By-Elections:ಲೋಕಸಭೆಯ 3 ಹಾಗೂ ವಿಧಾನಸಭೆಯ 29 ಸ್ಥಾನಗಳಿಗೆ ನಾಳೆ ಉಪಚುನಾವಣೆ, ಎಲ್ಲೆಲ್ಲಿ ಮತದಾನ?

By-Elections: ದಾದ್ರಾ ಮತ್ತು ನಗರ ಹವೇಲಿ, ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Written by - Nitin Tabib | Last Updated : Oct 29, 2021, 10:28 PM IST
  • ನಾಳೆ ದೇಶದ ಒಟ್ಟು 3 ಲೋಕಸಭೆ, 29 ವಿಧಾನಸಭೆ ಸ್ಥಾನಗಳಿಗೆ ಬೈಇಲೆಕ್ಷನ್.
  • ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ವಿಧಾನ ಸಭೆ ಸ್ಥಾನಗಳಿಗೂ ನಾಳೆ ಮತದಾನ.
  • ಮತದಾನ ಪ್ರಕ್ರಿಯೆ ನಾಳೆ ಬೆಳಗ್ಗೆ 7 ರಿಂದ ಸಾಯಂಕಾಲ 7ರವರೆಗೆ ನಡೆಯಲಿದೆ.
By-Elections:ಲೋಕಸಭೆಯ 3 ಹಾಗೂ ವಿಧಾನಸಭೆಯ 29 ಸ್ಥಾನಗಳಿಗೆ ನಾಳೆ ಉಪಚುನಾವಣೆ, ಎಲ್ಲೆಲ್ಲಿ ಮತದಾನ? title=
By-Elections (File Photo)

By-Elections: ದೇಶದ ದಾದ್ರಾ ಮತ್ತು ನಗರ ಹವೇಲಿ ಸೇರಿದಂತೆ ಲೋಕಸಭೆಯ (Lok Sabha) 3 ಸ್ಥಾನಗಳು ಹಾಗೂ 13 ರಾಜ್ಯಗಳ ಒಟ್ಟು  29 ವಿಧಾನಸಭೆಯ (Assembly Election)  ಸ್ಥಾನಗಳಿಗೆ ಶನಿವಾರ ಉಪಚುನಾವಣೆ ನಡೆಯಲಿದೆ. ಮತದಾನ ಪ್ರಕ್ರಿಯೆಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳ ಜೊತೆಗೆ, ಕೋವಿಡ್ ತಡೆಗಟ್ಟುವಿಕೆಗೆ ಕ್ರಮಗಳನ್ನು ಸಹ ಖಾತ್ರಿಪಡಿಸಲಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (INC) ನಡುವೆಯೇ ನೇರ ಪೈಪೋಟಿ ನಡೆಯಲಿದೆ.

ಮೂರು ಲೋಕಸಭೆ ಹಾಗೂ 29 ವಿಧಾನಸಭೆ ಸ್ಥಾನಗಳಿಗೆ ಉಪಚುನಾವಣೆ
ದಾದ್ರಾ ಮತ್ತು ನಗರ ಹವೇಲಿ (Dadra And Nagar Haveli), ಹಿಮಾಚಲ ಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದೆ ವೇಳೆ ಉಪಚುನಾವಣೆ ನಡೆಯಲಿರುವ 29 ವಿಧಾನಸಭಾ ಸ್ಥಾನಗಳಲ್ಲಿ, ಅಸ್ಸಾಂನಲ್ಲಿ ಐದು, ಪಶ್ಚಿಮ ಬಂಗಾಳದಲ್ಲಿ ನಾಲ್ಕು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಮೂರು, ಬಿಹಾರ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ತಲಾ ಎರಡು ಮತ್ತು ಆಂಧ್ರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ ಮತ್ತು ತೆಲಂಗಾಣದಲ್ಲಿ ತಲಾ ಒಂದು ಸ್ಥಾನ ಶಾಮೀಲಾಗಿವೆ. ನವೆಂಬರ್ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಇದನ್ನೂ ಓದಿ-Karnataka Govt : ಸಾರ್ವಜನಿಕರ ಕುಂದುಕೊರತೆ ಪರಿಹರಿಸಲು ರಾಜ್ಯ ಸರ್ಕಾರದಿಂದ 'ಮಲ್ಟಿ-ಪ್ಲಾಟ್ ಫಾರ್ಮ್ ವ್ಯವಸ್ಥೆ' 

