ಕುದುರೆಗೆ ನೀರು ಕುಡಿಸುವುದು ಹೇಗೆ?: ಪ್ರಧಾನಿ ಮೋದಿ ಕುಟುಕಿದ ಸ್ವಾಮಿ..!

ಅನೇಕ ಬಾರಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡುವ ಟ್ವೀಟ್ ಗಳಿಂದ ಬಿಜೆಪಿಗೆ ಕಸಿವಿಸಿ ಮತ್ತು ತೀವ್ರ ಮುಜುಗರವುಂಟಾಗಿದೆ.  

Written by - Puttaraj K Alur | Last Updated : Sep 18, 2021, 01:38 PM IST
  • ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಗೆ ಮತ್ತೊಮ್ಮೆ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ
  • ಕುದುರೆಗೆ ನೀರು ಕುಡಿಯುವಂತೆ ಮಾಡುವುದು ಹೇಗೆಂದು ಪ್ರಶ್ನಿಸಿ ಪ್ರಧಾನಿ ಮೋದಿ ಕುಟುಕಿದ ಬಿಜೆಪಿ ಹಿರಿಯ ನಾಯಕ
  • ದೇಶದ ಆರ್ಥಿಕ ಪರಿಸ್ಥಿತಿ ವಿಚಾರವಾಗಿ ಮತ್ತೊಮ್ಮೆ ಕೇಂದ್ರದ ವಿರುದ್ಧ ಸ್ವಾಮಿ ಟೀಕಾಪ್ರಹಾರ
ಕುದುರೆಗೆ ನೀರು ಕುಡಿಸುವುದು ಹೇಗೆ?: ಪ್ರಧಾನಿ ಮೋದಿ ಕುಟುಕಿದ ಸ್ವಾಮಿ..! title=
ಪ್ರಧಾನಿ ಮೋದಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ(Subramanian Swamy) ಮತ್ತೊಮ್ಮೆ ಕಿಡಿಕಾರಿದ್ದಾರೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಅವರು ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನಿಸಿದ್ದಾರೆ. ‘ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ..?’ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ(Narendra Modi)ಯವರಿಗೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕುಟುಕಿದ್ದಾರೆ.

‘ಪ್ರಸ್ತುತ ದೇಶದ ಆರ್ಥಿಕ ಅವ್ಯವಸ್ಥೆ(Indian Economy) ಸರಿಪಡಿಸಲು ಪ್ರಧಾನಿ ಮೋದಿಯವರಿಗೆ ಸಲಹೆ ನೀಡುವಂತೆ ಕೋರಿ ಇತ್ತೀಚಿನ ದಿನಗಳಲ್ಲಿ ನನಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ಅಂಗಡಿ ಮಾಲೀಕರು ಕೂಡ ನನಗೆ ಮಾಡಿ ಇದನ್ನೇ ಕೇಳುತ್ತಿದ್ದಾರೆ. ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ? ಎಂದು ನಾವು ಅವರೆಲ್ಲರಿಗೂ ಪ್ರಶ್ನಿಸುತ್ತಿದ್ದೇನೆ. ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ನಾನು ಇದುವರೆಗೆ ಮೋದಿಯವರಿಗೆ 12 ಪತ್ರಗಳನ್ನು ಬರೆದಿದ್ದೇನೆ. ಆದರೆ ಅವರು ನನ್ನ ಪತ್ರಗಳನ್ನು ಸ್ವೀಕರಿಸಿದ್ದಾರೆಯೇ ವಿನಃ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ’ ವೆಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Unbelievable!: ಆನ್‌ಲೈನ್ ಹರಾಜಿನಲ್ಲಿ 10 ಕೋಟಿ ರೂ. ಗಿಟ್ಟಿಸಿದ 1 ರೂ. ನಾಣ್ಯ..!

ಟ್ವಿಟರ್ ಬಳಕೆದಾರರೊಬ್ಬರು ಸುಬ್ರಮಣಿಯನ್ ಸ್ವಾಮಿ(Subramanian Swamy) ಅವರು ಪ್ರಧಾನಿ ಮೋದಿಯವರಿಗೆ 2015ರ ಸೆಪ್ಟೆಂಬರ್ 15ರಂದು ಬರೆದ ಪತ್ರವೊಂದನ್ನು ಲಗತ್ತಿಸಿದ್ದಾರೆ. ‘ಡಾ.ಸುಬ್ರಮಣಿಯನ್ ಸ್ವಾಮಿ 2015ರ ಸೆ.15ರಂದು ಪಿಎಂ ಮೋದಿಜೀಗೆ ಪತ್ರ ಬರೆದಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅವರು ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾರೆ. ಹಳ್ಳ ಹಿಡಿದಿರುವ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಮೋದಿಯವರಿಗೆ ಸ್ವಾಮಿಯವರು ಹಲವು ಉಪಯುಕ್ತ ಸಲಹೆ-ಸೂಚನೆಗಳನ್ನು ನೀಡಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ.  

ಇದನ್ನೂ ಓದಿ: 'ಇನ್ನೂ ಮುಂದೆ Swiggy ಮತ್ತು Zomato ಜಿಎಸ್ಟಿಯನ್ನು ಪಾವತಿಸಬೇಕು'

ಸುಬ್ರಮಣಿಯನ್ ಸ್ವಾಮಿ ಆಗಾಗ ತಮ್ಮದೇ ಪಕ್ಷದ ಸರ್ಕಾರ(BJP Govt.) ಮತ್ತು ನಾಯಕರ ವಿರುದ್ಧ ಟೀಕಾ ಪ್ರಹಾಯ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ವಿಧಾನಸಭೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರನ್ನು ಫ್ರೀಲ್ಯಾನ್ಸ್‌ ಪೊಲಿಟಿಷಿಯನ್‌ ಎಂದು ಕರೆದಿದಿದ್ದರು. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದ ಸ್ವಾಮಿ, ‘ಅಧಿಕಾರಕ್ಕಾಗಿ ಬೂಟು ನೆಕ್ಕುವ ರಾಜಕಾರಣ ನನ್ನದಲ್ಲ’ ಎಂದು ಕಿಡಿಕಾರಿದ್ದರು. ಸ್ವಾಮಿ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ‘ಸುಬ್ರಮಣಿಯನ್ ಸ್ವಾಮಿ ಚಿಂತಕ, ಅವರ ಟ್ವೀಟ್‌ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದ್ದರು. ಅನೇಕ ಬಾರಿ ಸುಬ್ರಮಣಿಯನ್ ಸ್ವಾಮಿ ಮಾಡುವ ಟ್ವೀಟ್ ಗಳಿಂದ ಬಿಜೆಪಿಗೆ ಕಸಿವಿಸಿ ಮತ್ತು ತೀವ್ರ ಮುಜುಗರವುಂಟಾಗಿದೆ.  

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News