ಬಿಜೆಪಿ ನೈಜ ಸಮಸ್ಯೆಗಳಿಂದ ದೂರ ಸರಿದು, ಕೋಮುವಾದಿ ರಾಜಕಾರಣವನ್ನು ಮಾಡುತ್ತಿದೆ-ಉಸ್ಮಾನ್ ಪಟೇಲ್

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ ಮತ್ತು ಅಲ್ಪಸಂಖ್ಯಾತ ಕೋಶದ ಮಾಜಿ ಮುಖ್ಯಸ್ಥ ಉಸ್ಮಾನ್ ಪಟೇಲ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟಿಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇಂದೋರ್‌ನ ಕೌನ್ಸಿಲರ್ ಬಿಜೆಪಿ ಕೋಮುವಾದಿ ರಾಜಕಾರಣ ಮಾಡುತ್ತಿದೆ ಮತ್ತು ನೈಜ ಸಮಸ್ಯೆಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿದರು.

Last Updated : Feb 8, 2020, 04:41 PM IST
ಬಿಜೆಪಿ ನೈಜ ಸಮಸ್ಯೆಗಳಿಂದ ದೂರ ಸರಿದು, ಕೋಮುವಾದಿ ರಾಜಕಾರಣವನ್ನು ಮಾಡುತ್ತಿದೆ-ಉಸ್ಮಾನ್ ಪಟೇಲ್ title=

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ ಮತ್ತು ಅಲ್ಪಸಂಖ್ಯಾತ ಕೋಶದ ಮಾಜಿ ಮುಖ್ಯಸ್ಥ ಉಸ್ಮಾನ್ ಪಟೇಲ್ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟಿಸಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇಂದೋರ್‌ನ ಕೌನ್ಸಿಲರ್ ಬಿಜೆಪಿ ಕೋಮುವಾದಿ ರಾಜಕಾರಣ ಮಾಡುತ್ತಿದೆ ಮತ್ತು ನೈಜ ಸಮಸ್ಯೆಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಮಾತನಾಡಿದ ಪಟೇಲ್, "ಬಿಜೆಪಿ ನಿಜವಾದ ಸಮಸ್ಯೆಗಳಿಂದ ದೂರ ಸರಿದಿದೆ. ಇದು ಕೇವಲ ಕೋಮುವಾದಿ ರಾಜಕಾರಣವನ್ನು ಮಾಡುತ್ತಿದೆ. ಜಿಡಿಪಿ ಕಡಿಮೆಯಾಗುತ್ತಿದೆ, ಹಣದುಬ್ಬರ ಹೆಚ್ಚುತ್ತಿದೆ ಆದರೆ ಪಕ್ಷವು ಎಲ್ಲಾ ಧರ್ಮದ ಜನರ ನಡುವೆ ಬಿರುಕು ಉಂಟುಮಾಡುವ ಕಾನೂನುಗಳನ್ನು ತರುತ್ತಿದೆ" ಎಂದು ಹೇಳಿದರು.

ತಮ್ಮ ರಾಜೀನಾಮೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಇಂದೋರ್ ಅಧ್ಯಕ್ಷ ಗೋಪಿಕೃಷ್ಣ ಅವರು ಪಕ್ಷದ ಎಲ್ಲ ಕಾರ್ಯಕರ್ತರಿಗೆ ಪಕ್ಷ ಸೇರಲು ಅಥವಾ ಹೊರಹೋಗುವ ಹಕ್ಕಿದೆ ಎಂದು ಹೇಳಿದರು. ಉಸ್ಮಾನ್ ಪಟೇಲ್ ಅವರು ಪಕ್ಷದ ಹಿರಿಯ ನಾಯಕರಾಗಿದ್ದರು ಆದರೆ "ದುರದೃಷ್ಟವಶಾತ್, ಅವರು ರಾಷ್ಟ್ರೀಯ ಹಿತದೃಷ್ಟಿಯಿಂದ ಮಾಡಿದ ಕಾನೂನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

Trending News