ಉಪ ಚುನಾವಣಾ ಫಲಿತಾಂಶ 2018: ಬಿಜೆಪಿಗೆ ಒಟ್ಟು 15 ರಲ್ಲಿ 12 ಕ್ಷೇತ್ರಗಳಲ್ಲಿ ಹೀನಾಯ ಸೋಲು

    

Last Updated : May 31, 2018, 05:28 PM IST
ಉಪ ಚುನಾವಣಾ ಫಲಿತಾಂಶ 2018: ಬಿಜೆಪಿಗೆ ಒಟ್ಟು 15 ರಲ್ಲಿ 12 ಕ್ಷೇತ್ರಗಳಲ್ಲಿ ಹೀನಾಯ ಸೋಲು title=

ನವದೆಹಲಿ: ಕರ್ನಾಟಕದ  ಆರ್ ಆರ್ ನಗರದ  ಮುಂದೂಡಿದ  ಕ್ಷೇತ್ರ ಸೇರಿದಂತೆ ದೇಶದ ವಿವಿದ ರಾಜ್ಯಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. 

ಕೇಂದ್ರದಲ್ಲಿ ಆಡಳಿತರೂಡ ಪಕ್ಷವಾಗಿರುವ ಬಿಜೆಪಿ  4 ಲೋಕಸಭಾ, 10 ವಿಧಾನಸಭಾ ಸ್ಥಾನಗಳಲ್ಲಿ ಕೇವಲ  ಒಂದು ಲೋಕಸಭೆ ಹಾಗೂ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿದೆ. ಉಳಿದ 12 ಕ್ಷೇತ್ರಗಳು ಪ್ರತಿಪಕ್ಷಗಳ ಪಾಲಾಗಿವೆ. 

ಮಹಾರಾಷ್ಟ್ರದ ಪಾಲ್ಘರ್ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಉತ್ತರ ಪ್ರದೇಶದ ಕೈರಾನಾದಲ್ಲಿ ರಾಷ್ಟ್ರೀಯ ಲೋಕದಳ, ಮಹಾರಾಷ್ಟ್ರದ ಬಂಡಾರಾ-ಗೋಡಿಯಾದಲ್ಲಿ ಎನ್'ಸಿಪಿ ಜಯದ ಪತಾಕೆ ಹಾರಿಸಿದ್ದು, ನಾಗಲ್ಯಾಂಡ್ ಏಕೈಕ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿಕೂಟ ಪಕ್ಷ ಮುನ್ನಡೆ ಸಾಧಿಸಿವೆ. ಆ ಮೂಲಕ  ಇನ್ನು ಕೇವಲ ಒಂದು ವರ್ಷವಿರುವ ಲೋಕಸಭಾ ಚುನಾವಣೆಗೂ ಮುನ್ನವೇ  ಬಿಜೆಪಿಗೆ ಹಿನ್ನಡೆಯಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಈ ಮುಂಬರುವ ಚುನಾವಣೆಯಲ್ಲಿ ಎಲ್ಲ ಪ್ರತಿ ಪಕ್ಷಗಳು ಏಕತೆಯ ಮಂತ್ರವನ್ನು ಜಪಿಸಿದ್ದು ಅದಕ್ಕೆ ಪೂರಕವಾದ ಯಶಸ್ಸನ್ನು ಸಹ ಅವು ಗಳಿಸುತ್ತಿವೆ. ಇದು ನಿಜಕ್ಕೂ ಬಿಜೆಪಿಗೆ ಎಚ್ಚರಿಕೆಯ ಘಂತೆಯಾಗಿದೆ ಎಂದು ಹೇಳಬಹುದು.

ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ  ಚುನಾವಣೆಯಲ್ಲಿ ನೂರಪುರ್ -ಸಮಾಜವಾದಿ ಪಕ್ಷ ,ಪಾಲುಸ್ ಕಡೆಗಾಂ- ಕಾಂಗ್ರೆಸ್, ಜೋಕಿಹಾತ್- ಆರ್ಜೆಡಿ, ಚೆಂಗನ್ನೂರು- ಸಿಪಿಎಂ , ಶಾಕೊಟ್-ಕಾಂಗ್ರೆಸ್, ಸಿಲ್ಲಿ-ಜೆಎಂಎಂ, ಗೊಮಿಯ- ಜೆಎಂಎಂ, ರಾಜರಾಜೇಶ್ವರಿನಗರ-ಕಾಂಗ್ರೆಸ್, ಮಹೇಸ್ತಲಾ - ತೃಣಮೂಲ ಕಾಂಗ್ರೆಸ್, ಅಂಪತಿ - ಕಾಂಗ್ರೆಸ್, ತರಲಿ-ಬಿಜೆಪಿ ಗೆಲುವನ್ನು ಸಾಧಿಸಿದೆ.

Trending News