ಗುಜರಾತ್ ವಿಧಾನ ಸಭೆ ಚುನಾವಣೆಗೆ ಇಂದು ನಡೆದ ದ್ವಿತೀಯ ಹಂತದ ಮತದಾನದಲ್ಲಿ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ತಮ್ಮ ಕ್ಷೇತ್ರವಾದ ವೀರಾಮಗಾಂನಲ್ಲಿ ಮತ ಚಲಾಯಿಸಿದರು.
ನಂತರ ಜೀ ವಾಹಿನಿಗೆ ಸಂದರ್ಶನ ನೀಡಿದ ಹಾರ್ದಿಕ್, ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲಿದ್ದು, ಇದರ ಲಾಭವನ್ನು ಕಾಂಗ್ರೆಸ್ ಪಡೆದು ಜಯಗಳಿಸಲಿದೆ. ಇದಕ್ಕಾಗಿಯೇ ಮುಕ್ತ ವೇದಿಕೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಲಿಲ್ಲ ಎಂದು ಹೇಳಿದರು.
PAAS leader Hardik Patel casts his vote in Viramgam #GujaratElection2017 pic.twitter.com/lKsSnlDSuf
— ANI (@ANI) December 14, 2017
ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಹಾಗೆಯೇ ಬಿಜೆಪಿ ಇ ಬಾರಿ ಸೋಲಲಿದೆ ಎಂದಷ್ಟೇ ತಮಗೆ ತಿಳಿದಿದೆ ಎಂದರು. ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಹಾರ್ದಿಕ್, ಬಿಜೆಪಿ ವಿರುದ್ಧ ಮತ ಚಲಾಯಿಸಲು ಗುಜರಾತಿನ ಜನರಿಗೆ ಮನವಿ ಮಾಡಿದ್ದು, ಕಾಂಗ್ರೆಸ್ಗೆ ಬೆಂಬಲ ನೀಡಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಏತನ್ಮಧ್ಯೆ, ಹಾರ್ದಿಕ್ ಪಟೇಲ್ ಅವರ ತಂದೆತಾಯಿಗಳು ಮತದಾನಕ್ಕೆ ಮುಂಚಿತವಾಗಿ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ತಮ್ಮ ಮಗ ಹಾರ್ದಿಕ್ ಕಾಂಗ್ರೆಸ್ಗೆ ಬೆಂಬಲ ನೀಡಿರುವುದಾಗಿ ಬಹಿರಂಗವಾಗಿ ತಿಳಿಸಿದರು. ಹಾರ್ದಿಕ್ ಪಟೇಲ್ ಅವರ ಪೋಷಕರಾದ ಭಾರತ್ ಪಟೇಲ್ ಮತ್ತು ಉಷಾ ಪಟೇಲ್ ಅಹಮದಾಬಾದ್ ಜಿಲ್ಲೆಯ ವಿರಾಮ್ಗಾಂ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು. ಈ ವಿಧಾನಸಭಾ ಕ್ಷೇತ್ರದಲ್ಲಿ 325 ಮತಗಟ್ಟೆಗಳನ್ನು ರಚಿಸಲಾಗಿದೆ. 2012 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ತೇಜಶ್ರೀ ಪಟೇಲ್ 8,493 ಮತಗಳೊಂದಿಗೆ ಗೆಲುವು ಸಾಧಿಸಿದ್ದರು.
Hardik Patel's parents pray as voting for second phase of #GujaratElection2017 begins pic.twitter.com/YZAaAtMWL6
— ANI (@ANI) December 14, 2017
93 ಸ್ಥಾನಗಳಲ್ಲಿ ಮತದಾನ
ಏತನ್ಮಧ್ಯೆ, ಎರಡನೇ ಮತ್ತು ಅಂತಿಮ ಹಂತದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 14 ಜಿಲ್ಲೆಗಳಲ್ಲಿ 93 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ, ಉತ್ತರ ಗುಜರಾತ್ನಲ್ಲಿ 53 ಸ್ಥಾನಗಳು ಮತ್ತು ಮಧ್ಯ ಗುಜರಾತ್ನಲ್ಲಿ 40 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೇಟ್ಲಿ, ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್, ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಾಘೇಲಾ, ಮಾಜಿ ಮುಖ್ಯಮಂತ್ರಿ ಪಟೇಲ್ ತಮ್ಮ ತಮ್ಮ ಮತಗಳನ್ನು ಚಲಾಯಿಸಿದರು.
ಅಂತಿಮ ಹಂತದಲ್ಲಿ 851 ಅಭ್ಯರ್ಥಿಗಳು ಕಣದಲ್ಲಿದ್ದು, 2.22 ಕೋಟಿ ಮತದಾರರಿಂದ ಅದೃಷ್ಟ ಪರೀಕ್ಷೆ ನಡೆಯುತ್ತಿದೆ. ಕೊನೆಯ ಹಂತದ ಮತದಾನ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು, ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.