Breaking News: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಗುಲಾಂ ನಬಿ ಆಜಾದ್!

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದ್ದಾರೆ.

Written by - Zee Kannada News Desk | Last Updated : Aug 26, 2022, 12:15 PM IST
  • ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೂ ಗುಲಾಂ ನಬಿ ಆಜಾದ್ ರಾಜೀನಾಮೆ
  • ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಉದ್ದೇಶಿಸಿ 5 ಪುಟಗಳ ಪತ್ರ
  • ಕಾಂಗ್ರೆಸ್‌ನೊಂದಿಗಿನ ಅರ್ಧ ಶತಮಾನದ ಹಳೆಯ ಒಡನಾಟ ಕಡಿದುಕೊಳ್ಳಲು ನಿರ್ಧರಿಸಿದ್ದೇನೆಂದ ಅಜಾದ್
Breaking News: ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಗುಲಾಂ ನಬಿ ಆಜಾದ್! title=
ಗುಲಾಂ ನಬಿ ಆಜಾದ್ ರಾಜೀನಾಮೆ

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ಪ್ರಾಥಮಿಕ ಸದಸ್ಯತ್ವ ಸೇರಿದಂತೆ ತಮ್ಮ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ 5 ಪುಟಗಳ ಪತ್ರ ಬರೆದಿರುವ ಅವರು, ‘ಸದ್ಯದ ಕಾಂಗ್ರೆಸ್‌ನ ಪರಿಸ್ಥಿತಿ ಮತ್ತೆ ಸುಧಾರಿಸದ ಹಂತವನ್ನು ತಲುಪಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Jammu Kashmir : ಕಾಶ್ಮೀರದಲ್ಲಿ ಸೆರೆ ಸಿಕ್ಕ ಉಗ್ರ.. ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ಕೊಟ್ಟ ಸಾಕ್ಷ್ಯ

‘ಇಡೀ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಒಂದು ಪ್ರಹಸನ ಮತ್ತು ನೆಪವಾಗಿದೆ. ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಂಘಟನೆಯ ಮಟ್ಟದಲ್ಲಿ ಚುನಾವಣೆ ನಡೆದಿಲ್ಲ. 24 ಅಕ್ಬರ್ ರಸ್ತೆಯಲ್ಲಿ ಕುಳಿತು ಎಐಸಿಸಿ ನಡೆಸುತ್ತಿರುವ ಕೂಟವು ಸಿದ್ಧಪಡಿಸಿದ ಪಟ್ಟಿಗಳಿಗೆ ಸಹಿ ಹಾಕಲು ಎಐಸಿಸಿಯ ಕೈಯಿಂದ ಆಯ್ಕೆಯಾದ ಲೆಫ್ಟಿನೆಂಟ್‌ಗಳನ್ನು ಒತ್ತಾಯಿಸಲಾಗಿದೆ ಎಂದು ಆಜಾದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿಯವರ ರಾಜಕೀಯ ಪ್ರವೇಶದ ನಂತರ ವಿಶೇಷವಾಗಿ 2013ರಲ್ಲಿ ಅವರು ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ, ‘ಮೊದಲು ಅಸ್ತಿತ್ವದಲ್ಲಿದ್ದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನೇ ಅವರು ಕೆಡವಿಹಾಕಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Modi Security Breach : ಪಂಜಾಬ್​​ನಲ್ಲಿ ಪ್ರಧಾನಿ ಭದ್ರತೆ ಲೋಪ : ಸುಪ್ರೀಂಗೆ ಸಲ್ಲಿಸಿದ ವರದಿಯಲ್ಲಿ ಹೊರಬಿತ್ತು ಸತ್ಯ 

‘ಪಕ್ಷದಲ್ಲಿ ಎಲ್ಲಾ ಹಿರಿಯ ಮತ್ತು ಅನುಭವಿ ನಾಯಕರನ್ನು ಬದಿಗಿರಿಸಲಾಯಿತು ಮತ್ತು ಅನನುಭವಿ ಸಿಕೋಫಂಟ್‌ಗಳ ಹೊಸ ಕೂಟವು ಪಕ್ಷದ ವ್ಯವಹಾರಗಳನ್ನು ನಡೆಸಲು ಪ್ರಾರಂಭಿಸಿತು’ ಎಂದು ಅಜಾದ್ ಬೇಸರ ವ್ಯಕ್ತಪಡಿಸಿದ್ದಾರೆ.   

‘ಪಕ್ಷಕ್ಕಾಗಿ ತಾವು ಸಲ್ಲಿಸಿದ ಸೇವೆಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಆಜಾದ್, ‘ಅತ್ಯಂತ ವಿಷಾದ ಮತ್ತು ಅತ್ಯಂತ ಭಾರದ ಹೃದಯದಿಂದ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ನನ್ನ ಅರ್ಧ ಶತಮಾನದ ಹಳೆಯ ಒಡನಾಟವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.

Trending News