ಜಾರ್ಖಂಡ್: ಜಾರ್ಖಂಡ ನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ಮಾಡಿ ಅವರನ್ನು ಎಳೆದಾಡಿದ್ದಾರೆ. ಅವರನ್ನು ಹಲ್ಲೆ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರು ಕಪ್ಪು ಧ್ವಜಗಳನ್ನು ತೋರಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಅಗ್ನಿವೇಶ್ ರನ್ನು ಮಾತುಕತೆಗೆ ಆಹ್ವಾನಿಸಿದಂತೆ ವರ್ತಿಸಿ ನಂತರ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಮುಖ್ಯಮಂತ್ರಿ ಈ ಘಟನೆ ಬಗ್ಗೆ ಮುಖ್ಯಮಂತ್ರಿ ರಘುಬರ್ ದಾಸ್ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸ್ವಾಮಿ ಅಗ್ನಿವೇಶ್ ಅವರು ರಾಜ್ಯದ ರಾಜಧಾನಿ ರಾಂಚಿಯಿಂದ 365 ಕಿ.ಮೀ. ದೂರದಲ್ಲಿರುವ ಪಾಕುರ್ ಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಹೋಟೆಲ್ನಿಂದ ಹೊರಬಂದ ತಕ್ಷಣ ಜನಸಮೂಹದ ಮಧ್ಯಪ್ರವೇಶಿಸಿದ ಬಿಜೆಪಿ ಕಾರ್ಯಕರ್ತರು "ಜೈ ಶ್ರೀ ರಾಮ್" ಎನ್ನುತ್ತಾ 80 ವರ್ಷ ವಯಸ್ಸಿನ ಸ್ವಾಮಿ ಅಗ್ನಿವೇಶ್ ರನ್ನು ಥಳಿಸಿದರು.
ಈ ಹಲ್ಲೆಯ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮಿ ಅಗ್ನಿವೇಶ್ "ನಾನು ಯಾವುದೇ ರೀತಿಯ ಹಿಂಸೆಗೆ ಪ್ರಚೋಧನೆ ಕೊಡುವವನಲ್ಲ, ನಾನು ಶಾಂತಿಯನ್ನು ಪ್ರೀತಿಸುವ ವ್ಯಕ್ತಿ , ನನ್ನ ಮೇಲೆ ಏಕೆ ದಾಳಿ ಮಾಡಲಾಗಿದೆ ಎನ್ನುವುದು ನನಗೆ ಗೊತ್ತಿಲ್ಲ" ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರು ಹಲ್ಲೇ ಮಾಡಿದಾಗ ಸ್ವಾಮೀ ಅಗ್ನಿವೇಶ್ ಅವರಿಗೆ ಯಾವುದೇ ರೀತಿಯ ಪೋಲಿಸ್ ರಕ್ಷಣೆ ಇರಲಿಲ್ಲ ಎಂದು ತಿಳಿದುಬಂದಿದೆ.ಗಾಯಗೊಂಡಿರುವ ಸ್ವಾಮೀ ಅಗ್ನಿವೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪಕ್ಕೆಲಬುಗಳಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.