ನವೋದಯ ವಿದ್ಯಾಲಯ ಪ್ರವೇಶಕ್ಕಾಗಿ ಅಗತ್ಯವಾಗಿ ಬೇಕು ಈ ದಾಖಲೆಗಳು

JNVS Class 6th Admission Process:ನವೋದಯ ವಿದ್ಯಾಲಯದಲ್ಲಿ 6 ನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಭರ್ತಿ ಮಾಡಬೇಕಾದ ಫಾರ್ಮ್ navodaya.gov.in ನಲ್ಲಿ ಲಭ್ಯವಿರಲಿದೆ.

Written by - Ranjitha R K | Last Updated : Nov 28, 2022, 04:51 PM IST
  • 2023ನೇ ಸಾಲಿಗೆ ನವೋದಯ ವಿದ್ಯಾಲಯ ಪ್ರವೇಶವನ್ನು ಆನ್‌ಲೈನ್ ಮೋಡ್‌
  • ಭರ್ತಿ ಮಾಡಬೇಕಾದ ಫಾರ್ಮ್ navodaya.gov.in ನಲ್ಲಿ ಲಭ್ಯ
  • ನವೋದಯ ಶಾಲೆಯ 2023 ರ 6 ನೇ ತರಗತಿಯ ಪ್ರವೇಶಕ್ಕೆ ಈ ದಾಖಲೆಗಳು ಅಗತ್ಯ
 ನವೋದಯ ವಿದ್ಯಾಲಯ ಪ್ರವೇಶಕ್ಕಾಗಿ ಅಗತ್ಯವಾಗಿ ಬೇಕು ಈ ದಾಖಲೆಗಳು  title=
JNVS Class 6th Admission Process

JNVS Class 6th Admission Process : ನವೋದಯ ವಿದ್ಯಾಲಯ ಸಮಿತಿಯು ನವೆಂಬರ್ 2022 ರಲ್ಲಿ 6 ನೇ ತರಗತಿಯ ಪ್ರವೇಶಕ್ಕಾಗಿ ತಾತ್ಕಾಲಿಕವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ. 2023ನೇ ಸಾಲಿಗೆ ನವೋದಯ ವಿದ್ಯಾಲಯ ಪ್ರವೇಶವನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುವುದು. 6 ನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಭರ್ತಿ ಮಾಡಬೇಕಾದ ಫಾರ್ಮ್ navodaya.gov.in ನಲ್ಲಿ ಲಭ್ಯವಿರಲಿದೆ.  

ನವೋದಯ ವಿದ್ಯಾಲಯದ 6 ನೇ ತರಗತಿಯ ಪ್ರವೇಶ ಪರೀಕ್ಷೆ 2023 ಏಪ್ರಿಲ್ 2023 ರಲ್ಲಿ ನಡೆಯಲಿದೆ  ಎನ್ನಲಾಗಿದೆ. ದೇಶಾದ್ಯಂತ ಎಲ್ಲಾ ಜವಾಹರ್ ನವೋದಯ ವಿದ್ಯಾಲಯಗಳಿಗೆ ಒಂದೇ ಹಂತದಲ್ಲಿ  ಪ್ರವೇಶ ಪರೀಕ್ಷೆ ನಡೆಸಲಾಗುವುದು. NVS 6 ನೇ ತರಗತಿಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಜೂನ್ 2023 ರೊಳಗೆ ಘೋಷಿಸುವ ಸಾಧ್ಯತೆ ಇದೆ.   ಅಧಿಕೃತ ಪೋರ್ಟಲ್‌ನಿಂದ ಈ ಪರೀಕ್ಷೆಯ ಫಲಿತಾಂಶವನ್ನು  ಪಡೆದುಕೊಳ್ಳಬಹುದು. 

ಇದನ್ನೂ ಓದಿ : PM Modi Meets Tribal Brothers: ಅನಾಥ ಕಂದಮ್ಮಗಳ ಭೇಟಿ ಮಾಡಿದ ಪ್ರಧಾನಿ: ಶಿಕ್ಷಣದ ಜವಾಬ್ದಾರಿ ಹೊತ್ತ ಮೋದಿ

 2023 ರಲ್ಲಿ 6 ನೇ ತರಗತಿಯ ಪ್ರವೇಶ ಪರೀಕ್ಷೆ ನಡೆಯುವ ದಿನಾಂಕಗಳು : 

1.JNVST  2023ನೇ ಸಾಲಿನ  6ನೇ ತರಗತಿ ಪ್ರವೇಶ ಪರಿಕ್ಕ್ಷೆಯ ಅಧಿಸೂಚನೆಯು ನವೆಂಬರ್ 2022 ರಲ್ಲಿ ಬರಬಹುದು.
2.ನವೋದಯ ವಿದ್ಯಾಲಯದಲ್ಲಿ 6 ನೇ ತರಗತಿಯ ಪ್ರವೇಶ ಪ್ರಕ್ರಿಯೆಯು ನವೆಂಬರ್ 2022 ರಲ್ಲಿ ಪ್ರಾರಂಭವಾಗಬಹುದು. 
3.NVS 2023ನೇ ಸಾಲಿನ  6ನೇ ತರಗತಿಯ  ಪ್ರವೇಶ ಪರೀಕ್ಷೆಯ ಕೊನೆಯ ದಿನಾಂಕ ಡಿಸೆಂಬರ್ 2022 ಆಗಿರಬಹುದು.
4.ಡಿಸೆಂಬರ್ 2022 ರ ಕೊನೆಯ ವಾರದಲ್ಲಿ ಕರೆಕ್ಷನ್ ವಿಂಡೋ ತೆರೆಯಲಿದೆ. 
5. ನವೋದಯ ಶಾಲೆಗೆ 2023 ರ 6 ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು  ಏಪ್ರಿಲ್ 2023 ರಲ್ಲಿ ನಡೆಸಬಹುದು.

ಇದನ್ನೂ ಓದಿ : ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ Live stream ಸಾಧ್ಯವಿಲ್ಲ ಎಂದ ಸುಪ್ರೀಂ

ನವೋದಯ ಶಾಲೆಯ  2023 ರ 6 ನೇ ತರಗತಿಯ ಪ್ರವೇಶಕ್ಕೆ ಅಗತ್ಯವಿರುವ ದಾಖಲೆಗಳು : 
ಫಲಿತಾಂಶದ ಘೋಷಣೆಯ ನಂತರ, ಆಯ್ಕೆಯಾದ ವಿದ್ಯಾರ್ಥಿಗಳು ನವೋದಯ ವಿದ್ಯಾಲಯ ಸಮಿತಿಯು ಸೂಚಿಸಿದ ಎಲ್ಲಾ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಬೇಕು.

1.ಹುಟ್ಟಿದ ದಿನಾಂಕದ ಪುರಾವೆ (ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಇತ್ಯಾದಿ)
2.NVS ನ ಮಾನದಂಡಗಳ ಪ್ರಕಾರ ಪ್ರಮಾಣಪತ್ರ
3.ಗ್ರಾಮೀಣ ಪ್ರದೇಶದಲ್ಲಿ ಅಧ್ಯಯನದ ಪ್ರಮಾಣಪತ್ರ
4.5ನೇ ತರಗತಿ ಅಂಕಪಟ್ಟಿ
5.ನಿವಾಸ ಪ್ರಮಾಣಪತ್ರ ಅಥವಾ ಪುರಾವೆ
6.NIOS ಅಭ್ಯರ್ಥಿಗಳ ಸಂದರ್ಭದಲ್ಲಿ, 'B' ಪ್ರಮಾಣಪತ್ರದ ಅಗತ್ಯವಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News