Cholesterol Home Remedies : ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಕಾಡುವ ಸಮಸ್ಯೆಯೇ ಅಧಿಕ ಕೊಲೆಸ್ಟ್ರಾಲ್. ಕೊಲೆಸ್ಟ್ರಾಲ್ ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ.ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಹೋದಂತೆ ಹಲವಾರು ರೋಗಗಳು ಕೂಡಾ ಹತ್ತಿರವಾಗುತ್ತಾ ಇರುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದಯದ ಸಮಸ್ಯೆ ಹೆಚ್ಚಾಗತೊಡಗುತ್ತದೆ.ಇದರಿಂದಾಗಿಯೇ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳ ಅಪಾಯ ಕೂಡಾ ಕಾಡುತ್ತದೆ. ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್ ಕಂಡುಬರುತ್ತದೆ.ಮೊದಲನೆಯದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಎರಡನೆಯದು ಕೆಟ್ಟ ಕೊಲೆಸ್ಟ್ರಾಲ್.
ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದು ತಿಳಿದ ಕೂಡಲೇ ಗಾಬರಿಯಾಗುವ ಅಗತ್ಯವಿಲ್ಲ. ಕೆಲವೊಂದು ಪದಾರ್ಥಗಳನ್ನು ನಿಯಮಿತವಾಗಿ ಮತ್ತು ನಿಗದಿತ ಮಟ್ಟದಲ್ಲಿ ಸೇವಿಸುತ್ತಾ ಬಂದರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇಂಥಹ ನೈಸರ್ಗಿಕ ವಸ್ತುಗಳಲ್ಲಿ ಒಂದು ಚಿಯಾ ಬೀಜಗಳು. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಚಿಯಾ ಬೀಜಗಳು ಹೆಚ್ಚು ಪರಿಣಾಮಕಾರಿಯಾಗಿದೆ.ಚಿಯಾ ಬೀಜಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಕೊಲೆಸ್ಟ್ರಾಲ್ ಅನ್ನು ಕರಗಿಸುವಲ್ಲಿ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ : ಆನುವಂಶಿಕ ಪರೀಕ್ಷೆ ಎಂದರೇನು? ಅಪರೂಪದ ಕಾಯಿಲೆಗಳನ್ನು ಪತ್ತೆಹಚ್ಚಲು ಈ ಪರೀಕ್ಷೆ ಏಕೆ ಅಗತ್ಯ ಗೊತ್ತೇ?
ಚಿಯಾ ಬೀಜಗಳನ್ನು ಸೇವಿಸುವುದು ಹೇಗೆ? :
ಚಿಯಾ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಬಳಸುವ ಸರಿಯಾದ ವಿಧಾನ ತಿಳಿದಿರಬೇಕು. ಒಮೆಗಾ-3, ಕ್ಯಾಲ್ಸಿಯಂ, ಫೈಬರ್, ಪ್ರೋಟೀನ್, ಆಂಟಿಆಕ್ಸಿಡೆಂಟ್‌ಗಳಂತಹ ಅಂಶಗಳು ಚಿಯಾ ಬೀಜಗಳಲ್ಲಿ ಕಂಡುಬರುತ್ತವೆ. ಇದು ನಮ್ಮ ದೇಹವನ್ನು ಸದೃಢವಾಗಿಡಲು,ತೂಕವನ್ನು ಕಡಿಮೆ ಮಾಡಲು, ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯಕವಾಗಿದೆ.
ಕೊಲೆಸ್ಟ್ರಾಲ್ ಸಮಸ್ಯೆಯ ನಿವಾರಣೆಯಾಗಬೇಕಾದರೆ ಚಿಯಾ ಬೀಜಗಳನ್ನು ಈ ರೀತಿಯಲ್ಲಿ ಸೇವಿಸಬೇಕು.1 ಚಮಚ ಚಿಯಾ ಬೀಜಗಳನ್ನು 1 ಕಪ್ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಬೀಜಗಳನ್ನು ಸೇವಿಸಬೇಕು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚಿಯಾ ಬೀಜಗಳ ಇತರ ಪ್ರಯೋಜನಗಳು :
ತೂಕ ನಷ್ಟ
ಜೀರ್ಣಕ್ರಿಯೆ
ಮೂಳೆಗಳು ಬಲಗೊಳ್ಳುತ್ತವೆ.
ಹೃದಯ ಆರೋಗ್ಯ ಕಾಪಾಡುತ್ತದೆ
ರಕ್ತದೊತ್ತಡ ನಿಯಂತ್ರಿಸುತ್ತದೆ
ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣ .
ಇದನ್ನೂ ಓದಿ : Benefits Of Strawberries: ಸ್ಟ್ರಾಬೆರಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಚಿಯಾ ಬೀಜಗಳನ್ನು ಸೇವಿಸುವ ಇತರ ವಿಧಾನಗಳು :
ಗಂಜಿ :
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಬೀಜಗಳನ್ನು ಬೆಳಗಿನ ಉಪಾಹಾರದಲ್ಲಿ ಗಂಜಿಯೊಂದಿಗೆ ಬೆರೆಸಿ ತಿನ್ನಬಹುದು.ಇದಕ್ಕಾಗಿ ನೀರಿನಲ್ಲಿ ನೆನೆಸಿದ ಬೀಜಗಳನ್ನು ಗಂಜಿಗೆ ಸೇರಿಸಬೇಕು.
ಸಲಾಡ್ :
ನೀವು ಹಣ್ಣು ಮತ್ತು ತರಕಾರಿ ಸಲಾಡ್‌ನೊಂದಿಗೆ ಚಿಯಾ ಬೀಜಗಳನ್ನು ಸೇವಿಸಬಹುದು.
ಸ್ಮೂಥಿ :
ಸ್ಮೂಥಿಯನ್ನು ಹೆಚ್ಚು ಆರೋಗ್ಯಕರ ಮತ್ತು ದಪ್ಪವಾಗಿಸಲು ನೀವು ಚಿಯಾ ಬೀಜಗಳನ್ನು ಸೇರಿಸಬಹುದು.ನಿಮಗಿಷ್ಟವಾದ ಸ್ಮೂಥಿಗೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಬೇಕು.
ಇದನ್ನೂ ಓದಿ : ಈ ಒಂದು ದೇಸೀ ಹಣ್ಣು ಸಾಕು ಯೂರಿಕ್ ಆಸಿಡ್ ನಿಯಂತ್ರಣಕ್ಕೆ !ಆದರೆ ಇದೇ ಹಾಲಿನೊಂದಿಗೆ ಸೇವಿಸಿ
ಹಲ್ವಾ :
ಚಿಯಾ ಬೀಜಗಳ ಪುಡಿಂಗ್ ಅನ್ನು ತಯಾರಿಸಬಹುದು. ಇದಕ್ಕಾಗಿ ಈ ಬೀಜಗಳನ್ನು ಹಾಲಿನೊಂದಿಗೆ ಬೆರೆಸಿ ರುಚಿಕರವಾದ ಪುಡಿಂಗ್ ತಯಾರಿಸಿ ಮತ್ತು ತಣ್ಣಗಾದ ನಂತರ ತಿನ್ನಿರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