ಬಿಎಸ್ಎನ್ಎಲ್ ಬಂಪರ್ ಕೊಡುಗೆ; 149 ರೂ.ಗೆ ಪ್ರತಿನಿತ್ಯ 4ಜಿಬಿ ಡಾಟಾ!

ಬಿಎಸ್ಎನ್ಎಲ್ ನೀಡಿರುವ 149ರೂ. ಪ್ಲಾನ್ ನಲ್ಲಿ ಪ್ರತಿನಿತ್ಯ 4 ಜಿಬಿ ಡಾಟಾ ದೊರೆಯಲಿದೆ.

Updated: Jun 13, 2018 , 05:52 PM IST
ಬಿಎಸ್ಎನ್ಎಲ್ ಬಂಪರ್ ಕೊಡುಗೆ; 149 ರೂ.ಗೆ ಪ್ರತಿನಿತ್ಯ 4ಜಿಬಿ ಡಾಟಾ!

ನವದೆಹಲಿ: ರಿಲಯನ್ಸ್ Jio ಮತ್ತು ಏರ್ ಟೆಲ್ ಟೆಲಿಕಾಂ ಕಂಪನಿಗಳು 149 ರೂ.ಗಳ ವಿಶೇಷ ಪ್ಲಾನ್ ಲಾಂಚ್ ಮಾಡಿದ ಬೆನ್ನಲ್ಲೇ, ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಬಂಪರ್ ಕೊಡುಗೆ ಘೋಷಿಸಿದೆ. 

ಫಿಫಾ ವಿಶ್ವಕಪ್ ಪುಟ್ಬಾಲ್ ಅಭಿಮಾನಿಗಳು ಪಂದ್ಯಾವಳಿಯ ನೇರ ಪ್ರಸಾರ ವೀಕ್ಷಿಸಲು ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಬಿಎಸ್ಎನ್ಎಲ್ ವಿಶೇಷ ಪ್ಯಾಕ್ FIFA World Cup Special Data STV 149 ಪ್ಲಾನ್ ಲಾಂಚ್ ಮಾಡಿದೆ. ಈ ಪ್ಲಾನ್ ಲಾಂಚ್ ಮಾಡುವ ಒಂದು ದಿನ ಮುಂಚಿತವಾಗಿ ರಿಲಯನ್ಸ್ ಕಂಪನಿ ಎಲ್ಲಾ ಪ್ರೀಪೇಯ್ಡ್ ಗ್ರಾಹಕರಿಗೆ ಪ್ರತಿನಿತ್ಯ ಹೆಚ್ಚುವರಿ 1.5 ಜಿಬಿ ಡಾಟಾ ನೀಡುವುದಾಗಿ ಘೋಷಿಸಿದೆ. 

FIFA ವಿಶ್ವ ಕಪ್ ವಿಶೇಷ STV 149 ಪ್ಲಾನ್ಗೆ ಕಂಪನಿಯು 149 ರೂ.ಗಳ ಆಕರ್ಷಕ ಬೆಲೆ ನಿಗದಿಗೊಳಿಸಿದೆ. ಈ ಕೊಡುಗೆ ಜೂನ್ 14 ರಿಂದ ಜುಲೈ 15ರವರೆಗೆ ಮಾತ್ರ ಅನ್ವಯವಾಗಲಿದ್ದು, ಫುಟ್ಬಾಲ್ ಪ್ರಿಯರಿಗೆ ಪ್ರತಿನಿತ್ಯ 4 ಜಿಬಿ ಡಾಟಾ ದೊರೆಯಲಿದೆ. ಈ ಸೌಲಭ್ಯವನ್ನು ದೆಹಲಿ ಮತ್ತು ಮುಂಬೈ ಗ್ರಾಹಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳ ಗ್ರಾಹಕರು ಪಡೆಯಬಹುದು. ಬಿಎಸ್ಎನ್ಎಲ್ ನೀಡಿರುವ 149ರೂ. ಪ್ಲಾನ್ ನಲ್ಲಿ ಪ್ರತಿನಿತ್ಯ 4 ಜಿಬಿ ಡಾಟಾ ಮಾತ್ರ ದೊರೆಯಲಿದ್ದು, ಕರೆ ಮತ್ತು ಎಸ್ಎಂಎಸ್ ಸೌಲಭ್ಯಗಳು ಇರುವುದಿಲ್ಲ. ಅದಕ್ಕಾಗಿ ನೀವು ಪ್ರತ್ಯೇಕ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬೇಕು.

ಉಳಿದಂತೆ ಜಿಯೋ 149 ರೂ.ಗಳ ಪ್ಯಾಕ್ ನಲ್ಲಿ ಪ್ರತಿದಿನ 3 ಜಿಬಿ ಡಾಟಾ ಅಂಟ್ಟು ಏರ್ಟೆಲ್ 1 ಜಿಬಿ ಡಾಟಾ ನೀಡುತ್ತಿವೆ. ಇದರೊಂದಿಗೆ 28 ದಿನಗಳ ವ್ಯಾಲಿಡಿಟಿ ಜೊತೆ ನಿಮಗೆ ಉಚಿತ ಕರೆ ಮತ್ತು 100 ಎಸ್ಎಂಎಸ್ ಸೌಲಭ್ಯವೂ ದೊರೆಯಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ ರಿಚಾರ್ಜ್ ಮಾಡಿಸುವ ಅವಶ್ಯಕತೆಯಿಲ್ಲ.