ನಾಗಾಲ್ಯಾಂಡ್‌ನ ಶಾಮತೋರ್-ಚೆಸೋರ್ ವಿಧಾನಸಭಾ ಸ್ಥಾನಕ್ಕೂ ಉಪಚುನಾವಣೆ ಘೋಷಣೆಯಾಗಿದೆ. ಆದರೆ, ಪ್ರಾದೇಶಿಕ ಪಕ್ಷವಾದ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಅಭ್ಯರ್ಥಿಯನ್ನು ಅಕ್ಟೋಬರ್ 13 ರಂದು ಅವಿರೋಧವಾಗಿ ವಿಜೇತ ಎಂದು ಅಲ್ಲಿ ಘೋಷಿಸಲಾಗಿದೆ. ಸದಸ್ಯರ ನಿಧನದಿಂದ ಮೂರು ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇದೇ ವೇಳೆ ಕೆಲವು ವಿಧಾನಸಭಾ ಸ್ಥಾನಗಳಲ್ಲಿ ಶಾಸಕರ ನಿಧನದಿಂದ ಸ್ಥಾನ ತೆರವಾದರೆ, ಹಲವು ಸ್ಥಾನಗಳಲ್ಲಿ ಗೆದ್ದ ಅಭ್ಯರ್ಥಿ ರಾಜೀನಾಮೆಯಿಂದ ಸ್ಥಾನ ತೆರವಾಗಿದೆ. ಸದ್ಯ ಮತದಾನ ನಡೆಯುವ ಕಡೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸಮಾಜ ಕಂಟಕ ಶಕ್ತಿಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ.

ಇದನ್ನೂ ಓದಿ-ರಾಜಕೀಯ ಏಳಿಗೆಗಾಗಿ ಸಿದ್ದರಾಮಯ್ಯರಿಂದ ಹಿಂದೂ ಧರ್ಮ ಒಡೆಯುವ ಪ್ರಯತ್ನ: ಬಿಜೆಪಿ

ಕರ್ನಾಟಕದ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಈ ಉಪಚುನಾವಣೆ ಸವಾಲಿನ ಪ್ರಶ್ನೆಯೇ ಎಂದು ಬಿಂಬಿಸಲಾಗಿದೆ.  ಮತದಾನ ಪ್ರಕ್ರಿಯೆ ನಾಳೆ ಬೆಳಗ್ಗೆ 7 ರಿಂದ ಸಾಯಂಕಾಲ 7ರವರೆಗೆ ನಡೆಯಲಿದೆ. ಸಿಂದಗಿ ಚುನಾವಣಾ ಕಣದಲ್ಲಿ ಒಟ್ಟು 6 ಅಭ್ಯರ್ಥಿಗಳಿದ್ದು, ಮತದಾನಕ್ಕಾಗಿ ಜಿಲ್ಲಾಡಳಿತ  ಒಟ್ಟು 291 ಮತಗಟ್ಟೆಗಳನ್ನು ಸ್ಥಾಪಿಸಿದೆ.

ಇದನ್ನೂ ಓದಿ- By-Elections: ಮೂರು ಲೋಕಸಭೆ ಮತ್ತು 30 ವಿಧಾನಸಭೆಯ ಸ್ಥಾನಗಳಿಗೆ ಅಕ್ಟೋಬರ್ 30ರಂದು ಮತದಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News