ನವದೆಹಲಿ: ಬಿಜೆಪಿ- ಶಿವಸೇನಾ ಶುಕ್ರವಾರದಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕೊನೆಗೂ ಮೈತ್ರಿ ಸೂತ್ರವನ್ನು ಕಂಡುಕೊಂಡಿದೆ, ಅದರ ಪ್ರಕಾರ 164-124 ರ ಸೂತ್ರದನ್ವಯ ಬಿಜೆಪಿ-ಶಿವಸೇನಾ 'ಮಹಾಯುತಿ' ಅದರ ಪ್ರಕಾರ ಸ್ಪರ್ಧಿಸಲಿದೆ ಎನ್ನಲಾಗಿದೆ.
ಈಗ ಹಲವು ದಿನಗಳ ಗೊಂದಲದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ 'ಮಹಾಯುತಿ' ಮೈತ್ರಿಯನ್ನು ಘೋಷಿಸಿದ್ದಾರೆ.
CM Devendra Fadnavis: In the coming days we will ask all the rebel candidates to withdraw and this will be done with the rebel candidates of each party of grand alliance.If they don’t comply then they will not get any position in any of our alliance parties. pic.twitter.com/0shZq1jlmB
— ANI (@ANI) October 4, 2019
2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಶಿವಸೇನೆ ನಡುವಿನ ಸ್ಥಾನ ಹಂಚಿಕೆ ಒಪ್ಪಂದಕ್ಕೆ ಮೊಹರು ಹಾಕಲಾಗಿಲ್ಲವಾದರೂ, ಬಿಜೆಪಿ ಈವರೆಗೆ 152 ವಿಧಾನಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು12 ತನ್ನ ಟಿಕೆಟ್ ನಲ್ಲಿ ಸ್ಪರ್ಧಿಸುವ ಮಿತ್ರ ಪಕ್ಷಗಳಿಗೆ ನೀಡಿದೆ. ಈ 12 ಸ್ಥಾನಗಳಲ್ಲಿ ನಾರಾಯಣ್ ರಾಣೆ ಅವರ ಪುತ್ರ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷದ ನಿತೇಶ್ ರಾಣೆ, ಮತ್ತು ಆರ್‌ಎಸ್‌ಪಿ ಅಭ್ಯರ್ಥಿ ಮತ್ತು ದೌಂಡ್ ಶಾಸಕ ರಾಹುಲ್ ಕುಲ್ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ, ಶಿವಸೇನೆ ಮಹಾರಾಷ್ಟ್ರದ 124 ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೇವೇಂದ್ರ ಫಡ್ನವೀಸ್, 'ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನರಿಂದ ಭಾರಿ ಬೆಂಬಲ ದೊರಕಿತು. ಉಭಯ ಪಕ್ಷಗಳ ನಡುವಿನ ಮೈತ್ರಿ ಕಾರ್ಯರೂಪಕ್ಕೆ ಬಂದಿತು, ಆದ್ದರಿಂದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅದೇ 'ಮಹಾಯುತಿ' ಒಟ್ಟಿಗೆ ಬರಬೇಕೆಂದು ನಾವು ನಿರ್ಧರಿಸಿದ್ದೇವೆ' ಎಂದು ಹೇಳಿದರು.
ಬಿಜೆಪಿ ಮತ್ತು ಶಿವಸೇನೆಗಳ ಸ್ಥಾನ ಹಂಚಿಕೆ ಒಪ್ಪಂದವು 164-124ಕ್ಕೆ ಇತ್ಯರ್ಥವಾದರೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಒಟ್ಟಾಗಿ 164 ವಿಧಾನಸಭಾ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಮತ್ತೊಂದೆಡೆ ಶಿವಸೇನೆ ಕೇವಲ 124 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.