By-Elections: ಮೂರು ಲೋಕಸಭೆ ಮತ್ತು 30 ವಿಧಾನಸಭೆಯ ಸ್ಥಾನಗಳಿಗೆ ಅಕ್ಟೋಬರ್ 30ರಂದು ಮತದಾನ

By-Elections: ಲೋಕಸಭೆಯ (Lok Sabha) ಮೂರು ಸ್ಥಾನಗಳು ಮತ್ತು ದೇಶದಲ್ಲಿ ಖಾಲಿ ಇರುವ 30 ವಿಧಾನಸಭೆ (Vidhan Sabha) ಸ್ಥಾನಗಳ ಉಪಚುನಾವಣೆಗೆ  ದಿನಾಂಕ ಘೋಷಿಸಲಾಗಿದೆ

Written by - Nitin Tabib | Last Updated : Sep 28, 2021, 11:52 AM IST
  • 3 ಲೋಕಸಭೆ 30 ವಿಧಾನಸಭೆ ಸ್ಥಾನಗಳಿಗೆ ಮತದಾನ
  • ಅಕ್ಟೋಬರ್ 30 ರಂದು ನಡೆಯಲಿದೆ ಮತದಾನ.
  • ಈ ಕುರಿತು ಅಧಿಸೂಚನೆ ಹೊರಡಿಸಿದ ಕೇಂದ್ರ ಚುನಾವಣಾ ಆಯೋಗ.
By-Elections: ಮೂರು ಲೋಕಸಭೆ ಮತ್ತು 30 ವಿಧಾನಸಭೆಯ ಸ್ಥಾನಗಳಿಗೆ ಅಕ್ಟೋಬರ್ 30ರಂದು ಮತದಾನ title=
By-Elections (File Photo)

By-Elections: ಲೋಕಸಭೆಯ (Lok Sabha) ಮೂರು ಸ್ಥಾನಗಳು ಮತ್ತು ದೇಶದಲ್ಲಿ ಖಾಲಿ ಇರುವ 30 ವಿಧಾನಸಭೆ (Vidhan Sabha) ಸ್ಥಾನಗಳ ಉಪಚುನಾವಣೆಗೆ  ದಿನಾಂಕ ಘೋಷಿಸಲಾಗಿದೆ. ಈ ಕುರಿತು ಚುನಾವಣಾ ಆಯೋಗ  (Election Commission Of India) ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ಈ ಎಲ್ಲ ಸ್ಥಾನಗಳಿಗೆ ಅಕ್ಟೋಬರ್ 30 ರಂದು ಚುನಾವಣೆ ನಡೆಯಲಿದೆ ಎಂದು ಹೇಳಿದೆ. ಉಪಚುನಾವಣೆ (By-Poll) ನಡೆಯಲಿರುವ ಮೂರು ಲೋಕಸಭಾ ಸ್ಥಾನಗಳಲ್ಲಿ ದಾದ್ರಾ ನಗರ ಹವೇಲಿ, ಮಧ್ಯಪ್ರದೇಶದ ಖಾಂಡ್ವಾ ಮತ್ತು ಹಿಮಾಚಲ ಪ್ರದೇಶದ ಮಂಡಿ ಶಾಮೀಲಾಗಿವೆ.

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳಿಗೆ ಮತದಾನ?
ಇದರಲ್ಲಿ ಆಂಧ್ರಪ್ರದೇಶದ ಒಂದು, ಅಸ್ಸಾಂನಲ್ಲಿ 5, ಬಿಹಾರದಲ್ಲಿ ಎರಡು, ಹರಿಯಾಣದಲ್ಲಿ ಒಂದು, ಹಿಮಾಚಲ ಪ್ರದೇಶದಲ್ಲಿ 3, ಕರ್ನಾಟಕದಲ್ಲಿ 2, ಮಧ್ಯಪ್ರದೇಶದಲ್ಲಿ 3, ಮಹಾರಾಷ್ಟ್ರದಲ್ಲಿ ಒಂದು, ಮೇಘಾಲಯದಲ್ಲಿ 3, ನಾಗಾಲ್ಯಾಂಡಿನಲ್ಲಿ ಒಂದು, ರಾಜಸ್ಥಾನದಲ್ಲಿ ಎರಡು , ತೆಲಂಗಾಣ. ಪಶ್ಚಿಮ ಬಂಗಾಳದ ಇನ್ನೊಂದು 4 ವಿಧಾನಸಭಾ ಸ್ಥಾನಗಳಿಗೆ  ಉಪಚುನಾವಣೆಗಳು ನಡೆಯಲಿವೆ.

