ಮದುವೆಯಲ್ಲಿ ಈರುಳ್ಳಿ ಹಾರ ಬದಲಾಯಿಸಿಕೊಂಡ ವಧು-ವರ!

ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಈರುಳ್ಳಿಯದ್ದೇ ಸುದ್ದಿ. ಅದು ಎಷ್ಟರ ಮಟ್ಟಿಗೆ ಎಂದರೆ ಮದುವೆ ಮನೆಯಲ್ಲೂ ಅದೇ ಸುದ್ದಿ. ಇದೇನು ಮದುವೆ ಮನೆಯಲ್ಲಿ ಈರುಳ್ಳಿ ಬಳಸಲ್ವಾ. ಇದ್ಯಾಕ್ ಹೀಗೆ ಹೇಳ್ತೀದಾರೆ ಅಂತ ಯೋಚನೆ ಮಾಡ್ತಾ ಇದ್ದೀರಾ...

Last Updated : Dec 14, 2019, 12:52 PM IST
ಮದುವೆಯಲ್ಲಿ ಈರುಳ್ಳಿ ಹಾರ ಬದಲಾಯಿಸಿಕೊಂಡ ವಧು-ವರ! title=

ವಾರಣಾಸಿ: ಮದುವೆಯಲ್ಲಿ ಸಾಮಾನ್ಯವಾಗಿ ವಧು-ವರರು ಹೂವಿನ ಹಾರ ಬದಲಾಯಿಸಿಕೊಳ್ಳುವುದು ಸಂಪ್ರದಾಯ. ಆದರೆ, ವಾರಣಾಸಿಯಲ್ಲಿ ದಂಪತಿಗಳು ತಮ್ಮ ಮದುವೆಯ ದಿನದಂದು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು, ಇದು ಭಾರತೀಯ ಪದ್ಧತಿ. ಆದರೆ ಈ ಮದುವೆಯಲ್ಲಿ ಆದರೆ ಹೂವುಗಳಿಗೆ ಬದಲಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಲೆಯನ್ನು ವಿನ್ಯಾಸಗೊಳಿಸಲಾಗಿತ್ತು.

ಈ ಜೋಡಿ ಈರುಳ್ಳಿಯ ಹೆಚ್ಚಿನ ಬೆಲೆಗಳನ್ನು ವಿರೋಧಿಸಲು ಬಯಸಿದೆ. ಇದೇ ವೇಳೆ ಮದುವೆಗೆ ಹಾಜರಾದ  ಅತಿಥಿಗಳು ನವವಿವಾಹಿತರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮೌಲ್ಯಯುತವಾಗಿರುವ ವಸ್ತುವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದರು.!

ಈ ಘಟನೆ ಬಗ್ಗೆ ಮಾತನಾಡಿರುವ ಸಮಾಜವಾದಿ ಪಕ್ಷದ ಕಮಲ್ ಪಟೇಲ್, "ಕಳೆದ ಒಂದು ತಿಂಗಳಿನಿಂದ ಈರುಳ್ಳಿಯ ಬೆಲೆಗಳು ಆಕಾಶವನ್ನು ಮುಟ್ಟುತ್ತಿವೆ, ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 120 ರೂ.ಗೆ ಏರಿದೆ. ಆದ್ದರಿಂದ ಈಗ ಜನರು ಈರುಳ್ಳಿಯನ್ನು ಚಿನ್ನದಂತೆ ಅಮೂಲ್ಯವೆಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. ಈ ಮದುವೆಯಲ್ಲಿ ವಧು-ವರರು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಹಾರವನ್ನು ಬಳಸಿದ್ದಾರೆ" ಎಂದು ಹೇಳಿದರು.

ಹೊಸ ದಂಪತಿಗಳು ಈರುಳ್ಳಿಯ ಹೆಚ್ಚಿನ ಬೆಲೆಯನ್ನು ವಿರೋಧಿಸಲು ಬಯಸಿದ್ದಾರೆ. ಹೀಗಾಗಿ ಮಧುವೆಯಲ್ಲಿ ಈ ವಿಶಿಷ್ಟ ವಿಧಾನವನ್ನು ಬಳಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಮತ್ತೊಬ್ಬ ಮುಖಂಡ ಸತ್ಯ ಪ್ರಕಾಶ್ ಹೇಳಿದ್ದಾರೆ.

"ವಧು-ವರರು ಈರುಳ್ಳಿ ಮತ್ತು ಇತರ ಆಹಾರ ಪದಾರ್ಥಗಳು ದಿನೇ ದಿನೇ ಗಗನಕ್ಕೇರುತ್ತಿರುವುದನ್ನು ವಿರೋಧಿಸುವ ಮೂಲಕ ಸಂದೇಶವನ್ನು ನೀಡಲು ಪ್ರಯತ್ನಿಸಿದ್ದಾರೆ. ರಾಜ್ಯದಲ್ಲಿ ದಿನ ನಿತ್ಯದ ಪದಾರ್ಥಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವ ವಿರುದ್ಧ ಸಮಾಜವಾದಿ ಪಕ್ಷವು ಹಲವಾರು ಪ್ರತಿಭಟನೆಗಳನ್ನು ನಡೆಸಿದೆ" ಎಂದು ಅವರು ಹೇಳಿದರು.
 

Trending News