆ.ಜಿ.ಗೆ ಒಂದು ಲಕ್ಷ ರೂ. title=
ವಿಶ್ವದ ಅತ್ಯಂತ ದುಬಾರಿ ತರಕಾರಿ (photo twitter)

ನವದೆಹಲಿ :Bihar Hopshoots Viral : ಬಿಹಾರದಲ್ಲಿ ಒಂದು ತರಕಾರಿಯನ್ನು (Vegetable)  ಬೆಳೆಸಲಾಗುತ್ತಿದೆ. ಈ ತರಕಾರಿಯ ಬೆಲೆ  ಕೇಳಿದರೆ ಶಾಕ್ ಆಗುವುದಂತೂ ಖಂಡಿತ.  ಇದೀಗ ಎಲ್ಲೆಡೆ ಈ ತರಕಾರಿ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಈ ತರಕಾರಿ ಪ್ರತಿ ಕೆಜಿಯನ್ನು ಲಕ್ಷಗಳಲ್ಲಿ ಮಾರಾಟವಾಗುತ್ತಿದೆ.  

ಐಎಎಸ್ (IAS) ಅಧಿಕಾರಿ ಸುಪ್ರಿಯಾ ಸಾಹು ಎಂಬವರು ಫೋಟೋ ಸಮೇತ ಈ ತರಕಾರಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾರೆ. ಈ ತರಕಾರಿಯನ್ನು ಕೆಜಿಗೆ ಒಂದು ಲಕ್ಷ ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಬರೆದಿದ್ದಾರೆ. ಈ ತರಕಾರಿಯನ್ನು ಬಿಹಾರದಲ್ಲಿ (Bihar) ಬೆಳೆಸಲಾಗುತ್ತಿದೆ. ಈ ತರಕಾರಿಯ  ಹೆಸರು ಹಾಪ್-ಶೂಟ್ಸ್  (hop-shoots) . 

 

ಇದನ್ನೂ ಓದಿWatch: ಸ್ಟಂಟ್ ಮಾಡಿದ ಭೋಜಪುರಿ ನಟಿ ಮೊನಾಲಿಸಾ ! ವೀಡಿಯೋ ಸಕತ್ ವೈರಲ್

ಇದನ್ನು ಬಿಯರ್ ನಲ್ಲಿ (Beer) ಫ್ಳೆವರಿಂಗ್ ಏಜೆಂಟ್ ಆಗಿ ಬಳಸಲಾಗುತ್ತದೆ.  ಗಿಡಮೂಲಿಕೆ ಔಷಧದಲ್ಲಿಯೂ ಇದನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಪಲ್ಯ, ಸಾಂಬಾರ್ ಮಾಡಲು ಕೂಡಾ ಇದನ್ನು ಉಪಯೋಗಿಸುತ್ತಾರೆ. 

ಈ ತರಕಾರಿ ಯಾಕೆ ಇಷ್ಟೊಂದು ದುಬಾರಿ ಎನ್ನುವುದಕ್ಕೂ ಕಾರಣವಿದೆ.  ದೇಹದಲ್ಲಿನ ಕ್ಯಾನ್ಸರ್ (cancer) ಕೋಶಗಳನ್ನು ಇದು  ತೊಡೆದು ಹಾಕುತ್ತದೆ. ಈ ಕಾರಣದಿಂದಾಗಿಯೇ ಇದನ್ನು ವಿಶ್ವದ ಅತ್ಯಂತ ದುಬಾರಿ ತರಕಾರಿ ಎನ್ನಲಾಗಿದೆ. ಈ ವೈರಲ್ ಪೋಸ್ಟ್‌ನಲ್ಲಿ ಕಾಣುವ ರೈತನ (farmer) ಹೆಸರು ಔರಂಗಾಬಾದ್‌ನ ರೈತ  ಅಮ್ರೆಶ್ ಸಿಂಗ್.

ಇದನ್ನೂ ಓದಿ Viral: ಸೈಕಲ್-ಕಾರು ಡಿಕ್ಕಿ; ಆದ್ರೆ ಡ್ಯಾಮೇಜ್ ಆಗಿದ್ದು ಕಾರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News