ಇನ್ಮುಂದೆ ದೊಡ್ಡ ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ದುಬಾರಿಯಾಗಲಿದೆ

ಮುಂಬರುವ ದಿನಗಳಲ್ಲಿ ರೈಲುಗಳ ಮೂಲಕ ಪ್ರಯಾಣ ನಡೆಸುವುದು ಇನ್ನಷ್ಟು ದುಬಾರಿಯಾಗಲಿದೆ. ಝೀ ಮೀಡಿಯಾಗೆ ಸಿಕ್ಕ ಎಕ್ಸ್ ಕ್ಲೂಸಿವ್ ಮಾಹಿತಿಯ ಪ್ರಕಾರ, ದೊಡ್ಡ ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ಬೆಳೆಸುವ ಪ್ರಯಾಣಿಕರು ಇನ್ಮುಂದೆ ಸ್ಟೇಷನ್ ಯುಸರ್ ಫೀಸ್ (Station User Fees) ಭರಿಸಬೇಕಾಗಿದೆ.

Last Updated : Aug 24, 2020, 10:30 PM IST
ಇನ್ಮುಂದೆ ದೊಡ್ಡ ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ದುಬಾರಿಯಾಗಲಿದೆ title=

ನವದೆಹಲಿ: ಮುಂಬರುವ ದಿನಗಳಲ್ಲಿ ರೈಲುಗಳ ಮೂಲಕ ಪ್ರಯಾಣ ನಡೆಸುವುದು ಇನ್ನಷ್ಟು ದುಬಾರಿಯಾಗಲಿದೆ. ಝೀ ಮೀಡಿಯಾಗೆ ಸಿಕ್ಕ ಎಕ್ಸ್ ಕ್ಲೂಸಿವ್ ಮಾಹಿತಿಯ ಪ್ರಕಾರ, ದೊಡ್ಡ ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ಬೆಳೆಸುವ ಪ್ರಯಾಣಿಕರು ಇನ್ಮುಂದೆ ಸ್ಟೇಷನ್ ಯುಸರ್ ಫೀಸ್ (Station User Fees) ಭರಿಸಬೇಕಾಗಿದೆ. ಏರ್ಪೋರ್ಟ್ ಗಳಲ್ಲಿನ ಯುಸರ್ ಡೆವಲಪ್ಮೆಂಟ್ ಫೀಸ್ ಆಧಾರದ ಮೇಲೆ ರೈಲು ನಿಲ್ದಾನಗಳಲ್ಲಿಯೂ ಕೂಡ SUF ವಸೂಲಿ ಮಾಡಲಾಗುವುದು ಎನ್ನಲಾಗಿದೆ. ಏರ್ಪೋರ್ಟ್ ಗಳಲ್ಲಿ ಪ್ರಸ್ತುತ ಈ ಶುಲ್ಕ ರೂ.281 ನಿಗದಿಪಡಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಈ ಶುಲ್ಕ ವಸೂಲಾತಿಯಿಂದ ಟಿಕೆಟ್ ದರದಲ್ಲಿ ಏರಿಕೆಯಾಗಲಿದೆ.

ಯಾವಾಗ ಇದು ಜಾರಿಗೆ ಬರಲಿದೆ?
ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ರೈಲ್ವೆ ಸಚಿವಾಲಯವು ಈ ವರ್ಷದ ಅಂತ್ಯದ ವೇಳೆಗೆ ಅಂದರೆ ಡಿಸೆಂಬರ್ 2020 ರೊಳಗೆ ಈ ಕುರಿತು ನೋಟಿಫೈ ಮಾಡಲಿದೆ. ಖಾಸಗಿ ಕಂಪನಿಯವರು ದೊಡ್ಡ ರೈಲು ನಿಲ್ದಾಣಗಳನ್ನು ರೀಡೆವಲಪ್ಮೆಂಟ್ ಯೋಜನೆಯ ಅಡಿ ಹೊಸ ಹಾಗೂ ನವೀಕರಣಗೊಲಿಸುವಾಗ ಈ ಶುಲ್ಕವನ್ನು ವಸೂಲಿ ಮಾಡಲಾಗುವುದು ಎನ್ನಲಾಗಿದೆ. ಪುನರಾಭಿವೃದ್ಧಿ ಯೋಜನೆಯ ಅಡಿ ಅಭಿವೃದ್ಧಿಗೊಲಿಸಲಾಗುತ್ತಿರುವ ರೈಲು ನಿಲ್ದಾಣಗಳಲ್ಲಿ ಮುಂಬೈ, ಜೈಪುರ್, ಹಬೀಬ್ ಗಂಜ್, ಚಂಡೀಗಡ, ನಾಗಪುರ್, ಬಿಜವಾಸನ್, ಆನಂದ್ ವಿಹಾರ್ ಇತ್ಯಾದಿಗಳು ಶಾಮೀಲಾಗಿವೆ. ಈ ನಿಲ್ದಾಣಗಳಲ್ಲಿ ಸಮಯಕ್ಕೆ ರೈಲು ಪ್ರಯಾಣ ಬೆಳೆಸಲು ಬರುವ ಯಾತ್ರಿಗಳು ಯುಸರ್ ಡೆವಲಪ್ಮೆಂಟ್ ಫೀಸ್ ವಿಧಿಸಲಾಗುವುದು.

ಖಾಸಗಿ ಕಂಪನಿಗಳು ಲಾಭ ಗಳಿಸಲಿವೆ
ರೀಡೆವಲಪ್ಮೆಂಟ್ ಪ್ರಾಜೆಕ್ಟ್ ಅಡಿ ಸರ್ಕಾರ ನಿಲ್ದಾಣಗಳನ್ನು ನವೀಕರಿಸಿ, ಯಾತ್ರಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲು ಯೋಜನೆ ರೂಪಿಸಿದೆ. ಈ ಪ್ರಾಜೆಕ್ಟ್ ಗಳನ್ನು PPP ಅಡಿ ಸಿದ್ಧಗೊಳಿಸಲಾಗುತ್ತಿದೆ. ಇದರಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯನ್ನು ನಡೆಸುವ ಮೂಲಕ ಖಾಸಗಿ ಕಂಪನಿಗಳಿಗೆ ಈ ಜವಾಬ್ದಾರಿ ನೀಡಲಾಗುತ್ತಿದೆ. ಇದಕ್ಕೆ ಬದಲಾಗಿ ಖಾಸಗಿ ಕಂಪನಿಗಳು ಸ್ಟೇಷನ್ ಗಳ ಮೇಲೆ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳನ್ನು ನಿರ್ಮಿಸಿ, ಸ್ಟೇಷನ್ ಯುಸರ್ ಫೀಸ್ ರೂಪದಲ್ಲಿ ಗಳಿಕೆ ಮಾಡಲಿವೆ. ಮುಂಬೈನ ಐತಿಹಾಸಿಕ CTS ನಿಲ್ದಾಣದಲ್ಲಿಯೂ ಕೂಡ ರೇಲ್ವೆ ವಿಭಾಗ ಬಿಡ್ಡಿಂಗ್ ಪ್ರಕ್ರಿಯೆ ಆರಂಭಿಸಿದೆ.

Trending News