ಇದನ್ನೂ ಓದಿ-Coronavirus: ಪಾಸ್‌ಪೋರ್ಟ್ ನಿಯಮಗಳಲ್ಲಿ ಬದಲಾವಣೆ, ಇಲ್ಲಿದೆ ಮಹತ್ವದ ಮಾಹಿತಿ

ಅಕಾಲಿಕ ನಿಧನದ ಬಳಿಕ ಖಾಲಿ ಉಳಿದ ಲೋಕಸಭೆಯ ಸ್ಥಾನಗಳು
ಇದೇ ವರ್ಷ ಫೆಬ್ರವರಿಯಲ್ಲಿ ದಾದ್ರಾ ನಗರದ ಹವೇಲಿ ಲೋಕಸಭಾ ಕ್ಷೇತ್ರದ ಮೋಹನ್ ಡೆಲ್ಕರ್ ಅವರ ಮೃತದೇಹ ಹೋಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ನಿಧನದಿಂದ ಈ ಸ್ಥಾನ ಖಾಲಿ ಉಳಿದಿದೆ. ಇದಲ್ಲದೇ, ಮಧ್ಯಪ್ರದೇಶದ ಖಾಂಡ್ವಾ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಕೂಡ ಈ ವರ್ಷದ ಮಾರ್ಚ್‌ನಲ್ಲಿ ನಿಧನರಾಗಿದ್ದಾರೆ. ಅವರು ಕೊರೊನಾದಿಂದ ಬಳಲಿದ್ದರು.ಇದೇ ವೇಳೆ  ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದ ರಾಮಸ್ವರೂಪ್ ಶರ್ಮಾ ಅವರ ಮೃತದೇಹವು ಅವರ ದೆಹಲಿಯ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ ಚೀನಾ

ಹರಿಯಾಣಾದ ಉಪಚುನಾವಣೆ ಬಿಜೆಪಿಗೆ ಸವಾಲು
ಹರಿಯಾಣಾದ ಎಲನಾಬಾದ್ ಸ್ಥಾನಕ್ಕೂ ಕೂಡ ಉಪಚುನಾವಣೆ ಘೋಷಣೆ ಮಾಡಲಾಗಿದೆ. ಈ ಕ್ಷೇತ್ರದಿಂದ INLD ಮುಖಂಡ ಅಭಯ್ ಚೌತಾಲಾ ಶಾಸಕರಾಗಿದ್ದರು. ಆದರೆ, ಅವರು ರೈತ ಚಳುವಳಿಗೆ ಬೆಂಬಲ ನೀಡಲು ಇದೆ ವರ್ಷ ರಾಜೀನಾಮೆ ನೀಡಿದ್ದರು. ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನ ಬಿಜೆಪಿಗೆ ದೊಡ್ಡ ಹಾನಿ ಉಂಟುಮಾಡಬಹುದು ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಹರಿಯಾಣದ ಈ ಸ್ಥಾನವು ಬಿಜೆಪಿಗೆ ಒಂದು ಸವಾಲಿನ ಪ್ರಶ್ನೆಯಾಗಿದೆ ಎಂದೇ ಹೇಳಬಹುದು.

ಇದನ್ನೂ ಓದಿ-ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ, 1 ಪ್ಯೂನ್ ಹುದ್ದೆಗೆ 15 ಲಕ್ಷಕ್ಕೂ ಹೆಚ್ಚು ಅರ್ಜಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News