ಶಿವಭಾಕ್ತನಾದರೆ ಮಹಾಮೃತ್ಯುಂಜಯ ಮಂತ್ರ ಪಠಿಸಲಿ : ರಾಹುಲ್ ಗಾಂಧಿಗೆ ಬಿಜೆಪಿ ಸವಾಲು

ರಾಹುಲ್ ಗಾಂಧಿ ಅವರನ್ನು ಚುನಾವಣಾ ಹಿಂದೂ ಎಂದು ಬಿಜೆಪಿ ಕರೆದಿದೆ. ಅಲ್ಲದೆ, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು ಹಾಕಿದೆ.   

Written by - Ranjitha R K | Last Updated : Nov 29, 2022, 02:22 PM IST
  • ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ
  • ಇಂದು ಉಜ್ಜಯಿನಿಯ ಮಹಾಕಾಲ್‌ ಮಂದಿರಕ್ಕೆ ಭೇಟಿ
  • ರಾಹುಲ್ ಗಾಂಧಿಗೆ ಸವಾಲು ಹಾಕಿದ ಬಿಜೆಪಿ
ಶಿವಭಾಕ್ತನಾದರೆ ಮಹಾಮೃತ್ಯುಂಜಯ ಮಂತ್ರ ಪಠಿಸಲಿ : ರಾಹುಲ್ ಗಾಂಧಿಗೆ  ಬಿಜೆಪಿ ಸವಾಲು title=
Rahul Gandhi Mahakal Mandir

ನವದೆಹಲಿ : ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಇಂದು ಉಜ್ಜಯಿನಿಯ ಮಹಾಕಾಲ್‌ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಮಹಾಕಾಲ್ ಮಂದಿರಕ್ಕೆ ಭೇಟಿ ನೀಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ರಾಜಕೀಯ  ಶುರುವಾಗಿದೆ. ಈ ಮಧ್ಯೆ ರಾಹುಲ್ ಗಾಂಧಿ ಅವರನ್ನು ಚುನಾವಣಾ ಹಿಂದೂ ಎಂದು ಬಿಜೆಪಿ ಕರೆದಿದೆ. ಅಲ್ಲದೆ, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಂತೆ ರಾಹುಲ್ ಗಾಂಧಿಗೆ ಬಿಜೆಪಿ ಸವಾಲು ಹಾಕಿದೆ. ಬಿಜೆಪಿಯ ಈ ವರ್ತನೆಗೆ ಕಾಂಗ್ರೆಸ್ ಕೂಡಾ ತಿರುಗೇಟು ನೀಡಿದೆ. 2024ರ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಸೋಲು ಕಾಣಿಸುತ್ತಿದೆ. ರಾಹುಲ್ ಪಾದಯಾತ್ರೆ ಬಿಜೆಪಿಗೆ ನಡುಕ  ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ ಎಂದು ಹೇಳಿದೆ. 

ರಾಹುಲ್ ಗಾಂಧಿ ನಿಜವಾದ ಶಿವಸೇವಕನಾಗಿದ್ದರೆ ಮಹಾಮೃತ್ಯುಂಜಯ ಮಂತ್ರ ಪಠಿಸಲಿ : 
ರಾಹುಲ್ ಗಾಂಧಿ ಅವರನ್ನು ಚುನಾವಣಾ ಹಿಂದೂ ಎಂದು ಕರೆದಿರುವ  ಭಾರತೀಯ ಜನತಾ ಪಕ್ಷ,  ಚುನಾವಣಾ ಲೆಕ್ಕಾಚಾರದ ಹಿನ್ನೆಲೆಯಲ್ಲಿಯೇ ರಾಹುಲ್ ಗಾಂಧಿ ಮಹಾಕಾಲ್‌ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದೆ. ಇನ್ನು ಕ್ಯಾಮರಾ ಮುಂದೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದ ಬಿಜೆಪಿ ವಕ್ತಾರ ರಾಜ್‌ಪಾಲ್ ಸಿಂಗ್ ಸಿಸೋಡಿಯಾ, ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ. ರಾಹುಲ್ ಗಾಂಧಿ ನಿಜವಾದ ಶಿವಭಕ್ತನಾಗಿದ್ದರೆ  ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು ಎಂದು ಸವಾಲೆಸೆದಿದ್ದಾರೆ. 

ಇದನ್ನೂ ಓದಿ : Arvind Kejriwal: ಸೂರತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ರೋಡ್ ಶೋ ಮೇಲೆ ಕಲ್ಲು ತೂರಾಟ!

ಭಕ್ತಿ ಹೇಗೆ ಮಾಡಬೇಕೆಂದು ಬಿಜೆಪಿ ಹೇಳುವ ಅಗತ್ಯವಿಲ್ಲ : 
ಬಿಜೆಪಿಯ ಸವಾಲಿನಿಂದ ಕೆರಳಿದ ಕಾಂಗ್ರೆಸ್, ಬಿಜೆಪಿ ನಾಯಕರಂತೆ ರಾಹುಲ್ ಗಾಂಧಿ ಫೋಟೋ ಸೆಷನ್ ನಡೆಸುವುದಿಲ್ಲ ಎಂದು  ಕಿಡಿ ಕಾರಿದೆ. ರಾಹುಲ್ ಗಾಂಧಿ ಮಹಾಕಾಲನ ನಿಜವಾದ ಭಕ್ತರಾಗಿದ್ದು, ಮಹಾಕಾಲ ದರ್ಶನಕ್ಕೆ ತೆರಳುತ್ತಿದ್ದಾರೆ. ರಾಹುಲ್ ಗಾಂಧಿ ಹೇಗೆ ಮಹಾಕಲನ ಪೂಜೆ ಮಾಡಬೇಕು ಎಂದು ಬಿಜೆಪಿ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.  2024 ರ ಚುನಾವಣೆಯಲ್ಲಿ ತನ್ನ ಸೋಲು ಬಿಜೆಪಿಗೆ ಕಾಣಿಸುತ್ತಿದೆ. ಈ ಕಾರಣದಿಂದ ರಾಹುಲ್ ಗಾಂಧಿ ಪಾದಯಾತ್ರೆಯ ಬಗ್ಗೆ ಬಿಜೆಪಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ ಎಂದು ಹೇಳಿದೆ.  

ಇದನ್ನೂ ಓದಿ : ನವೋದಯ ವಿದ್ಯಾಲಯ ಪ್ರವೇಶಕ್ಕಾಗಿ ಅಗತ್ಯವಾಗಿ ಬೇಕು ಈ ದಾಖಲೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News