ಬಿಜೆಪಿ ನಾಯಕಿ ಸೋನಾಲಿಗೆ ಒತ್ತಾಯವಾಗಿ ನೀಡಲಾಗಿತ್ತು ಡ್ರಗ್! ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲು

ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಗೋವಾ ಇನ್ಸ್‌ಪೆಕ್ಟರ್ ಜನರಲ್ ಓಂ ವೀರ್ ಸಿಂಗ್ ಬಿಷ್ಣೋಯ್, “ಶಂಕಿತನೊಬ್ಬ ಆಕೆಗೆ ಬಲವಂತವಾಗಿ ಮಾದಕ ವಸ್ತುವನ್ನು ನೀಡಿರುವುದು ಕಂಡುಬಂದಿದೆ. ಆಕೆಗೆ ಅಸಹ್ಯಕರ ರಾಸಾಯನಿಕವನ್ನು ನೀಡಲಾಗಿದೆ. ಬಳಿಕ ಆಕೆ ನಿಯಂತ್ರಣಕ್ಕೆ ಬರಲಿಲ್ಲ.

Written by - Bhavishya Shetty | Last Updated : Aug 26, 2022, 04:02 PM IST
    • ಬಿಜೆಪಿ ನಾಯಕಿ ಮತ್ತು ಮಾಜಿ ಬಿಗ್ ಬಾಸ್ ತಾರೆ ಸೋನಾಲಿ ಫೋಗಟ್ ನಿಧನ ಪ್ರಕರಣ
    • ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡಿದ್ದ ಹಿನ್ನೆಲೆಯಲ್ಲಿ ತನಿಖೆ
    • ಸೋನಾಲಿ ದೇಹದಲ್ಲಿ ಪತ್ತೆಯಾದ ಡ್ರಗ್ ಅಂಶ!
ಬಿಜೆಪಿ ನಾಯಕಿ ಸೋನಾಲಿಗೆ ಒತ್ತಾಯವಾಗಿ ನೀಡಲಾಗಿತ್ತು ಡ್ರಗ್! ತನಿಖೆಯಲ್ಲಿ ಆಘಾತಕಾರಿ ಸತ್ಯ ಬಯಲು title=
Sonali Phogat Murder

ನವದೆಹಲಿ: ಬಿಜೆಪಿ ನಾಯಕಿ ಮತ್ತು ಮಾಜಿ ಬಿಗ್ ಬಾಸ್ ತಾರೆ ಸೋನಾಲಿ ಫೋಗಟ್ ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡಿದ್ದ ಹಿನ್ನೆಲೆಯಲ್ಲಿ ಗೋವಾ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಆಕೆಯ ಸಾವಿಗೆ ಸಂಬಂಧಿಸಿದಂತೆ ಮಹತ್ತರ ಮಾಹಿತಿ ಹೊರಬಂದಿದ್ದು, ಅವರ ದೇಹದಲ್ಲಿ ಡ್ರಗ್ ಅಂಶ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಗೋವಾ ಇನ್ಸ್‌ಪೆಕ್ಟರ್ ಜನರಲ್ ಓಂ ವೀರ್ ಸಿಂಗ್ ಬಿಷ್ಣೋಯ್, “ಶಂಕಿತನೊಬ್ಬ ಆಕೆಗೆ ಬಲವಂತವಾಗಿ ಮಾದಕ ವಸ್ತುವನ್ನು ನೀಡಿರುವುದು ಕಂಡುಬಂದಿದೆ. ಆಕೆಗೆ ಅಸಹ್ಯಕರ ರಾಸಾಯನಿಕವನ್ನು ನೀಡಲಾಗಿದೆ. ಬಳಿಕ ಆಕೆ ನಿಯಂತ್ರಣಕ್ಕೆ ಬರಲಿಲ್ಲ. ಮುಂಜಾನೆ 4:30 ಗಂಟೆಗೆ ಆಕೆ ನಿಯಂತ್ರಣದಲ್ಲಿಲ್ಲ, ಶಂಕಿತ ವ್ಯಕ್ತಿ ಆಕೆಯನ್ನು ಶೌಚಾಲಯಕ್ಕೆ ಕರೆದೊಯ್ದಿದ್ದು, ಎರಡು ಗಂಟೆಗಳ ಕಾಲ ಅವರು ಏನು ಮಾಡಿದರು ಎಂಬುದಕ್ಕೆ ಯಾವುದೇ ವಿವರಣೆಯಿಲ್ಲ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ಎಫ್‌ಎಸ್‌ಎಲ್ ತಂಡ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ಯಲಿದೆ. ಇಬ್ಬರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಔಷಧಿಯ ಪ್ರಭಾವದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ” ಎಂದು ಹೇಳಿದ್ದಾರೆ. 

