ಉಪಚುನಾವಣೆಗೆ ಬಿಎಸ್‌ಪಿ ರಣತಂತ್ರ; ಮಾಯಾವತಿ ಮಹತ್ವದ ಸಭೆ

ಉತ್ತರಪ್ರದೇಶ ವಿಧಾನಸಭೆ ಉಪಚುನಾವಣೆ ಸಿದ್ಧತೆ ಹಾಗೂ ಪಕ್ಷ ಬಲವರ್ಧನೆಗೆ ಸಂಬಂಧಿಸಿದಂತೆ ಪಕ್ಷದ ಪದಾಧಿಕಾರಿಗಳೊಂದಿಗೆ ಮಾಯಾವತಿ ಸಭೆ ನಡೆಸಿದರು. 

Updated: Sep 5, 2019 , 02:54 PM IST
ಉಪಚುನಾವಣೆಗೆ ಬಿಎಸ್‌ಪಿ ರಣತಂತ್ರ; ಮಾಯಾವತಿ ಮಹತ್ವದ ಸಭೆ

ಲಕ್ನೋ: ಬಹುಜನ ಸಮಾಜ ಪಕ್ಷದ ಸುಪ್ರೀಮೋ ಮಾಯಾವತಿ ಅವರು ಗುರುವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪಕ್ಷದ ಪರಿಶೀಲನಾ ಸಭೆ ನಡೆಸಿದರು. 

ಉತ್ತರಪ್ರದೇಶ ವಿಧಾನಸಭೆ ಉಪಚುನಾವಣೆ ಸಿದ್ಧತೆ ಹಾಗೂ ಪಕ್ಷ ಬಲವರ್ಧನೆಗೆ ಸಂಬಂಧಿಸಿದಂತೆ ಪಕ್ಷದ ಪದಾಧಿಕಾರಿಗಳೊಂದಿಗೆ ಮಾಯಾವತಿ ಸಭೆ ನಡೆಸಿದರು. ಇದೇ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲಾ ಕಾರ್ಯಕರ್ತರೂ ಶ್ರಮಿಸುವಂತೆ ಮಾಯಾವತಿ ಕರೆ ನೀಡಿದರು.

ರಾಷ್ಟ್ರಮಟ್ಟದಲ್ಲಿರುವಂತೆಯೇ ರಾಜ್ಯದಲ್ಲಿಯೂ ಮೂವರು ಸಂಯೋಜಕರನ್ನು ನೇಮಿಸುವುದಾಗಿ ಹೇಳಿದ ಮಾಯಾವತಿ, ಪಕ್ಷದ ಮೂರು ಮಂಡಲ್‌ಗಳಲ್ಲಿ ಮುಖ್ಯ ವಲಯದ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಸಹ ರದ್ದುಪಡಿಸಲಾಗಿದೆ. ಈಗ ಪ್ರತಿ ವಿಭಾಗದಲ್ಲೂ ಸಂಯೋಜಕರ ವ್ಯವಸ್ಥೆ ಜಾರಿಗೆ ಬರಲಿದ್ದು, ಬಹುಜನ ಸ್ವಯಂಸೇವಕ ದಳದ ಮಂಡಲ್ ಅಧ್ಯಕ್ಷ ಹುದ್ದೆಯನ್ನೂ ಸಹ ಪಕ್ಷ ರದ್ದುಪಡಿಸಲಾಗಿದೆ ಎಂದು ಮಾಯಾವತಿ ತಿಳಿಸಿದರು.

ಮಾಹಿತಿಯ ಪ್ರಕಾರ, ರಾಜ್ಯ ಮಟ್ಟದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಕುಶ್ವಾಹ, ರಾಜ್ಯ ಅಧ್ಯಕ್ಷ ಮುಂಕಾದ್ ಅಲಿ ಮತ್ತು ಎಂ.ಎಲ್.ಸಿ ಭೀಮರಾವ್ ಅಂಬೇಡ್ಕರ್ ಅವರನ್ನು ಸಂಯೋಜಕರನ್ನಾಗಿ ನೇಮಿಸಲಾಗಿದೆ.

ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಯಾವತಿ, ದೇಶದ ಆರ್ಥಿಕತೆಯ ಪರಿಸ್ಥಿತಿ ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಬಡತನ ಮತ್ತು ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ತಪ್ಪು ನೀತಿಗಳು ಮತ್ತು ವೈಫಲ್ಯಗಳಿಂದಾಗಿ ದೇಶ ಇಂದು ದುಸ್ಥಿತಿ ತಲುಪಿದೆ. ಇದೀಗ ಬಿಜೆಪಿ ಸರ್ಕಾರ ಸಹ ಅದೇ ತಪ್ಪುಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.