ಇದನ್ನೂ ಓದಿ: Sonali Phogat Death: ಬಿಜೆಪಿ ನಾಯಕಿ, ನಟಿ ಸೋನಾಲಿ ಪೋಗಟ್ ಗೋವಾದಲ್ಲಿ ಸಾವು!

ಶುಕ್ರವಾರ ಹಿಸಾರ್‌ನಲ್ಲಿ ಹರಿಯಾಣ ಬಿಜೆಪಿ ನಾಯಕಿಯ ಅಂತ್ಯಕ್ರಿಯೆ ನಡೆದಿದ್ದು, ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿತ್ತು. ಪಿಟಿಐ ವರದಿಯ ಪ್ರಕಾರ, ಸೋನಾಲಿ ಫೋಗಟ್ ಅವರ ಮಗಳು ಯಶೋಧರ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಸಂಜೆ, ಜನರು ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಲು ಸಾಧ್ಯವಾಗುವಂತೆ ಗೋವಾದಿಂದ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಅವರ ಫಾರ್ಮ್‌ಹೌಸ್‌ಗೆ ತರಲಾಯಿತು. ಹರ್ಯಾಣ ಸಚಿವ ಕಮಲ್ ಗುಪ್ತಾ, ಹಿಸಾರ್‌ನ ಬಿಜೆಪಿ ಶಾಸಕ ಮತ್ತು ಪಕ್ಷದ ಮತ್ತೊಂದು ನಾಯಕ ಕುಲದೀಪ್ ಬಿಷ್ಣೋಯ್ ಈ ಸಂದರ್ಭದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ಸೋನಾಲಿ ಫೋಗಟ್ ಅವರನ್ನು ಆಗಸ್ಟ್ 23, 2022 ರಂದು ಉತ್ತರ ಗೋವಾದ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಆಕೆಯ ಪತಿ ಕೂಡ ಕೆಲವು ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದರು.

ಆಕೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದ ಮೇಲೆ 'ಬಹು ಗಾಯಗಳಿವೆ' ಎಂದು ಉಲ್ಲೇಖಿಸಲಾಗಿತ್ತು, ಗೋವಾ ಪೊಲೀಸರು ಆಕೆಯ ಇಬ್ಬರು ಸಹಚರರಾದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ವಾಸಿ ವಿರುದ್ಧ ಕೊಲೆ ಆರೋಪವನ್ನು ಹೊರಿಸಿದ್ದಾರೆ. ಆಕೆಯ ಸಹೋದರ ರಿಂಕು ಧಾಕಾ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಆಕೆಯ ಸಹೋದರ ರಿಂಕು ಢಾಕಾ ಗೋವಾ ಪೊಲೀಸರಿಗೆ ಔಪಚಾರಿಕವಾಗಿ ದೂರು ಸಲ್ಲಿಸಿದ್ದು, ಆಕೆಯ ಇಬ್ಬರು ಸಹಚರರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಫೋಗಟ್ ಸಾವಿನ ಕುರಿತು ರಾಜ್ಯ ಪೊಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಅವರ ದೂರಿನಲ್ಲಿ, ಆಕೆಯ ಸಹೋದರ ಸೋನಾಲಿಯ ಪಿಎ ಸುಧೀರ್ ಸಾಂಗ್ವಾನ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ತಮ್ಮ ದೂರಿನ ಪತ್ರದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪವನ್ನು ಆರೋಪಿಸಿದ್ದಾರೆ. ಸಾಂಗ್ವಾನ್ ತನ್ನ ಸ್ನೇಹಿತ ಸುಖ್ವಿಂದರ್ ಜೊತೆಗೆ ಸೇರಿಕೊಂಡು ಸೋನಾಲಿ ಅವರಿಗೆ ಆಹಾರದಲ್ಲಿ ಔಷಧಿ ಬೆರೆಸಿದ ನೀಡಿದ್ದಾರೆ. ಆ ನಂತರ ಮಾಡಿದ ಆಕ್ಷೇಪಾರ್ಹ ವೀಡಿಯೊದ ಮೇಲೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಣೂ. ಅ ನಂತರಔಉ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆಕೆಯ ಹತ್ಯೆಯ ಹಿಂದೆ ಕೆಲವು ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು. 

ಇದನ್ನೂ ಓದಿ: Congress : ಕೈ ನಾಯಕರಿಗೆ ಬಿಗ್ ಶಾಕ್ : ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ಡಿಲೀಟ್..!

ಫೋಗಟ್ ಕುಟುಂಬ ಬಯಸಿದರೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ತಮ್ಮ ಸರ್ಕಾರವು ಸಿದ್ಧವಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಶುಕ್ರವಾರ, ಕುಲದೀಪ್ ಬಿಷ್ಣೋಯ್ ಅವರು ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ ಎಂದು ಹೇಳಿದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News